fbpx
ಕನ್ನಡ

ಡಬ್ಬಿಂಗ್ ವಿರೋಧಿಸಿದ ನಟ ಜಗ್ಗೇಶ್ , ವಾಟಾಳ್ ನಾಗರಾಜ್ ಹಾಗು ಸಾ.ರಾ ಗೋವಿಂದುರವರಿಗೆ ನೋಟೀಸ್ !

ಡಬ್ಬಿಂಗ್ ವಿರೋಧಿಸಿದ ನಟ ಜಗ್ಗೇಶ್ , ವಾಟಾಳ್ ನಾಗರಾಜ್ ಹಾಗು ಸಾ.ರಾ ಗೋವಿಂದುರವರಿಗೆ  ನೋಟೀಸ್ !

ಭಾರತೀಯ ಸ್ಪರ್ಧಾತ್ಮಕ ಆಯೋಗ ಪರ ಭಾಷ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಲು ಅವಕಾಶ ನೀಡಿತ್ತು ಆದರೆ ನಟ ಹಾಗು ಮಾಜಿ ಸಂಸದ ಜಗ್ಗೇಶ್ ರವರು , ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಸಾ.ರಾ ಗೋವಿಂದು ರವರು , ಮಾಜಿ ಸಂಸದ ಹಾಗು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ರವರು , ನಿರ್ದೇಶಕ ಎಂ ಎಸ್ ರಮೇಶ್‍ ಡಬ್ಬಿಂಗ್ ಅನ್ನು ವಿರೋಧಿಸಿ ತೀವ್ರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು .


ಮಾರ್ಚ್ನಲ್ಲಿ ಬಿಡುಗಡೆಯಾದ ತಮಿಳು ನಟ ಅಜಿತ್ ಅಭಿನಯದ ‘ಸತ್ಯ ದೇವ್ ಐಪಿಎಸ್’ ಚಿತ್ರ ಬಿಡುಗಡೆಯಾದ ಸಮಯದಲ್ಲಿ ಡಬ್ಬಿಂಗ್ ಬೇಕೋ ಬೇಡವೋ ಎಂಬ ಕಿಡಿ ವ್ಯಾಪಕವಾಗಿ ಹಬ್ಬಿತ್ತು ಇದೆ ಸಮಯದಲ್ಲಿ ವಾಟಾಳ್ ಪ್ರತಿಕ್ರಿಯೆ ನೀಡಿ  ‘ಡಬ್ಬಿಂಗ್ ಚಿತ್ರ ಬಿಡುಗಡೆಯಾದರೆ ಥಿಯೇಟರ್ ಗಳಿಗೆ ಬೆಂಕಿ ಇಡುತ್ತೇವೆ’  ಎಂಬ ಮಾತುಗಳನ್ನು ಸಹ ಇದೆ ಸಮಯದಲ್ಲಿ ಹೇಳಿದ್ದರು .

 

‘ಹೊರ ರಾಜ್ಯಗಳಲ್ಲಿ ಕನ್ನಡಿಗರನ್ನು ನಿಕೃಷ್ಟ ವಾಗಿ ಕಾಣುವರು ಆದರೆ ನಮ್ಮಲಿರುವ ಕೆಲವು ಕನ್ನಡಿಗರು ,ಕನ್ನಡ ದ್ರೋಹಕ್ಕೆ ಸಜ್ಜಾಗಿದ್ದಾರೆ , ಡಬ್ಬಿಂಗ್ ಬಂದರೆ ಸುಮಾರು ೬೦೦೦ ಕ್ಕೂ ಹೆಚ್ಚು ಕಾರ್ಮಿಕರು ಕೆಲಸವನ್ನು ಕಳೆದುಕೊಂಡು ಬೀದಿಗೆ ಬರುತ್ತಾರೆ ಆದ್ದರಿಂದ ಡಬ್ಬಿಂಗ್ ವಿರುದ್ಧ ಹೋರಾಡಬೇಕು’ ಎಂದು ಹೇಳಿದ್ದರು .

ಅಷ್ಟೇ ಅಲ್ಲದೆ ‘ಕನ್ನಡದಲ್ಲಿ ಗಂಡು ನಟರಿಲ್ಲವೇ?’ ಎಂಬ ಪ್ರತಿಕ್ರಿಯೆಯನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಡಿದ್ದರು

ಆದೇಶವನ್ನು ತಿರಸ್ಕರಿಸಿದ ಹಿನ್ನಲೆಯಲ್ಲಿ ಭಾರತೀಯ ಸ್ಪರ್ಧಾತ್ಮಕ ಆಯೋಗ ಜಗ್ಗೇಶ್ , ಸಾ.ರಾ ಗೋವಿಂದು ಹಾಗು ವಾಟಾಳ್ ನಾಗರಾಜ್ , ಎಂ ಎಸ್ ರಮೇಶ್‍ ರವರಿಗೆ ನೋಟೀಸ್ ಜಾರಿ ಗೊಳಿಸಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top