fbpx
ದೇವರು

ಅರಬ್ಬೀ ಸಮುದ್ರದಲ್ಲಿರುವ ದ್ವಾಪರ ಯುಗದ ಕಾಲದ ಶಿವನ ದೇವಸ್ಥಾನ ಭೇಟಿ ಕೊಟ್ರೆ ಕಷ್ಟಗಳೆಲ್ಲಾ ದೂರ ಆಗುತ್ತೆ ..

ಅರಬ್ಬೀ ಸಮುದ್ರದಲ್ಲಿರುವ ದ್ವಾಪರ ಯುಗದ ಕಾಲದ ಶಿವನ ದೇವಸ್ಥಾನ ಭೇಟಿ ಕೊಟ್ರೆ ಕಷ್ಟಗಳೆಲ್ಲಾ ದೂರ ಆಗುತ್ತೆ ..

ಅರಬ್ಬೀ ಸಮುದ್ರದಲ್ಲಿದೇ  ಶಿವನ ದೇವಸ್ಥಾನ. ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಮತ್ತು ಪಾಂಡವರು ಸಹ ಇಲ್ಲಿ  ಕುರುಕ್ಷೇತ್ರ ಯುದ್ಧದ ನಂತರ ತಮ್ಮ ಪಾಪವನ್ನು ಕಳೆದುಕೊಳ್ಳಲು ಪ್ರತ್ಯೇಕವಾಗಿ 5 ಶಿವ ಲಿಂಗವನ್ನು ಸ್ಥಾಪಿಸಿ  ಶಿವನ ಪೂಜೆ  ಮತ್ತು ತಪ್ಪಸ್ಸನ್ನು ಮಾಡಿದ್ದರು.

ಸಮುದ್ರದೊಳಗೊಂದು ಶಿವನ ದೇವಸ್ಥಾನ,ಸ್ವಯಂಭುವಾಗಿ ರೂಪಿತವಾದದ್ದು .ಸಾಕ್ಷಾತ್ ಶಿವನೇ ಇಲ್ಲಿ ಪ್ರತ್ಯಕ್ಷವಾಗಿ ಸ್ವಯಂಭು ಲಿಂಗವಾಗಿದ್ದಾನೆ ಎಂದು ಪುರಾಣಗಳು ಹೇಳುತ್ತವೆ.

ಈ ದೇವಾಲಯ ಬಹಳ ಪುರಾತನವಾದದ್ದು ಆದ್ದರಿಂದ ಇತಿಹಾಸಕಾರರು ಹೇಳುತ್ತಾರೆ.ಸಹಸ್ರ ಮಾನಗಳು ಅಂದರೆ ಸಾವಿರಾರು ವರ್ಶಗಳ   ಹಿಂದೆ ಕಾರ್ತಿಕೇಯ ಸ್ವಾಮಿಯು ಇದನ್ನು ನಿರ್ಮಿಸಿದವನೆಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ.

ಅರಬ್ಬೀ ಸಮುದ್ರದೊಳಗೆ ಸ್ಥಾಪಿತವಾದ ಈ ದೇವಸ್ಥಾನದಲ್ಲಿ  ಪಾಂಡವರು ತಮ್ಮ ಕುರುಕ್ಷೇತ್ರ ಯುದ್ಧ ಮುಗಿದ ನಂತರ ತಮ್ಮ ಸ್ವಂತ  ಬಂಧುಗಳನ್ನೇ ಕೊಂದವೆಂದು ಆ ಪಾಪವನ್ನು ಕಳೆದುಕೊಳ್ಳಲು ಯಾವುದಾದರೂ ಮಾರ್ಗವನ್ನು ಹೇಳುವಂತೆ ಶ್ರೀ ಕೃಷ್ಣನಲ್ಲಿ ಕೇಳುತ್ತಾರೆ.ಆಗ ಶ್ರೀ ಕೃಷ್ಣನು  ಒಂದು ಕಪ್ಪು ಬಾವುಟ ಮತ್ತು ಒಂದು ಕಪ್ಪು ಕಾಗೆಯನ್ನು ಸೃಷ್ಟಿಸಿ ಇವು ಎಲ್ಲಿಗೆ ಹೋಗುತ್ತವೋ ಅವುಗಳನ್ನೇ ಹಿಂಬಾಲಿಸಿ.ಯಾವ ಜಾಗದಲ್ಲಿ ಇವು  ಬಿಳಿಯ ಬಣ್ಣವನ್ನು ಪಡೆದುಕೊಳ್ಳುತ್ತವೋ ಅಲ್ಲಿ ನೀವು ಪೂಜೆ ತಪಸ್ಸನ್ನು ಮಾಡಿರಿ ಎಂದು ಕೃಷ್ಣ ಹೇಳಿದನು.ಅಲ್ಲಿ  ನಿಮ್ಮ ಪಾಪಗಳು ಎಲ್ಲ ಕಳೆಯುತ್ತವೆ.

 

 

ಹೀಗೆ ಅನೇಕ ದಿನಗಳ  ತಪಸ್ಸು ಮಾಡುತ್ತಿದ್ದ ಪಾಂಡವರಿಗೆ  ಒಂದು ದಿನ ಶಿವನು  ಪಾಂಡವರ ಮುಂದೆ ಪ್ರತ್ಯಕ್ಷನಾದನು.ಆಗ ಶಿವನು ಪಾಂಡವರು ಪೂಜಿಸಲೆಂದೇ ಸ್ವಯಂಭುವಾಗಿ ಐದು ಲಿಂಗವಾಗಿ  ಅದು  ಎಲ್ಲ ನಂದಿಯ ಕಡೆಗೆ ಮುಖ ಮಾಡಿರುವಂತೆ ಇಲ್ಲಿ ಸ್ಥಾಪಿತ  ವಾಗಿವೆ.

ಈ ದೇವಸ್ಥಾನವು ಸಮುದ್ರದೊಳಗೆ ಸುಮಾರು ಒಂದೂವರೆ ಕಿಲೋಮೀಟರ್ ಸಮುದ್ರದೊಳಗೆ ಹೋದರೆ ಈ ದೇವಸ್ಥಾನವು ಕಾಣಿಸುತ್ತದೆ.ಆದರೆ ಅಲ್ಲಿಗೆ ತೆರಳಲು ಒಂದು ಪ್ರತ್ಯೇಕ ಸಮಯ ನಿಗದಿಯಾಗಿದೆ. ಒಂದು ದಿನಕ್ಕೆ ಅಂದರೆ ದಿನದ 24 ಗಂಟೆಗಳಲ್ಲಿ ಕೇವಲ ಎರಡು ಬಾರಿ ಮಾತ್ರ ಈ ದೇವಸ್ಥಾನಕ್ಕೆ ಹೋಗಿ ಬರಬಹುದು.ಅಲ್ಲಿಯೇ ಉಳಿಯುವ ಹಾಗಿಲ್ಲ. ಬೆಳಗಿನ ಜಾವ  6 ಗಂಟೆಗೊಮ್ಮೆ ನೀರು ದೂರವಾಗಿ ನಂತರ ಮಧ್ಯಾಹ್ನದ ವೇಳೆಗೆ ಮುಚ್ಚಿ ಹೋಗುತ್ತದೆ ನಂತರ ಸಂಜೆಯ ಸಮಯದಲ್ಲಿ ನೀರು ದೂರ ಸರಿದು   ಮತ್ತು ಸಂಜೆ 7 ಗಂಟೆಗೆ ಸಂಪೂರ್ಣವಾಗಿ  ಸಮುದ್ರದ ನೀರಿನಿಂದ ಆವೃತವಾಗಿರುತ್ತದೆ.ಸಂಜೆ 6.30 ಯಿಂದ 7 ಗಂಟೆಯೊಳಗೆ ಇಲ್ಲಿ ಶಿವನಿಗೆ ಆರತಿ ನೆರವೇರಿಸಲಾಗುತ್ತದೆ.

ಈ ಸಮುದ್ರದ ಆಳ 2000 ಅಡಿಗಳಷ್ಟು ಇದ್ದು  500 ಅಡಿಗಳಷ್ಟು ಎತ್ತರದವರೆಗೆ ಸಮುದ್ರದ ನೀರು ನಿಲ್ಲುತ್ತದೆ.

ಇನ್ನೊಂದು ವಿಶೇಷತೆ ಎಂದರೆ ಇಲ್ಲಿ ದಿನಕ್ಕೆ ಎರಡು ಬಾರಿ ಸಮುದ್ರದ ನೀರಿನಲ್ಲಿ ಸಂಪೂರ್ಣವಾಗಿ ಮುಚ್ಚಿ ಹೋಗಿರುವ ದೇವಸ್ಥಾನವು  ತಂತಾನೆ  ದೇವಸ್ಥಾನಕ್ಕೆ ಹೋಗಲು ಸಮುದ್ರದ ನೀರೇ ಹಿಂದೆ ಸರಿದು  ದಾರಿ ಮಾಡಿಕೊಡುತ್ತದೆ. ಆ ಸಮಯದಲ್ಲಿ ಮಾತ್ರ  ಭಕ್ತರು ಹರ ಹರ ಮಹಾದೇವ ಎಂದು ಘೋಷಣೆಯನ್ನು ಭಕ್ತಿಯಿಂದ ಕೂಗುತ್ತಾ ದೇವಸ್ಥಾನಕ್ಕೆ ನೆಡೆದು ಹೋಗುತ್ತಾರೆ ಹಾಗೆ  ದೇವಸ್ಥಾನಕ್ಕೆ ಹೋಗಿ ಮತ್ತೆ ಬಂದು ಬಿಡಬೇಕು.ಮತ್ತೆ ಕೆಲವು ಸಮಯದ ನಂತರ  ನೀರಿನಿಂದ ಸಂಪೂರ್ಣ ಆವೃತವಾಗಿ ದೇವಸ್ಥಾನದ  ದ್ವಜ ಮಾತ್ರ ಕಾಣಿಸುವುದು.ಆದ್ದರಿಂದ ಇಲ್ಲಿ ಉಳಿಯಲು ಆಗುವುದಿಲ್ಲ.ಸಮುದ್ರದ  ನೀರು ತಂತಾನೆ ಹಿಂದೆ ಸರಿದು  ದಾರಿ ಮಾಡಿಕೊಡುವದನ್ನು ನೋಡುವುದೇ ಒಂದು  ವಿಸ್ಮಯ ಮತ್ತು ಮನೋಹರವಾದ ದೃಶ್ಯ.

ಈ ದೇವಸ್ಥಾನದ ಹೆಸರು “ನಿಷ್ಕಳಂಕ” ದೇವಸ್ಥಾನ. ನಿಷ್ಕಳಂಕ ಎಂದರೆ  ಅದರರ್ಥ ಸ್ವಚ್ಛ, ಪರಿಶುದ್ಧ,ತಪ್ಪಿಲ್ಲದ,ಶುದ್ಧ ಮಾಡುವ,ಶುದ್ಧ ಗೊಳಿಸುವ ಎಂದು.

 

ಇಲ್ಲಿ ಪಾಂಡವರ ಕೊಳ ಎಂಬ ಒಂದು ಹೆಸರಿನ  ಕೊಳವಿದ್ದು ಅಲ್ಲಿ ಭಕ್ತರು ಕೈ ಕಾಲು ಮುಖ ತೊಳೆದು  ನಂತರ ದೇವಸ್ಥಾನಕ್ಕೆ ಹೋಗುತ್ತಾರೆ.

ಆಗಸ್ಟ್ ತಿಂಗಳಿನ ಶ್ರಾವಣ ಮಾಸದಲ್ಲಿ  ಅಮಾವಾಸ್ಯೆಯ ದಿನ  ಇಲ್ಲಿಗೆ ಅಧಿಕವಾಗಿ ಭಕ್ತರು ಆಗಮಿಸುತ್ತಾರೆ. ಪೂರ್ಣ ಚಂದ್ರನಿರುವ ಪೌರ್ಣಮಿಯ ದಿನ ಇಲ್ಲಿ ನೀರಿನ ಅಲೆಗಳು   ಜಾಸ್ತಿಯಾಗುವ ಕಾರಣ. ಶಿವನು ಇಲ್ಲಿ ಪ್ರತ್ಯಕ್ಷವಾಗಿ ಪಾಂಡವರು ಸಹ  ಶಿವನ  ದರ್ಶನ   ಪಡೆದು ನಂತರ ಪೂಜಿಸಲು ಐದು ಶಿವಲಿಂಗವನ್ನು ತಾವೇ ಸ್ಥಾಪಿಸಿದರು.

ಈ ದೇವಾಲಯ ಇರುವ ಸ್ಥಳದಲ್ಲಿ ಚೋಟೆ ಮಹಿ  ಸಾಗರ್ ಮತ್ತು ಸಾಬರ್ಮತಿ ಎಂಬ ಎರಡು ನದಿಗಳ ಸಂಗಮವಾಗುತ್ತದೆ.ಇಲ್ಲಿಗೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.  ಶಿವಲಿಂಗ 4 ಅಡಿ ಎತ್ತರವಿದ್ದು,ಈ ಶಿವಲಿಂಗ ತಮ್ಮ ಕೋರಿಕೆಗಳನ್ನು ಈಡೇರಿಸುತ್ತದೆ ಎಂದು ಭಕ್ತರು ನಂಬಿದ್ದಾರೆ.

ಈ ದೇವಸ್ಥಾನವು ಗುಜರಾತ್ ರಾಜ್ಯದ  ವಡೋದರ ಬಳಿಯಿರುವ ಕವಿ ಕೆಂಬೋಯ್  ಎಂಬ ಗ್ರಾಮದ ಬಳಿ ಅರಬ್ಬೀ ಸಮುದ್ರದಲ್ಲಿ ನಿರ್ಮಿಸಿರುವ ಆಲಯದಲ್ಲಿ  ಶಿವನನ್ನು ಸ್ತಂಭೇಶ್ವರನಾಗಿ ಪೂಜಿಸುತ್ತಾರೆ.

ಇಲ್ಲಿ ದೂರದಿಂದ ಬರುವ ಭಕ್ತರಿಗೆ ಧರ್ಮಶಾಲ ಎಂಬ ವಸತಿ ಯೋಜನೆಯನ್ನು ಸಹ ಕಲ್ಪಿಸಲಾಗಿದೆ.ಇಲ್ಲಿ ಆಸ್ಪತ್ರೆ ಮತ್ತು ಆಹಾರದ ವ್ಯವಸ್ಥೆಗೆ ಅಷ್ಟಾಗಿ ಯಾವುದೇ ಒಳ್ಳೆಯ ಸೌಲಭ್ಯಗಳು ಇರುವುದಿಲ್ಲ.

ಗುಜರಾತ್ ಗೆ ಭೇಟಿ ನೀಡುವ ಪ್ರವಾಸಿಗರು ಇದನ್ನು,ಈ ಅದ್ಭುತವಾದ ಕ್ಷಣ ಮತ್ತು ವಿಸ್ಮಯ ಎರಡನ್ನು  ಒಮ್ಮೆ ತಪ್ಪದೇ  ಕಣ್ತುಂಭ ನೋಡಿ ಆನಂದಿಸಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top