fbpx
ಸಣ್ಣ ಕಥೆ

ಶಕ್ತಿಯಿರುವಾಗಲೇ ಸಮಸ್ಯೆಗಳಿಂದ ಈಚೆ ಬರಬೇಕು ಪ್ರತಿಯೊಬ್ಬ ವ್ಯಕ್ತಿ ತಿಳಿದು ಕೊಂಡಿರಲೇಬೇಕಾದ ನೀತಿ ಪಾಠ

ಒಂದು ಸಣ್ಣ ಕಥೆ, ಪ್ರತಿಯೊಬ್ಬ ವ್ಯಕ್ತಿ ತಿಳಿದು  ಕೊಂಡಿರಲೇಬೇಕಾದ ನೀತಿ ಪಾಠ.

ನಿಮಗೆ ಶಕ್ತಿ ಇರುವಾಗಲೇ ಸಮಸ್ಯೆಯಿಂದ ಹೊರಬಂದು ಬಿಡಬೇಕು.ಜೀವನದಲ್ಲಿ ಎಂತದ್ದೇ ಪರಿಸ್ಥಿತಿಯಲ್ಲಾದರೂ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯ.

 

ಕಪ್ಪೆಯನ್ನು ತೆಗೆದುಕೊಂಡು ಬಿಸಿ ನೀರಿನಲ್ಲಿ ಹಾಕಿದರೆ ಅದು ಕೂಡಲೇ ಜಿಗಿದು ಹೊರಗೆ ಬರುತ್ತದೆ.ಯಾಕೆಂದರೆ ನೀರು ತುಂಬಾ ಬಿಸಿಯಾಗಿರುತ್ತದೆ ಅದಕ್ಕೆ.

ಆದರೆ ಅದೇ ಕಪ್ಪೆಯನ್ನು ತಣ್ಣೀರಿನಲ್ಲಿ ಹಾಕಿದರೆ ಅದು  ನೀರು ತಣ್ಣಗಿರುವ ಕಾರಣದಿಂದ ಅಲ್ಲಿಯೇ ಉಳಿದುಕೊಳ್ಳುತ್ತದೆ.ನಂತರ ನಿಧಾನಕೆ ನೀರನ್ನು ಬಿಸಿ ಮಾಡುತ್ತಾ ಹೋದ ಹಾಗೆ ಕಪ್ಪೆಯು ಸಹ ಆ ಜಾಸ್ತಿ ಯಾಗುತ್ತಿರುವ ಉಷ್ಣಾಂಶಕ್ಕೆ ಅದರ ದೇಹವನ್ನು  ಹೊಂದಿಸಿಕೊಂಡು ಹೋಗುತ್ತದೆ.

ಆದರೆ ನೀರು ಬಿಸಿಯಾಗಿ ಕೊನೆಗೆ ಕುದಿಯಲು ಪ್ರಾರಂಭಿಸಿದಾಗ ಅದು  ನೀರಿನಿಂದ ಜಿಗಿದು ಹೊರಗೆ ಬರಲು ಪ್ರಯತ್ನಿಸುತ್ತದೆ.ಆದರೆ ಅದು ಆ ಸಮಯದಲ್ಲಿ ಎಷ್ಟೇ ಪ್ರಯತ್ನಿಸಿದರೂ ಜಿಗಿಯಲು ಸಾಧ್ಯವಾಗುವುದಿಲ್ಲ.

ಯಾಕೆಂದರೆ  ಆ ನೀರಿನ ಉಷ್ಣತೆ ಜಾಸ್ತಿ ಯಾಗುತ್ತಾ ಹೋದಂತೆ ಅದು ಅನುಸರಿಸಿಕೊಳ್ಳಲು ತನ್ನ ದೇಹದಲ್ಲಿರುವ ಶಕ್ತಿಯನ್ನೆಲ್ಲಾ ವ್ಯಯಿಸಿರುತ್ತದೆ.ಆದ್ದರಿಂದ ಅದು ಅಲ್ಲೇ ಇದ್ದು ಕೊನೆಗೆ ಸಾವನ್ನಪ್ಪುತ್ತದೆ .

ಇದು ಕೇವಲ ಕಥೆಯಲ್ಲ ಇದರಲ್ಲಿ ಬಹಳಷ್ಟು ನೀತಿ ಪಾಠ ಅಡಗಿದೆ.ಈಗ ನೀವೇ ಒಂದು ವಿಷಯವನ್ನು ಆಲೋಚಿಸಿ ಕಪ್ಪೆ ಸತ್ತಿದ್ದು ಹೇಗೆ ?

ಬಹಳಷ್ಟು ಮಂದಿ ಬಿಸಿ ನೀರಿನಿಂದ ಎಂದು ಹೇಳುತ್ತಾರೆ.ಆದರೆ ಕಪ್ಪೆ ನಿಜವಾಗಿ ಬಿಸಿ ನೀರಿನಿಂದ ಸಾವನ್ನಪ್ಪಲಿಲ್ಲ.ನೀರಿನಿಂದ ಯಾವಾಗ ಜಿಗಿಯಬೇಕು ಎಂದು ಸರಿಯಾಗಿ ನಿರ್ಧಾರ ಮಾಡದೆ ,ನಿರ್ಧಾರ ತೆಗೆದುಕೊಳ್ಳದೇ ಸತ್ತು ಹೋಯಿತು.

ಸ್ವಲ್ಪ ಬಿಸಿಯಾಗುತ್ತಿದ್ದಂತೆ ಹೊಂದಿಕೊಳ್ಳೋಣ ಬಿಡು ಎಂದುಕೊಂಡು ಬಿಸಿ ನೀರಿನಲ್ಲೇ ಉಳಿಯಿತು.ಕೊನೆಗೆ ನೀರು ಕುದಿಯುವ ವೇಳೆಗೆ ಅದಕ್ಕೆ ಹೊರಗೆ ಜಿಗಿಯಲು ಸಾಧ್ಯವಾಗಲಿಲ್ಲ.

ಅದೇ ರೀತಿ ಮನುಷ್ಯರಾದ ನಾವು ಸಹ ಜೀವನದಲ್ಲಿ ಅನುಸರಿಸಿಕೊಂಡು ಹೋಗಬೇಕು, ಆದರೆ ಹೊಂದಾಣಿಕೆಯನ್ನು ಮಾಡಿಕೊಂಡೇ ಜೀವನದಲ್ಲಿ ಮೇಲೇರದೆ ಇರಬಾರದು.

ನಮ್ಮ ಮುಂದಿರುವ ಯಾವುದೇ ವ್ಯಕ್ತಿಯಾದರೂ ಸರಿ ನಮ್ಮನ್ನು ಮಾನಸಿಕವಾಗಿ ,ದೈಹಿಕವಾಗಿ ಮತ್ತು ಆರ್ಥಿಕವಾಗಿ  ಹಿಂಸಿಸಲು  ಅವಕಾಶ ಕೊಡಬಾರದು.

ಒಂದು ವೇಳೆ ಅಂತಹ ಅವಕಾಶವನ್ನು ಕೊಟ್ಟರೆ ಅವರು ನಮ್ಮನ್ನು ಹಿಂಸಿಸುತ್ತಲೇ ಇರುತ್ತಾರೆ.ನಾವು ಆರಂಭದಲ್ಲಿ ಭರಿಸುತ್ತೇವೆ.ಆದರೆ ಕೊನೆಗೆ ಭರಿಸಲು ಸಾಧ್ಯವಾಗುವುದಿಲ್ಲ.

ಆದ ಕಾರಣ ನಮಗೆ ಶಕ್ತಿ ಇರುವಾಗಲೇ ಅಂತಹ ಸಮಸ್ಯೆಯಿಂದ ಹೊರಬರಬೇಕು ಪರವಾಗಿಲ್ಲ ಬಿಡು ಎಂದು ಅನುಸರಿಸುತ್ತಲೇ ಇದ್ದರೆ ಕೊನೆಗೆ ಸಮಸ್ಯೆಯ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡು ಸಾಯಬೇಕಾಗುತ್ತದೆ.

ಜೀವನದಲ್ಲಿ ಯಾವುದೇ ಪರಿಸ್ಥಿತಿಯಲ್ಲಾದರೂ  ಸಹ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯ.

ಆದರೆ  ಹಾಗಂತ ಕೋಪದಿಂದ ನಿರ್ದಾರ  ತೆಗೆದುಕೊಳ್ಳಬಾರದು. ತಾಳ್ಮೆಯಿಂದ ಯೋಚಿಸಿ ಮೂರು ನಾಲ್ಕು ಬಾರಿ ಆಲೋಚಿಸಿ ಯಾವುದು ಸರಿ ? ಯಾವುದು ತಪ್ಪು?  ಎಂದು ಅಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top