fbpx
ಸಮಾಚಾರ

ಅಯ್ಯೋ ಪಾಪ ಸುಹಾಸಿನಿಯ ಮಗನಿಗೆ ಈ ಗತಿ ಬರಬಾರದಿತ್ತು!

ಅಯ್ಯೋ ಪಾಪ ಸುಹಾಸಿನಿಯ ಮಗನಿಗೆ ಈ ಗತಿ ಬರಬಾರದಿತ್ತು!

 

 

ಬಹುಭಾಷಾ ನಟಿ ಸುಹಾಸಿನಿ ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕ ಮಣಿರತ್ನಂ ಅವರ ಮಗ ನಂದನ್ ಇಟಲಿಯ ಬೆಲ್ಲುನ್ನೊದಲ್ಲಿ ದರೋಡೆಗೆ ಒಳಗಾಗಿದ್ದಾರೆ. ಈ ಕುರಿತು ನಟಿ ಸುಹಾಸಿನಿ ಟ್ವಿಟ್ಟರ್‌ನಲ್ಲಿ ಸರಣಿ ಟ್ವೀಟ್ ಮಾಡಿ ಅಲ್ಲಿನ ಜನರಿಗೆ ತಮ್ಮ ಮಗನಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ಭಾನುವಾರ ಸಾಯಂಕಾಲ ಸುಹಾಸಿನಿ ಅವರು ಇಟಲಿಯಲ್ಲಿರುವ ತಮ್ಮ ಮಗನ ಕುರಿತಾಗಿ ಸರಣಿ ಸಾಲು ಟ್ವೀಟ್ ಮಾಡಿದ್ದಾರೆ. ‘ವೆನಿಸ್ ವಿಮಾನ ನಿಲ್ದಾಣದ ಬಳಿ ಯಾರಾದ್ರೂ ಇದ್ದರೆ ನನ್ನ ಮಗನಿಗೆ ಸಹಾಯ ಮಾಡಿ, ಅವನು ದರೋಡೆಗೆ ಒಳಗಾಗಿದ್ದಾನೆ. ವಿಮಾನ ನಿಲ್ದಾಣಕ್ಕೆ ಬರಬೇಕಿದೆ’ ಎಂದು ಟ್ವೀಟ್ ಮಾಡಿದ್ದಾರೆ.

 

 

ಮೊದಲಿಗೆ ಮಗನ ಫೋನ್ ನಂಬರ್ ಪ್ರಕಟಿಸಿ ಸಹಾಯ ಮಾಡಿ ಎಂದು ಟ್ವೀಟ್ ಮಾಡಿದ್ದ ಸುಹಾಸಿನಿ ಬಳಿಕ ಭಾರತೀಯರಾರು ಸುಮ್ಮನೆ ಕಷ್ಟ ಸುಖ ವಿಚಾರಿಸಲು ಫೋನ್ ಮಾಡಬೇಡಿ. ಮಗನ ಫೋನ್ ಬ್ಯಾಟರಿ ಚಾರ್ಜಿಂಗ್ ಬಹಳ ಕಡಿಮೆ ಇದೆ. ಪದೇ ಪದೇ ಫೋನ್ ಮಾಡಿದ್ರೆ ಆತ ಸಂಪರ್ಕ ಸಿಗುವುದು ಕಷ್ಟ ಎಂದು ಮತ್ತೊಂದು ಟ್ವೀಟ್ ನಲ್ಲಿ ಮನವಿ ಮಾಡಿದ್ರು.

 

 

ಸುಹಾಸಿನಿ ಟ್ವೀಟ್ ಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು ಅವರ ಮಗನಿಗೆ ಸಹಾಯ ದೊರೆತಿದೆ. ತಮ್ಮ ಮಗನಿಗೆ ಸಹಾಯ ಮಾಡಿದವರಿಗೆ ಸುಹಾಸಿನಿ ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ಪುತ್ರ ಸುರಕ್ಷಿತವಾಗಿದ್ದಾರೆ. ಎಂದು ಸುಹಾಸಿನಿ ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top