fbpx
ಉಪಯುಕ್ತ ಮಾಹಿತಿ

ರಾತ್ರಿಊಟಕ್ಕೆ ಚಪಾತಿ ತಿಂದರೆ ಏನೆಲ್ಲ ಲಾಭಸಿಗುತ್ತದೆ ತಿಳಿಯಿರಿ

ರಾತ್ರಿಊಟಕ್ಕೆ ಚಪಾತಿ ತಿಂದರೆ ಏನೆಲ್ಲ ಲಾಭಸಿಗುತ್ತದೆ ತಿಳಿಯಿರಿ :ತೂಕ ಕಡಿಮೆ ಮಾಡಿಕೊಳ್ಳಲು ಇಚ್ಚಿಸುವವರು ರಾತ್ರಿ ಹೊತ್ತಿನಲ್ಲಿ ಅನ್ನವನ್ನು ಬಿಡುವುದು ತುಂಬಾ ಒಳ್ಳೆಯ ಪದ್ಧತಿ, ರಾತ್ರಿ ಹೊತ್ತಿನಲ್ಲಿ ನಾವು ಮಾಡಬೇಕಾದ ಕೇಲಸವೇನು ಇಲ್ಲ ವಿಶ್ರಾಂತಿಗಾಗಿ ನಿದ್ರೆಯನ್ನು ಮಾಡುತ್ತೇವೆ, ಮಲಗಿದಾಗ ನಮ್ಮ ಶಕ್ತಿಯು ಸ್ವಲ್ಪವು ಉಪಯೋಗ ಇರುವುದಿಲ್ಲ ಅದ್ದರಿಂದ ನಾವು ರಾತ್ರಿಯಲ್ಲಿ ತಿಂದ ಆಹಾರದಲ್ಲಿ ಕ್ಯಾಲರಿಸ್ ಹಾಗೇಯೇ ಹೊಟ್ಟೆಯಲ್ಲಿ ಉಳಿದುಹೊಗುತ್ತದೆ.

ಹಾಗಾಗಿ ರಾತ್ರಿ ಸಮಯದಲ್ಲಿ ಅನ್ನ ಸೇವಿಸುವುದರಿಂದ ಶಕ್ತಿ ಬೇಕಾಗುವುದಿಲ್ಲ ಅಷ್ಟಲ್ಲದೆ ದೇಹದಲ್ಲಿ ಕೊಬ್ಬು ಉಳಿದು ಹೊಗಿ ದೇಹ ದಪ್ಪಗಾಗುತ್ತದೆ. ಮತ್ತು ಅಧಿಕಬಾರದಿಂದ ಕಷ್ಟಪಡುವ ಪ್ರಮಾದವಿದೆ, ರಾತ್ರಿ ಸಮಯದಲ್ಲಿ ಊಟಮುಗಿದ ತಕ್ಷಣ ಮಲಗುವುದರಿಂದ ಇನ್ನು ಹೇಚ್ಚಿನದಾಗಿ ಸಮಸ್ಯೆಗಳನ್ನು ಎದುರಿಬೇಕಾಗಿತ್ತದೆ.

*ಈ ಎಲ್ಲಾಕಾರಣಗಳಿಂದ ರಾತ್ರಿ ಊಟಕ್ಕೆ ಚಪಾತಿ ತಿನ್ನುವುದು ಒಳ್ಳೆಯದೆಂದು ವೈದ್ಯರು ಹೇಳುತ್ತಾರೆ, ತಟ್ಟೆಯತುಂಬಾ ಅನ್ನ ತಿನ್ನುವುದು ಮತ್ತು ಅದರ ಬದಲಿಗೆ ಎರಡು ಚಪಾತಿ ತಿನ್ನುವುದು ಒಂದೇ ಎಂದು ವೈದ್ಯರು ಹೇಳುತ್ತಾರೆ.

*ಅನ್ನಕಿಂತ ಅಧಿಕ ಶಕ್ತಿ ಚಪಾತಿ ನೀಡುತ್ತದೆ ಎಂದು ಹೇಳುತ್ತಾರೆ. ಆದರೆ ಚಪಾತಿಯಲ್ಲಿ ಕೊಬ್ಬಿನಂಶಗಳು ಇರುವುದಿಲ್ಲ ಎಂದು ಹೇಳುತ್ತಾರೆ.

*ಚಪಾತಿಯಲ್ಲಿ ಕೊಬ್ಬಿನ ಅಂಶಗಳು ಯಾಕೆ ಇರುವುದಿಲ್ಲವೆಂದರೆ ಅದು ಗೋದಿಯಲ್ಲಿರುವ ಗುಣ ಎಂದು ಹೇಳಲಾಗಿದೆ.

*ಗೋದಿಯಲ್ಲಿ ಅಧಿಕವಾಗಿ ವೈಟಮಿನ್ –ಬಿ, ವೈಟಮಿನ್- ಇ, ಐಯೋಡಿನ್,  ಮ್ಯಾಂಗನೀಸ್. ಸಿಲಿಕಾನ್, ಮೆಗ್ನೀಷಿಯಂ, ಕ್ಯಾಲ್ಸಿಯಂ ಮುಂತಾದ ಖನಿಜಾಂಶಗಳು ಇರುತ್ತವೆ, ಈ ಎಲ್ಲಾ ಅಂಶಗಳು ದೇಹಕ್ಕೆ ಅತಿಹೇರಳವಾಗಿ ದೊರಕುತ್ತದೆ.

*ಗೋದಿಯಲ್ಲಿ ಕಬ್ಬಿಣದ ಅಂಶ ಜಾಸ್ತಿಇರುವುದರಿಂದ ರಕ್ತದಲ್ಲಿರುವ ಹಿಮಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ.

*ಚಪಾತಿ ಬಹುಬೇಗಾನೆ ಜೀರ್ಣವಾಗುತ್ತದೆ, ಅದ್ದರಿಂದ ಚಪಾತಿಯನ್ನು ಸೇವಿಸುವುದು ಒಳ್ಲೆಯದು.

*ಚಪಾತಿಯನ್ನು ಕಡಿಮೆ ಎಣ್ಣೆ ಅಥವಾ ಎಣ್ಣೆ ರಹಿತ ಚಪಾತಿಯನ್ನು ತಿನ್ನುವುದು ಒಳ್ಳೆಯದು, ಹಾಗಂತ ಚಪಾತಿ ತಿನ್ನಿ ಅಂತ ಸಲಹೆ ನೀಡಿದ್ದಾರೆ ಎಂದು ಹೆಚ್ಚು ತಿಂದರೆ ಅರೋಗ್ಯದಲ್ಲಿ ಹೇರುಪೇರಾಗುವ ಸಾದ್ಯತೆಇದೆ.

*ಚಪಾತಿಯನ್ನು ಅತಿಯಾಗಿ ತಿಂದರೆ ಅನಾರೋಗ್ಯದ ಸಮಸ್ಯೆಗಳು ಕಂಡುಬರುತ್ತದೆ, ದೇಹಕ್ಕೆ ಅಗತ್ಯ ಯಷ್ಟುಬೇಕು ಅಷ್ಟು ತಿನ್ನಬೇಕು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top