fbpx
ಸಮಾಚಾರ

ರಾಷ್ಟ್ರೀಯ ಉತ್ಸವ ಮತ್ತು ಸಾಹಸಸಿಂಹನ ಬಗ್ಗೆ ದರ್ಶನ್ ಹೇಳಿದ ಮಾತುಗಳಿವು.

ರಾಷ್ಟ್ರೀಯ ಉತ್ಸವ ಮತ್ತು ಸಾಹಸಸಿಂಹನ ಬಗ್ಗೆ ದರ್ಶನ್ ಹೇಳಿದ ಮಾತುಗಳಿವು.

 

 

ನವದೆಹಲಿಯಲ್ಲಿ ನೆನ್ನೆಯಿಂದ ಸಾಹಸಸಿಂಹ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ರದ್ದೇ ಸ್ಮರಣೆ. ಡಾ.ವಿಷ್ಣುವರ್ಧನ್ ಹೆಸರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಉತ್ಸವಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭ ಕೋರಿದ್ದಾರೆ.

ದರ್ಶನ್ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ‘ಡಾ.ವಿಷ್ಣುವರ್ಧನ್ ರಾಷ್ಟೀಯ ಉತ್ಸವ’ಕ್ಕೆ ಶುಭಾಶಯ ಕೋರಿದ್ದು ವಿಷ್ಣುವರ್ಧನ್ ಅವರ ಬಗ್ಗೆ ಕೆಲವು ಟ್ವೀಟ್ ಗಳನ್ನೂ ಮಾಡಿದ್ದಾರೆ. ಅವುಗಳನ್ನು ಮುಂದೆ ಓದಿ

 

 

“ನಿಜವಾದ ಕಲಾರಾಧಕನಿಗೆ ಎಂದಿಗೂ ಸಾವಿಲ್ಲ. ವಿಷ್ಣು ಸರ್ ಹೆಸರಲ್ಲಿ ರಾಷ್ಟ್ರೀಯ ಉತ್ಸವ ಮಾಡುತ್ತಾ ಇರುವ ಅಭಿಮಾನಿಗಳೆಲ್ಲರಿಗೂ ನನ್ನ ಅಭಿನಂದನೆಗಳು.”

 

 

“ನಾನು ಕೂಡ ಅವರ ಅಭಿಮಾನಿಗಳಲ್ಲೊಬ್ಬ. ಅಭಿಮಾನಿಗಳನ್ನು ವಿಷ್ಣು ಸರ್ ಎಷ್ಟು ಪ್ರೀತಿಸುತ್ತಿದ್ದರು ಅನ್ನೋದು ಎಲ್ಲರಿಗೂ ಗೊತ್ತು.”

 

 

“ಅವರು ದೈಹಿಕವಾಗಿ ನಮ್ಮನ್ನು ಆಗಲಿ ಇಷ್ಟು ವರ್ಷಗಳು ಕಳೆದರೂ ಸಹ ಅವರ ಮೇಲೆ ಅಭಿಮಾನಿಗಳು ತೋರುತ್ತಿರುವ ಪ್ರೀತಿ ಬೆಲೆಕಟ್ಟಲಾಗದ್ದು.”

 

 

“ಇದಕ್ಕೆ ಕಾರಣರಾಗಿರುವ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು. ಒನ್ ಅಂಡ್ ಓನ್ಲಿ ಸಿಂಹ – ಸಾಹಸ ಸಿಂಹ”

ಎಂದು ನಟ ದರ್ಶನ್ ‘ಡಾ.ವಿಷ್ಣುವರ್ಧನ್ ರಾಷ್ಟೀಯ ಉತ್ಸವ’ ಮತ್ತು ವಿಷ್ಣುವರ್ಧನ್ ಕುರಿತು ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top