ನಿಮ್ಮ ಆಧಾರ್ ಕಾರ್ಡ್ ನಲ್ಲಿ ಏನಾದ್ರೂ ತಪ್ಪಾಗಿದ್ಯಾ ಹಾಗಾದ್ರೆ ಚಿಂತೆ ಬೇಡ ಇನ್ಮುಂದೆ 10 ನಿಮಿಷದಲ್ಲಿ ಸರಿ ಮಾಡ್ಕೋಬಹುದು ಹೇಗೆ ಅಂತೀರಾ ಮುಂದೆ ಓದಿ ..
ಈಗ ಪರಿಸ್ಥಿತಿ ಹೇಗಾಗಿದೆ ಅಂದ್ರೆ ಗ್ಯಾಸ್ ಕನೆಕ್ಷನ್ , ಎಲೆಕ್ಟ್ರಿಕ್ ಕನೆಕ್ಷನ್ , ಬ್ಯಾಂಕ್ ಖಾತೆಗೆ , ರೇಷನ್ ಕಾರ್ಡ್ ಗೆ , ಪ್ಯಾನ್ ಕಾರ್ಡ್ ಪ್ರತಿಯೊಂದಕ್ಕೂ ಆಧಾರ್ ಬೇಕೇ ಬೇಕೇ , ಇದೆಲ್ಲ ನೋಡ್ತಿದ್ರೆ ಮುಂದೆ ಇನ್ನೆನಕ್ಕೆ ಆಧಾರ್ ಕಾರ್ಡ್ ಕೇಳ್ತಾರೋ ಗೊತ್ತೇ ಆಗ್ತಿಲ್ಲ .
ಜನರಿಗೆ ಈ ಕಾರ್ಡ್ ಆ ಕಾರ್ಡ್ ಬಗ್ಗೆ ತಲೆಕೆಡಿಸ್ಕೊಂಡು ಸಾಕಾಗೋಗಿದೆ , ಹೀಗಿರುವಾಗ ಆಧಾರ್ ಕಾರ್ಡ್ ನಲ್ಲಿ ಏನಾದ್ರೂ ತಪ್ಪು ಮಾಹಿತಿ ಹೋದ್ರೆ ಕಥೆ ಮುಗಿದೇ ಹೋಯ್ತು , ತಳಮಳ ಶುರುವಾಗಿ ಹೋಗುತ್ತೆ ಇನ್ಮುಂದೆ ಚಿಂತೆ ಮಾಡ್ಬೇಡಿ ಸರ್ಕಾರ ಇದಕೊಂದು ಪರಿಹಾರ ಕಂಡು ಹಿಡಿದಿದೆ .
ಭಾರತ ವಿಶಿಷ್ಟ ಗುರುತು ಪ್ರಾಧಿಕಾರ ಸಂಸ್ಥೆ (ಯುಐಡಿಎಐ) ಭಾರತದ ಅಧಿಕೃತ ಪೋಸ್ಟ್ ಆಫೀಸ್ ಗಳಲ್ಲಿ ಆಧಾರ್ ಕಾರ್ಡ್ ನ ಎಲ್ಲ ಲೋಪ ದೋಷಗಳನ್ನು ಸರಿ ಮಾಡೋಕೆ ಅಧಿಕಾರಿಗಳನ್ನು ನೇಮಕ ಮಾಡಿ ಅಂಚೆ ಕಚೇರಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಇಷ್ಟು ದಿನ ಈ ಸೇವೆ ಕೇವಲ ಹೆಡ್ ಪೋಸ್ಟ್ ಆಫೀಸ್ ಗಳಲ್ಲಿ ಮಾತ್ರ ಇತ್ತು , ಈಗ ಒಂದು ಹೆಜ್ಜೆ ಮುಂದೆ ಹೋಗಿ ಸೆಪ್ಟೆಂಬರ್ 1ರಿಂದ ಎಲ್ಲಾ ಸಬ್ ಪೋಸ್ಟ್ ಆಫೀಸುಗಳಲ್ಲೂಈ ಸೇವೆಯನ್ನು ಕೊಡಲು ಮುಂದಾಗಿದೆ .
ಈ ಸಬ್ ಪೋಸ್ಟ್ ಆಫೀಸುಗಳಲ್ಲಿರುವ ಆಧಾರ್ ಕಾರ್ಡ್ ಅಧಿಕಾರಿಗಳು ಅಂದರೆ ಪೋಸ್ಟ್ ಆಫೀಸ್ ಸಿಬ್ಬಂದಿ ಆಧಾರ್ ಕಾರ್ಡ್ ನಲ್ಲಿ ಮಾಡಬೇಕಾದ ಬದಲಾವಣೆ , ಸರಿ ತಪ್ಪುಗಳನ್ನು ನೋಡಿ ಸರಿ ಮಾಡಿ 10 ನಿಮಿಷದಲ್ಲಿ ಸಿಸ್ಟಮ್ ನಲ್ಲಿ ಅಪ್ಡೇಟ್ ಮಾಡುತ್ತಾರೆ .
ಅಷ್ಟೇ ಅಲ್ಲದೆ ಒಂದು ದಿನದ ಒಳಗೆ ಸರಿಯಾದ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಎರಡು ವಾರಗಳ ಒಳಗೆ ಆಧಾರ್ ಕಾರ್ಡ್ ನಿಮ್ಮ ಮನೆ ಬಾಗಿಲಿಗೆ ಬಂದು ಬೀಳುವುದು , ವಿವಿಧ ಮಾಹಿತಿ ಗಳನ್ನೂ ಸರಿಪಡಿಸಲು ಇಂತಿಷ್ಟು ಶುಲ್ಕ ಪಾವತಿ ಮಾಡಬೇಕು , ಆಧಾರ್ ಕಾರ್ಡ್ ಮಾಹಿತಿ ಸರಿ ಮಾಡಲು 25 ರೂ , ನಿಮ್ಮ ಬೆರಳಚ್ಚು ಅಥವಾ ಬಯೋ ಮೆಟ್ರಿಕ್ ಮಾಹಿತಿ ಸರಿ ಪಡಿಸಲು 25 ರೂ ಮತ್ತು ಹೊಸ ಕಾರ್ಡ್ ಪಡೆಯಬೇಕಾದಲ್ಲಿ 50 ರೂ ಶುಲ್ಕ ಪಾವತಿ ಮಾಡಬೇಕು .
ನೋಡಿ ಎಷ್ಟು ಸುಲಭ ಆಯ್ತು ಆಧಾರ್ ಮಾಹಿತಿ ಸೇರಿಸೋದು .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

POST OFFICE NALLI ENU FREEYAGI MADALVALLA SIR. ADANNE KASAGI KARANA DALLE MADIDARE AYTHU
ALLU SAME CHARGE