fbpx
ದೇವರು

ಮಂಗಳವಾರದ ದಿನ ಆಂಜನೇಯ ದೇವರಿಗೆ ಹೀಗೆ ಪೂಜೆ ಮಾಡಿದ್ರೆ ಅನ್ಕೊಂಡಿದೆಲ್ಲ ನೆರವೇರುತ್ತೆ

ಮಂಗಳವಾರದ  ದಿನ  ಆಂಜನೇಯ ದೇವರಿಗೆ ಹೇಗೆ ಪೂಜೆ ಮಾಡಬೇಕು.

ವಾರದಲ್ಲಿ ಒಂದೊಂದು ದಿನ ಒಂದೊಂದು ದೇವರಿಗೆ ಪೂಜೆ ಮಾಡುವುದು ನಮ್ಮ ಹಿಂದೂ ಸಂಪ್ರದಾಯದಲ್ಲಿದೆ ಹಾಗೆಯೇ ಮಂಗಳವಾರ ಎಂದರೆ ಆಂಜನೇಯನಿಗೆ  ಭಕ್ತಿ ,ಶ್ರದ್ಧೆಯಿಂದ ಪೂಜೆ ಮಾಡುತ್ತಾರೆ.

 

ಹನುಮಂತನನ್ನು ಕಲಿಯುಗದ ದೇವರು ಎಲ್ಲರನ್ನು ಕಾಪಾಡುವವನು ಎಂದು ನಂಬಲಾಗಿದೆ.ಕೋತಿಯರೂಪದಲ್ಲಿರುವ ದೇವರು ಮನುಷ್ಯನ ಎಲ್ಲ ಕಷ್ಟಗಳನ್ನು ಜೀವನದಲ್ಲಿ ಬರುವ ಅಡೆ ತಡೆಗಳನ್ನು ಹೋಗಲಾಡಿಸಿ ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ತುಂಬುತ್ತಾನೆ.ಸಾಮಾನ್ಯವಾಗಿ ಹನುಮಂತನು  ಕೇಸರಿ ಬಣ್ಣದಲ್ಲಿಯೇ ಬಿಂಬಿತವಾಗಿರುವುದನ್ನು  ಎಲ್ಲಿ ಹೋದರೂ ನಾವು  ಕಾಣುತ್ತೇವೆ.

ಕೇಸರಿ ಬಣ್ಣವೇ ಏಕೆ ?

ಅದಕ್ಕೆ ಎರಡು ಕಾರಣಗಳಿವೆ ಒಂದು ಕೇಸರಿ ಬಣ್ಣ  ಶಕ್ತಿ,ಉಲ್ಲಾಸ ಮತ್ತು ಹುರುಪು,ಜೀವಶಕ್ತಿ ತುಂಬುವ ಬಣ್ಣವಾಗಿದೆ.

ಪುರಾಣ ಗ್ರಂಥಗಳ ಪ್ರಕಾರ ಎರಡನೆಯ ಕಾರಣ ಸೀತೆಯು ಒಂದು ದಿನ  ಸಿಂಧೂರವನ್ನು  ಹಣೆಯ ಮೇಲೆ ಹಚ್ಚಿಕೊಳ್ಳುವಾಗ ಹನುಮಂತನು ಕುತೂಹಲದಿಂದ  ಕೇಳಿದ . ಮಾತೇ, ಏಕೆ ಸಿಂಧೂರವನ್ನು ಹಣೆಗೆ ಹಚ್ಚಿಕೊಳ್ಳುವುದು ಎಂದು.ಸೀತೆ ಹೇಳಿದಳು, “ಸಿಂಧೂರವನ್ನು ಹಚ್ಚಿಕೊಳ್ಳುವುದರಿಂದ ಭಗವಂತನಾದ ಶ್ರೀ ರಾಮನನ್ನು ಮೆಚ್ಚಿಸಿ  ಸಂತೋಷಗೊಳಿಸುತ್ತದೆ, ಅಷ್ಟೇ ಅಲ್ಲದೆ ರಾಮನಿಗೆ ದೀರ್ಘಾಯುಷ್ಯ ಮತ್ತು ಸಮೃದ್ದಿಯ ಜೀವನವನ್ನು   ಈ ಸಿಂಧೂರ ನೀಡುತ್ತದೆ”.ಇದನ್ನು ಕೇಳಿದ  ಹನುಮಂತನು ತನ್ನ ಇಡೀ ದೇಹಕ್ಕೇ ಸಿಂಧೂರವನ್ನು ಲೇಪಿಸಿಕೊಂಡ.

 

ಹನುಮಂತನು ಶಿವನ 11 ನೇ ರುದ್ರ ಅವತಾರವಾದ್ದರಿಂದ ಹನುಮಂತನನ್ನು ಒಲಿಸಿಕೊಳ್ಳುವುದು ಸುಲಭವಾಗಿದೆ ಮತ್ತು ತನ್ನ ಭಕ್ತಾದಿಗಳಿಗೆ ಬೇಗ ಅವರ ಇಷ್ಟಾರ್ಥಗಳನ್ನು ಈಡೇರಿಸಿ ಕಷ್ಟದಿಂದ ಮುಕ್ತಿ ಕೊಡಿಸುವನು ಹನುಮಂತ ಎಂದು ಜನ ನಂಬಿದ್ದಾರೆ.ಹನುಮಂತನನ್ನು ಪ್ರಸನ್ನಗೊಳಿಸಲು ಇನ್ನೂ ಕೆಲವು ಉಪಾಯಗಳಿವೆ ಅವು ಯಾವುವು ಎಂದು ತಿಳಿಯೋಣ…

1.ತುಳಸಿ.

ಮಂಗಳವಾರದ ದಿನ ತುಳಸಿ ಹಾರವನ್ನು   ಹನುಮಂತನ  ಮೂರ್ತಿಗೆ ಅರ್ಪಿಸಿ ನಂತರ  ಆ ತುಳಸಿಯನ್ನು  ನೀವು ಸೇವಿಸಬಹುದು.

2.ಬಾವುಟ.

ಕೇಸರಿ ಬಣ್ಣದ, ತ್ರಿವಣ ಆಕಾರದ ದ್ವಜ ಅಥವಾ ಬಾವುಟದ ಮೇಲೆ  ಶ್ರೀ ರಾಮ   ಎಂದು ಬರೆದು ಅದನ್ನು ಹನುಮಂತನಿಗೆ ಮಂಗಳವಾರದ ದಿನ ಅರ್ಪಿಸಿದರೆ ಶೀಘ್ರವಾಗಿ ಹಣವನ್ನು  ಸಂಪಾದನೆ ಮಾಡಬಹುದು. ಅಷ್ಟೇ ಅಲ್ಲದೆ ಈ ದ್ವಜವನ್ನು ಪೂಜೆ ಮಾಡಿಸಿ ನಂತರ ವಾಹನಗಳ ಮೇಲೆ ಕಟ್ಟುವುದರಿಂದ ಎಲ್ಲ ರೀತಿಯ ಆಘಾತಗಳಿಂದ ಪಾರು ಮಾಡಿ,ರಕ್ಷಿಸುತ್ತದೆ.

3.ತಿಲಕ.

ಹನುಮಂತನಿಗೆ ಪ್ರತಿ ಮಂಗಳವಾರ ಮತ್ತು ಶನಿವಾರ  ಕೇಸರಿ ಬಣ್ಣದ ತಿಲಕವನ್ನು  ಅರ್ಪಿಸುವುದರಿದ.ಮಂಗಳ ದೋಷ ಅಥವಾ ಕುಜ ದೋಷದಿಂದ ಮುಕ್ತಿ ಹೊಂದಬಹುದು ಮತ್ತು ಕಷ್ಟಗಳಿಂದ ಮುಕ್ತಿ ಹೊಂದಬಹುದು.

4.ಮಲ್ಲಿಗೆ ಹೂವಿನ ಎಣ್ಣೆ.

ಮಲ್ಲಿಗೆ ಹೂವಿನ ಎಣ್ಣೆಯನ್ನು ಅರ್ಪಿಸಿದರೆ ಮನಸ್ಸಿನ  ಏಕಾಗ್ರತೆ ವೃದ್ಧಿಸುತ್ತದೆ.ಮಲ್ಲಿಗೆ ಹೂವಿನ ಎಣ್ಣೆಯನ್ನು ಸಿಂಧೂರಕ್ಕೆ ಬೆರೆಸಿ ಹನುಮಂತನ ಮೂರ್ತಿಗೆ  ಲೇಪಿಸಬೇಕು.

5.ಸಿಹಿ ತಿಂಡಿಗಳು.

ಮಾರುತಿಗೆ ಅವನ ಬಾಲ್ಯದ ದಿನಗಳಿಂದಲೂ ಸಹ  ಸಿಹಿ ತಿಂಡಿಗಳಲ್ಲಿ ಲಡ್ಡು ಎಂದರೆ ಬಹಳ ಇಷ್ಟ.ಇದರ ಜೊತೆಗೆ ಬೆಲ್ಲ,ಸೀಬೇಕಾಯಿ,ಕಡಲೇಕಾಳನ್ನು ಅರ್ಪಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top