fbpx
ಭವಿಷ್ಯ

ಜಾತಕದ ಪ್ರಕಾರ ಅಶ್ವಿನಿ ನಕ್ಷತ್ರದವರ ಗುಣ ಲಕ್ಷಣಗಳು ಈ ರೀತಿ ಇರುತ್ತೆ

ಅಶ್ವಿನಿ ನಕ್ಷತ್ರದವರ ಗುಣ ಲಕ್ಷಣಗಳು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಟ್ಟು 27 ನಕ್ಷತ್ರಗಳು,9 ಗ್ರಹಗಳು,ಮತ್ತು 12 ರಾಶಿಗಳಿವೆ.ಆ 27 ನಕ್ಷತ್ರಗಳಲ್ಲಿ ಮೊದಲಿಗೆ ಬರುವ ನಕ್ಷತ್ರವೇ ಅಶ್ವಿನಿ ನಕ್ಷತ್ರ.ವ್ಯಕ್ತಿಯು ಜನಿಸಿದ ದಿನಾಂಕ, ಸಮಯಕ್ಕೆ ಅನುಸಾರವಾಗಿ ಅವರ ನಕ್ಷತ್ರವನ್ನು ಕಂಡು ಹಿಡಿಯಬಹುದು.ಈ 27 ನಕ್ಷತ್ರಗಳಲ್ಲಿ ನಿಮ್ಮದು ಅಶ್ವಿನಿ ನಕ್ಷತ್ರ,ಮೇಷ ರಾಶಿ ಆಗಿದ್ದರೆ ನೀವು ನಿಮ್ಮ ನಕ್ಷತ್ರದ ಬಗ್ಗೆ ತಿಳಿದುಕೊಳ್ಳಿ.

ನಕ್ಷತ್ರ ಸ್ವಾಮಿ- ಕೇತು.

ರಾಶಿ ಸ್ವಾಮಿ-ಕುಜ ಗ್ರಹ.

ಪ್ರಾಣಿ- ಪುರುಷ ಕುದುರೆ.

ಚಿಹ್ನೆ-ಕುದುರೆಯ ಮುಖ.

ಗಣ-ದೇವಗಣ.

ಅಶ್ವಿನಿ ನಕ್ಷತ್ರ ಅಧಿದೇವತೆ ಅಶ್ವಿನಿ ಕುಮಾರರು.ನಿಮ್ಮ ಜೀವನದಲ್ಲಿ ಬರುವ ಕಷ್ಟಗಳನ್ನು ಪರಿಹರಿಸಲು ನೀವು ಅಶ್ವಿನಿ ನಕ್ಷತ್ರದ ದಿನದಂದು ಅಶ್ವಿನಿ ಕುಮಾರರು ಪೂಜೆ ಸಲ್ಲಿಸಬೇಕು.ಇದರ ಮೂಲಕ ನೀವು ಆರೋಗ್ಯ , ಭಾಗ್ಯ,ಆಯಸ್ಸು, ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಸಹ  ಯಶಸ್ಸು ದೊರೆಯುವುದು.ನಿಮ್ಮ ಜೀವನದಲ್ಲಿ ಬರುವ ಕಷ್ಟಗಳನ್ನು ಬಗೆಹರಿಸಿಕೊಳ್ಳಲು ಗಾಯಿತ್ರಿ ಮಂತ್ರವನ್ನು ಸಹ ಪಠಿಸಿ ಸುಖವನ್ನು ಹೊಂದಬಹುದು ಬರುವ ಕಷ್ಟಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಭವಿಷ್ಯ ಪುರಾಣದ 102 ನೆ ಪುಟದಲ್ಲಿ ಉಲ್ಲೇಖವಾಗಿದೆ.

ಅಶ್ವಿನಿ ಗಾಯಿತ್ರಿ ಮಂತ್ರ.

“ಶ್ವೇತವರ್ಣಯ್ಯ ವಿದ್ಮಹೇ ಸುಧಾಕರಾಯ  ದೀಮಹೀ ತನ್ನೋ ಅಶ್ವಿನಿ ಪ್ರಚೋದಯಾತ್”.

ಗುಣ ,ಲಕ್ಷಣಗಳು ಮತ್ತು ಸ್ವಭಾವ.

ಕುದುರೆ ವೇಗವಾಗಿ ಚಲಿಸುವ ಪ್ರಾಣಿ.ಹಾಗೆ ಇವರು ಕೂಡ ಎಲ್ಲ ಕೆಲಸಗಳನ್ನು ವೇಗವಾಗಿ ಮಾಡಿ ಮುಗಿಸುತ್ತಾರೆ.ತೀಕ್ಷ್ಣ ಸ್ವಭಾವ ಹೊಂದಿರುವರು,ನೋಡಲು ಚೆನ್ನಾಗಿ ಕಾಣುತ್ತಾರೆ, ದೊಡ್ಡ  ಕಣ್ಣು,ಹಗಲವಾದ ಹಣೆ ಇರುತ್ತದೆ.

ಸಾಹಸಗಾರರು,ಕ್ರಿಯಾಶೀಲರು,ಚಿತನ್ಯವುಳ್ಳವರು,ಸಾಹಸ ಮಾಡುವವರು,ನೇರ ಸ್ವಭಾವ,ನೇರ ನುಡಿ,ನಿಷ್ಠುರತೆಯನ್ನು ಹೊಂದಿರುವವರು,ಸುಮ್ಮನೆ ಕುಳಿತು ಸಮಯ ಹಾಳು ಮಾಡುವುದಿಲ್ಲ.

ಕೆಲವರು ಆತುರದ ದುಡುಕಿನ ಸ್ವಭಾವ ಉಳ್ಳವರಾಗಿರುತ್ತಾರೆ. ಅದೃಷ್ಟವಂತರೂ, ತೀಕ್ಷ್ಣ ಬುದ್ದಿ ಉಳ್ಳವರು,ಪ್ರಜ್ಞಾವಂತರು,ತಾವು ಅಂದುಕೊಂಡಿದ್ದನ್ನು ಸಾಧಿಸುವ ಚಲಗಾರರು, ಯಾವಾಗಲೂ ಲವಲವಿಕೆಯಿಂದ ಕೂಡಿರುವವರು.  ಇವರ ಮಾತಿನಿಂದ ಸುತ್ತಮುತ್ತಲು ಇರುವವರ ಗಮನ ಸೆಳೆಯುತ್ತಾರೆ ಮತ್ತು ಎಲ್ಲರಿಗೂ  ಬೇಗ ಹತ್ತಿರವಾಗುತ್ತಾರೆ. ಬೇರೆಯವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾರೆ.

ತಾವು ಬಳಸುವ ಮತ್ತು ಕೊಂಡು ತರುವ  ವಸ್ತುಗಳ ಮೇಲೆ ಇವರಿಗೆ  ವ್ಯಾಮೋಹ,ಪ್ರೀತಿ  ಜಾಸ್ತಿ.ಇವರ ಹತ್ತಿರ ಇರುವ ಯಾವುದೇ ವಸ್ತುವಾದರೂ  ಸರಿ  ಜೋಪಾನವಾಗಿ ಕಾಪಾಡುತ್ತಾರೆ.

ವೃತ್ತಿಗಳು.

ಮೇಲ್ವಿಚಾರಕರು, ವೃತ್ತಿಪರ ಕ್ಷೆತ್ರಗಳಾದ ವೈದ್ಯಕೀಯ, ಮಾರ್ಗದರ್ಶಕರು, ಸಾರಿಗೆ ಇಲಾಖೆ,ನೃತ್ಯ, ತೋಟಗಾರಿಕೆ, ಗಿಡಮೂಲಿಕೆಗಳು ,ಶಿಕ್ಷಣ ಕ್ಷೆತ್ರ,ಔಷಧಿ ವಿತರಿಸುವವರು,ಸಾಹಸ ಕ್ರೀಡೆ, ಮತ್ತು ಸಣ್ಣ ಪುಟ್ಟ ವ್ಯಾಪಾರಗಳು ಇವರಿಗೆ ಒಗ್ಗುತ್ತವೆ.

ಸಂಗೀತ ಪ್ರಿಯರು,ಇತ್ತೀಚೆಗೆ ಮಾರುಕಟ್ಟೆಗೆ ಬರುವ ಹೊಸ ವಿನ್ಯಾಸವುಳ್ಳ ವಾಹನ,ಫೋನ್ ,ಆಭರಣಗಳು ,ಬಟ್ಟೆಗಳನ್ನು ಖರೀದಿಸುವುದರಲ್ಲಿ ಇವರಿಗೆ ಆಸಕ್ತಿ ಜಾಸ್ತಿ.

ವೈವಾಹಿಕ ಜೀವನ.

ಮದುವೆ ಮಹಿಳೆಯರಿಗೆ  23 ರಿಂದ 26 ವರ್ಷಗಳ ಒಳಗೆ ನಡೆಯಲಿದ್ದು.ಪುರುಷರಿಗೆ 26 ರಿಂದ 30 ವರ್ಷಗಳ ಒಳಗೆ ನೆಡೆಯುವುದು.ಅಶ್ವಿನಿ ನಕ್ಷತ್ರದ ಪುರುಷರಿಗಾದರೆ  ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಜಾಸ್ತಿ.ಅದೇ ಅಶ್ವಿನಿ ನಕ್ಷತ್ರದ ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಜಾಸ್ತಿ.

 

30 ವರ್ಷಗಳ ಜೀವನ ಕಷ್ಟ.

ಇವರು ತಮ್ಮ ಜೀವನದಲ್ಲಿ 30 ವರ್ಷ ಪೂರ್ಣ ಗೊಳ್ಳುವವರೆಗೂ ಅನೇಕ ಕಷ್ಟ ಮತ್ತು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.ಸಣ್ಣ ಪುಟ್ಟ ಸಮಸ್ಯೆಗಳು ಇವರನ್ನು ದೊಡ್ಡ ಸಮಸ್ಯೆಯಾಗಿ ಕಾಡುತ್ತವೆ, 30 ವರ್ಷಗಳ ನಂತರ ಜೀವನದಲ್ಲಿ ಅಭಿವೃದ್ಧಿಯನ್ನು ಕಾಣುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top