fbpx
ರಾಜಕೀಯ

ಮೋದಿ ಬುದ್ದಿವಂತಿಕೆಗೆ ಬೆಚ್ಚಿಬಿದ್ದು ಕೊನೆಗೂ ತಲೆಬಾಗಿದ ಚೀನಾ, ಡೋಕ್ಲಾಮ್ ನಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಚೀನಾ ಒಪ್ಪಿಗೆ.

ಮೋದಿ ಬುದ್ದಿವಂತಿಕೆಗೆ ಬೆಚ್ಚಿಬಿದ್ದು ಕೊನೆಗೂ ತಲೆಬಾಗಿದ ಚೀನಾ, ಡೋಕ್ಲಾಮ್ ನಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಚೀನಾ ಒಪ್ಪಿಗೆ.

 

 

ಸುಮಾರು ಎರಡು ತಿಂಗಳುಗಳಿಂದ ಭಾರತ ಮತ್ತು ಚೀನಾ ನಡುವಿನ ಶೀಥಲ ಸಮರಕ್ಕೆ ಕಾರಣವಾಗಿದ್ದ ಸಿಕ್ಕಿಂ ನ ಡೋಕ್ಲಾಂ ಗಡಿ ವಿವಾದಕ್ಕೆ ಸೋಮವಾರ ತಾರ್ಕಿಕ ಅಂತ್ಯ ಹಾಕಲಾಗಿದ್ದು, ಎರಡು ದೇಶದ ಸೇನಾ ಪಡೆಗಳು ವಿವಾದಿತ ಪ್ರದೇಶದಿಂದ ಹಿಂದಕ್ಕೆ ಸರಿಯಲು ಒಪ್ಪಿಗೆ ನೀಡಿವೆ ಎಂದು ತಿಳಿದಿದೆ.

 

 

ಪ್ರಧಾನಿ ನರೇಂದ್ರ ಮೋದಿ ಅವರ ರಾಜನೀತಿ, ಚಾಣಾಕ್ಷ ನಡೆಯಿಂದ ಬೆಚ್ಚಿಬಿದ್ದ ಚೀನಾ ಡೊಕ್ಲಾಂನಲ್ಲಿ ನಿಯೋಜಿಸಿದ್ದ ಸೇನೆಯನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಂಡಿದೆ.ಸೋಮವಾರ ಬೆಳಗ್ಗೆ ಹೇಳಿಕೆ ಹೊರಡಿಸಿದ ವಿದೇಶಾಂಗ ಸಚಿವಾಲಯ “ಉಭಯ ದೇಶಗಳ ರಾಜತಾಂತ್ರಿಕರು ನಡೆಸಿದ ಮಾತುಕತೆ ಫಲವಾಗಿದೆ. ಡೋಕ್ಲಾಮ್ ಗಡಿಯಲ್ಲಿ ನಿಯೋಜನೆಗೊಂಡಿರುವ ಭಾರೀ ಪ್ರಮಾಣದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಮತ್ತು ಚೀನಾ ನಿರ್ಧರಿಸಿವೆ. ಶೀಘ್ರದಲ್ಲೇ ಈ ಪ್ರಕ್ರಿಯೆ ಆರಂಭವಾಗಲಿದೆ” ಎಂದು ತಿಳಿಸಿದೆ.

 

 

ಎರಡೂ ದೇಶಗಳ ನಡುವಿನ ಗಡಿ ವಿವಾದ ಇರ್ತತ್ಯವಾಗಲು ಸೆ.3 ರಿಂದ 5ರ ವರೆಗೆ ನಡೆಯಲಿರುವ ಬ್ರಿಕ್ಸ್‌ ಶೃಂಗಸಭೆಯೇ ಕಾರಣ ಎಂದು ಹೇಳಲಾಗುತ್ತಿದೆ. ಈ ಸಮಾವೇಶದಲ್ಲಿ ಚೀನಾ ಅಧ್ಯಕ್ಷ ಕ್ಲಿಜಿಂಗ್‌ಪಿಂಗ್‌, ಪ್ರಧಾನಿ ನರೇಂದ್ರ ಮೋದಿ, ಬ್ರೆಜಿಲ್‌, ದಕ್ಷಿಣ ಆಫ್ರಿಕಾ ಮತ್ತು ರಷ್ಯಾದ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಚೀನಾ ರಾಜಧಾನಿ ಬೀಜಿಂಗ್‌ನಲ್ಲೇ ಈ ಸಮಾವೇಶ ನಡೆಯಲಿದ್ದು, ಭಾರತ-ಚೀನಾ ನಡುವಿನ ಜಗಳ ಸಮಾವೇಶಕ್ಕೆ ತೊಂದರೆ ಮಾಡಬಾರದು ಎಂಬ ಉದ್ದೇಶದಿಂದ ಈ ಗಡಿ ವಿವಾದ ಕೊನೆಗಾಣಿಸಲಾಗಿದೆ ಎಂದು ಹೇಳಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top