fbpx
ಆರೋಗ್ಯ

ವಾರ್ಟ್ಜ್ ಅಥವಾ ಪುಲ್ಲ ಪುರೆ ಸಮಸ್ಯೆಗೆ ಧಿಡೀರ್ ಪರಿಹಾರ ಬೇಕಂದ್ರೆ , ಸುಲಭವಾಗಿ ಸಿಗೋ ಈ 5 ಪದಾರ್ಥಗಳು ಸಾಕು!

ವಾರ್ಟ್ಜ್ ಅಥವಾ ಪುಲ್ಲ ಪುರೆ ಸಮಸ್ಯೆಗೆ ಧಿಡೀರ್ ಪರಿಹಾರ ಬೇಕಂದ್ರೆ , ಸುಲಭವಾಗಿ ಸಿಗೋ ಈ 5 ಪದಾರ್ಥಗಳು ಸಾಕು!


ಚರ್ಮದ ಮೇಲ್ಪದರದಲ್ಲಿ ಅನಾವಶ್ಯಕವಾಗಿ ಬೆಳೆಯುವ ಚರ್ಮದ ಬೆಳವಣಿಗೆಯನ್ನು ಪುಲ್ಲ ಪುರೆ ಎಂದು ಕರೆಯುತ್ತೇವೆ ,ಕಂಕುಳ ಕೆಳಗೆ ಕಣ್ಣಿನ ಕೆಳಭಾಗದಲ್ಲಿ ಎದೆಯ ಮೇಲೆ ಹಾಗೂ ಹೆಚ್ಚಾಗಿ ಕತ್ತಿನ ಮೇಲೆ ಇವು ಕಾಣಿಸಿಕೊಳ್ಳುತ್ತವೆ.

ಈ ಪುಲ್ಲ ಪುರೆ ಸಮಸ್ಯೆಗೆ ನೈಸರ್ಗಿಕ ಮನೆ ಮದ್ದುಗಳು ಹೀಗಿವೆ :

ಶಂಖ ಭಸ್ಮ ಮತ್ತು ಸರ್ಜ ಕ್ಷಾರ

 

 

ಶಂಖ ಭಸ್ಮ ಮತ್ತು ಸರ್ಜ ಕ್ಷಾರ ಎಂದರೆ ಇಂಗ್ಲಿಷ್ ನಲ್ಲಿ ಸೋಡಿಯಂ ಬೈಕಾರ್ಬೊನೇಟ್ ಇಂಪುರ ಈ ಎರಡು ವಸ್ತುಗಳು ಗ್ರಂಥಿಗೆ ಅಂಗಡಿಗಳಲ್ಲಿ ಹೆಚ್ಚಾಗಿ ದೊರೆಯುತ್ತವೆ , ಶಂಖ ಭಸ್ಮ ಈಗಾಗಲೇ ಪುಡಿಯ ರೂಪದಲ್ಲಿ ದೊರೆಯುತ್ತದೆ ಮತ್ತು ಸರ್ಜ ಕ್ಷಾರ ಗಟ್ಟಿಯಾಗಿ ಇರುತ್ತದೆ , ಇವೆರಡನ್ನೂ ನುಣ್ಣಗೆ ಪುಡಿ ಮಾಡಿ , ಎರಡನ್ನು ಹತ್ತು ಹತ್ತು ಗ್ರಾಂ ಬೆರೆಸಿ  ಪುಲ್ಲ ಪುರೆ ಇರುವ ಭಾಗಕ್ಕೆ ಹಚ್ಚಿ ದಿನಕ್ಕೆ ಎರಡ್ ಬಾರಿ ಈ ಚಿಕಿತ್ಸೆ ನಡೆಸಿದರೆ ಪುಲ್ಲ ಪುರೆ ಹೆಸರಿಲ್ಲದಂತೆ ಮಾಯವಾಗುತ್ತದೆ .

ಆಪಲ್ ಸೈಡರ್ ವಿನೆಗರ್

 

ಆಪಲ್ ಸೈಡರ್ ವಿನೆಗರ್ ಅನ್ನು ಹತ್ತಿಯಲ್ಲಿ ಅದ್ದಿ ನಂತ್ರ ಪುಲ್ಲ ಪುರೆ ಇರುವ ಜಾಗಕ್ಕೆ ಹಚ್ಚಿ ೪-೫ ಗಂಟೆ ಹಾಗೆ ಬಿಟ್ಟು ಬಿಡಿ ಆನಂತರ ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ , ದಿನಕ್ಕೆ ಒಂದು ಬಾರಿ ಈ ಕ್ರಿಯೆ ಮುಂದುವರಿಸಿದರೆ ಪುಲ್ಲ ಪುರೆ ಮಾಯವಾಗುತ್ತದೆ .

ಸುಣ್ಣ ಮತ್ತು ಹರಳೆಣ್ಣೆ :

 

ಸ್ವಲ್ಪ ಸುಣ್ಣ ಹಾಗು ಹರಳೆಣ್ಣೆಯನ್ನು ಮಿಶ್ರಣ ಮಾಡಿ ಪುಲ್ಲ ಪುರೆ ಇರುವ ಜಾಗಕ್ಕೆ ಹಚ್ಚಿ ಹತ್ತು ನಿಮಿಷಗಳ ಕಾಲ ಹಾಗೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ .
ಎರಡು ಮೂರು ದಿನಗಳಲ್ಲಿ ಈ ಚಿಕಿತ್ಸೆಯಿಂದ ಪುಲ್ಲ ಪುರೆ ಮಾಯವಾಗುತ್ತದೆ .

ಬೆಳ್ಳುಳ್ಳಿ :

ಬೆಳ್ಳುಳ್ಳಿಯನ್ನು ಚೆನ್ನಾಗಿ ಜಗ್ಗಿ ವಾರ್ಟ್ಸ್ ಇರುವ ಸ್ಥಳಕ್ಕೆ ಹಚ್ಚಬೇಕು ನಂತರ ಒಂದು ಗಂಟೆ ಹಾಗೆಯೇ ಬಿಡಬೇಕು ಈ ರೀತಿ ಮೂರ್ನಾಲ್ಕು ಬಾರಿ ಮಾಡಿದರೆ ಪುಲ್ಲಾಪುರೆ ಮಾಯಾವಾಗುತ್ತದೆ.ಪ್ರತಿಬಾರಿ ಚೆನ್ನಾಗಿ ಚರ್ಮವನ್ನು ತೊಳೆದುಕೊಳ್ಳಬೇಕು .

ಬಾಳೆ ಚಿಪ್ಪೇ ಮತ್ತು ಬೇಕಿಂಗ್ ಸೋಡಾ :

ಬಾಳೆ ಚಿಪ್ಪೆಯನ್ನು ಸಣ್ಣಕ್ಕೆ ಕತ್ತರಿಸಿ , ಅಡುಗೆ ಸೋಡದಲ್ಲಿ ಅದ್ದಿ ಪುಲ್ಲ ಪುರೆ ಇರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡುವುದು ಹೀಗೆ ಎರಡು ಮೂರು ದಿನ ಮುಂದುವರಿಸಿದರೆ ಪುಲ್ಲ ಪುರೆ ಮಾಯವಾಗುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top