fbpx
ಉದ್ಯೋಗ

ಕೇಂದ್ರೀಯ ಗುಪ್ತಚರ ಸಂಸ್ಥೆಯಲ್ಲಿ 1430 ಉದ್ಯೋಗವಕಾಶಗಳು ಬೇಗ ಬೇಗ ಅರ್ಜಿ ಸಲ್ಲಿಸಿ

ಭಾರತ ಸರಕಾರದ ಗುಪ್ತಚರ ಸಂಸ್ಥೆಯಲ್ಲಿ (Intelligence Bureau) ಖಾಲಿ ಇರುವ 1,430 ಸಹಾಯಕ ಕೇಂದ್ರೀಯ ಗುಪ್ತಚರ ಅಧಿಕಾರಿ (Assistant Central Intelligence Officers-II (ACIOs)) ಹುದ್ದೆಗಳ ನೇರ ನೇಮಕಾತಿಗಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

 

ಹುದ್ದೆಯ ವಿವರ:

ಹುದ್ದೆ :   ಸಹಾಯಕ ಕೇಂದ್ರೀಯ ಗುಪ್ತಚರ ಅಧಿಕಾರಿ

ವೇತನ ಶ್ರೇಣಿ: ರೂ. 9,300 – ರೂ. 34,800

 

ವಿದ್ಯಾರ್ಹತೆ: ಮಾನ್ಯತೆ ಹೊಂದಿದ ವಿದ್ಯಾಸಂಸ್ಥೆಯಿಂದ ಪದವಿ ಪಡೆದಿರಬೇಕು ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

 

ವಯೋಮಿತಿ: 02 /09 / 2017 ಕ್ಕೆ ಅನ್ವಯವಾಗುವಂತೆ ಕನಿಷ್ಟ 18 ವರ್ಷ ಮತ್ತು ಗರಿಷ್ಟ 27 ವರ್ಷವಾಗಿರಬೇಕು.

 

ಎಸ್ ಸಿ/ಎಸ್ ಟಿ : 05 ವರ್ಷ ಸಡಿಲಿಕೆ ಮತ್ತು ಒಬಿಸಿ : 3 ವರ್ಷ ಸಡಿಲಿಕೆ

 

ಆಯ್ಕೆ ವಿಧಾನ:

 

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರೀಯೆ ನಡೆಯಲಿದೆ.

 

ಅರ್ಜಿ ಶುಲ್ಕ:

 

ಸಾಮಾನ್ಯ ಮತ್ತು ಒಬಿಸಿ ಪುರುಷ ಅಭ್ಯರ್ಥಿಗಳಿಗೆ ರೂ. 100/- ಮತ್ತು ಎಸ್ ಸಿ ಎಸ್ ಟಿ ಮತ್ತು ಇತರ ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02 / 09 / 2017

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲೆಯೊಂದಿಗೆ ಗೃಹ ಸಚಿವಾಲಯದ ವೆಬ್ ಸೈಟ್ http://www.mha.nic.in/ ಗೆ ಹೋಗಿ ಅರ್ಜಿ ಸಲ್ಲಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top