ದೇವರು

ಒಂದು ಕ್ಷಣ ಬಿಡುವಿಲ್ಲದೆ ದಿನದ 24 ಗಂಟೆಯೂ ಈ ಗಣೇಶನಿಗೆ ಮಂಗಳಾರತಿ ಆಗುತ್ತಿದೆ! ಹೇಗೆ ಗೊತ್ತಾ? ಈ ವಿಡಿಯೋ ನೋಡಿ.

ಒಂದು ಕ್ಷಣ ಬಿಡುವಿಲ್ಲದೆ ದಿನದ 24 ಗಂಟೆಯೂ ಈ ಗಣೇಶನಿಗೆ ಮಂಗಳಾರತಿ ಆಗುತ್ತಿದೆ! ಹೇಗೆ ಗೊತ್ತಾ? ಈ ವಿಡಿಯೋ ನೋಡಿ.

 

 

ಶ್ರೀ ಗಣೇಶ ಹಿಂದೂ ಧರ್ಮದ ಪ್ರಮುಖ ದೇವತೆಗಳಲ್ಲಿ ಒಬ್ಬ. ನಮ್ಮ ಭಾರತೀಯ ಪರಂಪರೆಯಲ್ಲಿ ಎಲ್ಲಕ್ಕಿಂತಲೂ, ಎಲ್ಲರಿಗಿಂತಲೂ ಮೊದಲ ಪೂಜೆಸುವ ದೇವರು. ಜನಜೀವನದ ಎಲ್ಲ ಶುಭಕಾರ್ಯಗಳಲ್ಲೂ-ವಿದ್ಯಾಭ್ಯಾಸ, ವಿವಾಹ, ಉಪನಯನ, ಗೃಹಪ್ರವೇಶ, ಇತ್ಯಾದಿ-ಮೊದಲ ಪುಜೆಯನ್ನು ಇಂದಿಗೂ ಭಾವುಕರು ಗಣಪತಿಗೆ ಸಲ್ಲಿಸುತ್ತಾರೆ. ನಿತ್ಯ ಆತನ ದರ್ಶನ ಮಾಡುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಎಲ್ಲ ಕಾರ್ಯಗಳು ಯಶಸ್ವಿಯಾಗಿ ನೆರವೇರುತ್ತವೆ.

ನಾವು ಯಾವುದೇ ಕೆಲಸವನ್ನು ಪ್ರಾರಂಭಿಸುವ ಮುನ್ನ ಗಣೇಶನಿಗೆ ಮೊದಲು ಪೂಜೆ ಸಲ್ಲಿಸಿಯೇ,ಪ್ರಾರ್ಥನೆ ಮಾಡಿ ನಂತರವೇ ಕೆಲಸವನ್ನು ಪ್ರಾರಂಭಿಸಬೇಕು.ಗಣೇಶನ ಭಕ್ತರು ಗಣೇಶನ ಮೂರ್ತಿಯನ್ನು ಮನೆಯಲ್ಲಿ ಸ್ಥಾಪಿಸುತ್ತಾರೆ. ಗಣೇಶನಿಗೆ ಪೂಜೆ ಮಾಡುತ್ತಾರೆ. ಗಣೇಶನ ಹಬ್ಬ ಬಂದರೆ ಸಾಕು ಗಣೇಶನ ಭಕ್ತರುಗಳು ವಿವಿಧ ಬಗೆಯ ಗಣೇಶನ ಮೂರ್ತಿಗಳನ್ನು ಕೂರಿಸಿ ಪೂಜೆ ಮಾಡುತ್ತಾರೆ ಎಂದು ನೀವು ಕೇಳಿರುತ್ತೀರಿ ಆದರೆ ಇನ್ನೂ ವಿಶೇಷ ಏನಪ್ಪಾ ಅಂದ್ರೆ ಇಲ್ಲೊಬ್ಬರು ಗಣೇಶನಿಗೆ ಪೂಜೆ ಮಾಡಲು ರೋಬೋಟ್ ಅನ್ನು ತಯಾರಿಸಿದ್ದಾರೆ.

ಹೌದು ಪುಣೆಯಲ್ಲಿ ಕೂರಿಸಿರುವ ಗಣೇಶನ ಮೂರ್ತಿ ದಿನದ 24 ಗಂಟೆಯೂ ಸತತವಾಗಿ ಪೂಜೆ ಮಾಡುವ ಉದ್ದೇಶದಿಂದ ಇಲ್ಲಿನ ಉದ್ಯಮಿಯೊಬ್ಬರು ಮಾನವ ನಿರ್ಮಿತ ರೋಬೋಟ್ ಒಂದನ್ನ ತಯಾರಿಸಿದ್ದಾರೆ. ಈ ರೋಬೋಟ್ ದಿನ 24 ಗಂಟೆಗಳ ಕಾಲ ಒಂದು ಕ್ಷಣವೂ ಬಿಡುವಿಲ್ಲದೆ ಗಣೇಶನಿಗೆ ಮಂಗಳಾರತಿ ಮಾಡುತ್ತಿದೆ. ಈ ರೋಬೋಟ್ ಅಲ್ಲಿನ ಜನರ ಗಮನವನ್ನು ಸೆಳೆದಿದ್ದು ರೋಬೋಟ್ ಪೂಜೆ ಮಾಡುವುದನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ.

ರೋಬೋಟ್ ಗಣೇಶನಿಗೆ ಮಂಗಳಾರತಿ ಮಾಡುವುದನ್ನು ಈ ವಿಡಿಯೋದಲ್ಲಿ ನೋಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top