fbpx
ಸಮಾಚಾರ

ಒಂದು ಕಾಲದಲ್ಲಿ ಒಂದೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಸೆಕ್ಯುರಿಟಿ ಗಾರ್ಡ್ ನ ಮಗ ಈಗ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್..ಯಾರು ಗೊತ್ತಾ?

ಒಂದು ಕಾಲದಲ್ಲಿ ಒಂದೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಸೆಕ್ಯುರಿಟಿ ಗಾರ್ಡ್ ನ ಮಗ ಈಗ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್..ಯಾರು ಗೊತ್ತಾ?

 

 

ಕಷ್ಟಪಟ್ಟು ಕೆಲಸ ಮಾಡಿದರೆ ಮಾಡುವ ಕೆಲಸದಲ್ಲಿ ಯಾವತ್ತೂ ಒಳ್ಳೆಯ ಫಲ ಸಿಕ್ಕೇ ಸಿಗುತ್ತದೆ. ಎಷ್ಟೇ ಅಡೆ ತಡೆಗಳಿದ್ದರೂ ಅವನ್ನೆಲ್ಲಾ ಮೆಟ್ಟಿನಿಂತುಕೊಂಡರೆ ಯಶಸ್ಸು ತಾನಾಗಿಯೇ ನಿಮ್ಮ ಹತ್ರ ಬರುತ್ತೆ ಎನ್ನುವುದಕ್ಕೆ ಈ ಕತೆಯೇ ಅತ್ಯುತ್ತಮ ಉದಾಹರಣೆ. ಟೀಮ್ ಇಂಡಿಯಾದ ಈ ಸ್ಟಾರ್ ಆಟಗಾರನನ್ನು ನೋಡಿದರೆ ಸಾಕು ಈತ ಪಕ್ಕ ಮಿಡಲ್ ಕ್ಲಾಸ್ ಫ್ಯಾಮಿಲಿ ಹುಡ್ಗ ಅಂತ ಎಂದು ಹೇಳಬಹುದು. ಅವ್ರೇ ರವೀಂದ್ರ ಜಡೇಜಾ. ಟೀಮ್ ಇಂಡಿಯಾದ ಪ್ರಮುಖ ಆಟಗಾರನಾಗಿರುವ ರವೀಂದ್ರ ಜಡೇಜಾ ತನ್ನ ಬಾಲ್ಯದಲ್ಲಿ ತುಂಬಾ ನೋವು ಕಷ್ಟಗಳಿಂದ ಬೆಳೆದು ಈ ಮಟ್ಟಕ್ಕೆ ಬೆಳೆದವರು ಅವರು ಹೇಗೆ ಈ ಎಲ್ಲಾ ಸಾಧನೆಗಳನ್ನು ಮಾಡಿದರು ಮತ್ತು ಜೀವನದಲ್ಲಿ ಎದುರಿಸಿದ ಸವಳುಗಳನ್ನ ತಿಳ್ಕೊಳೋಣ ಬನ್ನಿ.

 

 

ಜಡೇಜಾ 6.ಡಿಸೆಂಬರ್.1988 ರಂದು ಗುಜರಾತಿನ ಒಂದು ಬಡ ರಜಪೂತ ಕುಟುಂಬದಲ್ಲಿ ಜನಿಸಿದರು. ಜಡೇಜಾ ಅವರ ತಂದೆ ಒಂದು ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಸೆಕ್ಯೂರಿಟಿ ಆಗಿದ್ದರು. ಅವರ ತಾಯಿ ಒಂದು ಸಣ್ಣ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲ್ಸಮಾಡುತ್ತಿದ್ದರು.ಆ ಆಸ್ಪತ್ರೆಯಿಂದ ಅವರಿಗೆ ಒಂದು ರೂಮ್ ನೀಡಲಾಗಿತ್ತು ಆ ರೂಮ್ ನಲ್ಲಿಯೇ ಜಡೇಜಾರವರ ಕುಟುಂಬ ಅವರ ಬಾಲ್ಯವನ್ನು ಕಳೆದರು. ಒಂದೊತ್ತಿನ ಊಟಕ್ಕೂ ಕಷ್ಟ ಪಡುವಂತಹ ಕಾಲವನ್ನು ಅವರ ಬಾಲ್ಯದಲ್ಲಿ ಎದುರಿಸಿದ್ದರು. ಬಾಲ್ಯದಲ್ಲಿ ಸುಖ ಸಂತೋಷಗಳಿಂದ ವಂಚಿತರಾಗಿ ಬೆಳೆದ ಜಡೇಜಾ ತನ್ನ 17ನೆ ವಯಸ್ಸಿನಲ್ಲಿ ತನ್ನ ತಾಯಿಯನ್ನು ಕಳೆದುಕೊಂಡರು. “ರಾಷ್ಟಮಟ್ಟದಲ್ಲಿ ನನ್ನ ಮಗ ಹೆಸರು ಮಾಡಬೇಕು” ಎಂದು ಆಸೆ ಪಟ್ಟಿದ್ದ ತನ್ನ ತಾಯಿಯ ಆಸೆಯನ್ನು ತಾಯಿಯ ಮರಣದ ನಂತರ ಈಡೇರಿಸಲು ಬಹಳ ಕಷ್ಟಪಟ್ಟರು.

 

 

ಜಡೇಜಾ ಸ್ಕೂಲ್ ಗೆ ಹೋಗುವಾಗ ಅವರ ಸ್ಕೂಲ್ ನಲ್ಲಿ ಪ್ರತಿದಿದ ಕ್ರಿಕೆಟ್ ಆಡುತ್ತಿದ್ದರು ಹಾಗಾಗಿ ಒಂದು ದಿನವೂ ಸ್ಕೂಲ್ ಗೆ ಹೋಗುವುದನ್ನು ತಪ್ಪಿಸದೆ ಹೋಗುತ್ತಿದ್ದರು.ಆದರೆ ಅವರ ಸೀನಿಯರ್ ಗಳು ಅವರಿಗೆ ಬ್ಯಾಟಿಂಗ್ ಬೌಲಿಂಗ್ ಕೊಡದೆ ಇದ್ದಾಗ ಅವರು ಅಳುತ್ತಾ ಮಲಗಿದ್ದುಂಟು.

ಈ ನಡುವೆ ಜಡೇಜಾರ ಕ್ರಿಕೆಟ್ ಮೇಲಿನ ಆಸಕ್ತಿಯನ್ನು ನೋಡಿದ ಮಹೇಂದ್ರ ಸಿಂಗ್ ಚೌಹಾಣ್ ಎಂಬ ಪೊಲೀಸ್ ಆಫೀಸರ್ ಕಮ್ ಕ್ರಿಕೆಟ್ ಕೋಚ್ ಜಡೇಜಾಗೆ ಕ್ರಿಕೆಟ್ ವಿಷಯದಲ್ಲಿ ಗುರುವಾದರು. ಚೌಹಾಣ್ ರ ಮಾರ್ಗದರ್ಶನದಲ್ಲಿ ಜಡೇಜಾ ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸವನ್ನ ಮಾಡಲಾರಂಭಿಸಿದರು. ಪ್ರಾರಂಭದಲ್ಲಿ ಫಾಸ್ಟ್ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದ ಜಡೇಜಾ ಚೌಹಾಣ್ ರ ಮಾರ್ಗದರ್ಶನದಂತೆ ಎಡಗೈ ಸ್ಪಿನ್ನರ್ ಆಗಿ ಬದಲಾದರು ಹೀಗೆ ಅಭ್ಯಾಸದ ವಿಷ್ಯದಲ್ಲಿ ತುಂಬಾ ಸ್ಟ್ರಿಕ್ಟ್ ಮತ್ತು ಡಿಸಿಪ್ಲಿನ್ ಆಗಿದ್ದ ಚೌಹಾಣ್ ಜಡೇಜಾರ ಕ್ರಿಕೆಟ್ ಭವಿಷ್ಯವನ್ನು ಬದಲಿಸಿದರು.

 

 

ಜಡೇಜಾ ಅವರಿಗೆ ನಿದ್ರೆಯಲ್ಲಿ ನಡೆಯುವ ಕಾಯಿಲೆ ಇತ್ತು ಒಂದು ದಿನ ಇದರಿಂದ ಕಿರಿ ಕಿರಿಗೊಂಡ ಚೌಹಾಣ್ ಜಡೇಜಾರ ಕಪಾಳಕ್ಕೆ ಭಾರಿಸಿದ್ದರಂತೆ. ಒಂದು ಕ್ಲಬ್ ಪಂದ್ಯದಲ್ಲಿ ಅತಿ ಹೆಚ್ಚು ರನ್ನು ಬಿಟ್ಟುಕೊಟ್ಟಗಲೂ ಜಡೇಜಾ ಗೆ ಕಪಾಳಕ್ಕೆ ಹೊಡಿದಿದ್ದರು.

ಜಡೇಜಾ ತನ್ನ 16ನೆ ವಯಸ್ಸಿನಲ್ಲಿ ಭಾರತದ ಅಂಡರ್19 ತಂಡಕ್ಕೆ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿ 2008ರಲ್ಲಿ ಭಾರತಕ್ಕೆ ಅಂಡರ್19 ವಿಶ್ವಕಪ್ ಅನ್ನು ಗೆಲ್ಲಿಸಿಕೊಡಲು ಪ್ರಮುಖ ಪಾತ್ರವನ್ನು ವಹಿಸಿಕೊಂಡಿದ್ದರು. ಆ ವಿಶ್ವಕಪ್ ನಲ್ಲಿ ಭಾರತ ತಂಡಕ್ಕೆ ಉಪನಾಯಕ ನಾಗಿದ್ದರು.ಎಲ್ಲವೂ ಚನ್ನಾಗಿ ಇರುವಾಗ ಅವರ ತಾಯಿ ಮರಣ ಹೊಂದುತ್ತಾರೆ ಆಗ ಜಡೇಜಾ ಮಾನಸಿಕವಾಗಿ ಕುಗ್ಗುತ್ತಾರೆ. ಅವರ ಸಹೋದರಿ ಅವರಿಗೆ ಪ್ರೋತ್ಸಾಹಿಸಿದರು.

 

 

ಜಡೇಜಾ 2007ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.ಸೌರಾಷ್ಟ್ರ ತಂಡದ ಪರವಾಗಿ ರಣಜಿ ಟೂರ್ನಿಯಲ್ಲಿ ಆಡುತ್ತಾರೆ. 2012 ರ ರಣಜಿ ಟೂರ್ನಿಯಲ್ಲಿ ದಾಖಲೆಯ ಮೂರು ತ್ರಿಶತಕಗಳನ್ನು ಭಾರಿಸಿ ಈ ಸಾಧನೆ ಮಾಡಿದ ಭಾರತದ ಏಕೈಕ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗುತ್ತಾರೆ.2008-09 ರ ಸಾಲಿನ ರಣಜಿ ಟ್ರೋಫಿಯಲ್ಲಿ 739 ರನ್ ಗಳಿಸಿ ಮತ್ತು 42 ವಿಕೆಟ್ ಪಡೆದು ಉತ್ತಮ ಪದರ್ಶನ ನೀಡುವುದರ ಮೂಲಕ ಭಾರತದ ಅಂತರಾಷ್ಟ್ರೀಯ ತಂಡಕ್ಕೆ ಆಯ್ಕೆ ಯಾದರು.

 

 

ಜಡೇಜಾರ ಪಾದಾರ್ಪಣೆ ಪಂದ್ಯದಲ್ಲೇ(ಶ್ರೀಲಂಕ ವಿರುದ್ಧ)ಅಜೇಯ 60 ರನ್ ಗಳಿಸಿದ್ದರು.ಭಾರತ ಗೆದ್ದಿದ್ದ 2013 ರ ಚಾಂಪಿಯನ್ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. Icc ರಾಂಕಿಂಗ್ ನಲ್ಲಿ ನಂ.1 ಸ್ಥಾನಗಳಿಸಿದ ಎರಡನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇವರಿಗೂ ಮುಂಚೆ ಕನ್ನಡಿಗ ಅನಿಲ್ ಕುಂಬ್ಳೆ ಆ ಸಾಧನೆಯನ್ನು ಮಾಡಿದ್ದರು. ಹೀಗೆ ತಮ್ಮ ತಾಯಿಯ ಆಸೆಯಂತೆ ಜಡೇಜಾ ರಾಷ್ಟ್ರೀಯ ಮಟ್ಟ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್ ಆಗಿ ಹೆಸರು ಮಾಡಿರುವ ಜಡೇಜಾ ಅವರ ಈ ಯಶಸ್ಸನ್ನು ನೋಡಲು ತಮ್ಮ ತಾಯಿಯೇ ನಮ್ಮ ಬಳಿ ಇಲ್ಲ ಎಂದು ನೊಂದುಕೊಳ್ಳುತ್ತಾರೆ ಜಡೇಜಾ

 

 

ಶಿಸ್ತಿನ ವಿಚಾರದಲ್ಲಿ ತನ್ನ ಕೋಚ್ ಇಂದ ಎಲ್ಲರೆದುರು ಕಪಾಳಕ್ಕೆ ಹೊಡೆಸಿಕೊಂಡಿದ್ದ, ನಿದ್ದೆಯಲ್ಲಿ ನಡೆಯುವ ಕಾಯಿಲೆಯಿದ್ದ, ಸಾಮಾನ್ಯ ಸೆಕ್ಯುರಿಟಿ ಗಾರ್ಡ್ ನ ಮಗ ಹಾಗೂ ತನ್ನ 17ನೇ ವಯಸ್ಸಿನಲ್ಲಿ ಜೀವನಕ್ಕೆ ಆಧಾರವಾಗಿದ್ದ ತನ್ನ ತಾಯಿಯನ್ನು ಕಳೆದುಕೊಂಡು ತನ್ನ ತಾಯಿಯ ಆಸೆಯನ್ನು ಈಡೇರಿಸಿದ ರವೀಂದ್ರ ಜಡೇಜಾ ರ ಜೀವನ ದೇಶದ ಎಲ್ಲಾ ಬಡ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದೆ ಎಂದರೆ ತಪ್ಪಾಗುವುದಿಲ್ಲ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top