fbpx
ಸಾಧನೆ

ಕೇರಳದ ಈ ಖಡಕ್ ಆಫೀಸರ್ ತಾವು ಆರನೇ ಕ್ಲಾಸ್ ನಲ್ಲಿದ್ದಾಗಲೇ ಐಪಿಎಸ್ ಆಗಬೇಕೆಂದು ಕನಸುಕಂಡಿದ್ದರು.

ಕೇರಳದ ಈ ಖಡಕ್ ಆಫೀಸರ್ ತಾವು ಆರನೇ ಕ್ಲಾಸ್ ನಲ್ಲಿದ್ದಾಗಲೇ ಐಪಿಎಸ್ ಆಗಬೇಕೆಂದು ಕನಸುಕಂಡಿದ್ದರು.

 

 

ಚಿಕ್ಕ ಕನಸನ್ನು ಕಾಣುವುದು ಒಂದು ದೊಡ್ಡ ಅಪರಾಧ ಎಂದು ಅಬ್ದುಲ್ ಕಲಾಂ ಹೇಳುತ್ತಾರೆ. ಎಲ್ಲರೂ ಕನಸನ್ನು ಕಾಣುತ್ತಾರೆ ಆಸೆ ಪಡುತ್ತಾರೆ ಆದರೆ ಹೆಚ್ಚು ಅವರವರ ಕನಸನ್ನು ಕೇವಲ ಕನಸುಗಳನ್ನಾಗೆ ಉಳಿಸುಕೊಳ್ಳುತ್ತಾರೆ. ಇನ್ನೂ ಕೆಲವೇ ಕೆಲವರು ಮಾತ್ರ ತಮ್ಮ ಕನಸುಗಳನ್ನು ನನಸು ಮಾಡಲು ಕಠಿಣ ಪರಿಶ್ರಮ ಪಡುತ್ತಾರೆ. ಅಂತಹ ಕೆಲವೇ ಕೆಲವರಲ್ಲಿ ಮೇರಿನ್ ಜೋಸೆಫ್ ಸಹ ಒಬ್ಬರು. ತಮ್ಮ 27ನೇ ವಯಸ್ಸಿಗೆ ಐಪಿಎಸ್‍ ಅಧಿಕಾರಿಯಾಗಿ ಸದ್ಯ ಕೇರಳ ಸಶಸ್ತ್ರ ಪಡೆಯ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಖಡಕ್ ಆಫೀಸರ್ ಎಂದೇ ಹೆಸರುವಾಸಿಯಾಗಿರುವ ಅವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

 

 

ಅವರು ಆರನೇ ಕ್ಲಾಸ್ ನಲ್ಲಿದ್ದಾಗಲೇ ಐಪಿಎಸ್ ಅಧಿಕಾರಿಯಾಗಬೇಕು ಎಂದು ಕನಸು ಕಂಡಿದ್ದರು. ಅವರ ಆ ಕನಸನ್ನು ನನಸು ಮಾಡಿಕೊಳ್ಳಲು ಅವರು ಅವಾಗಿಂದಲೇ ಕೆಲಸವನ್ನು ಆರಂಭಿಸಿದ್ದರು. ಕೇರಳ ಕ್ಯಾಡರ್‌ನ ಅತ್ಯಂತ ಕಿರಿಯ ವಯಸ್ಸಿನ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗುವ ಮೂಲಕ ಅವರು ತಮ್ಮ ಕನಸನ್ನು ನನಸು ಮಾಡಿಕೊಂಡರು. ಕೇರಳದಲ್ಲೇ ಹುಟ್ಟಿ ಬೆಳೆದ ಮೇರಿನ್ ದೆಹಲಿಯಲ್ಲಿ ಶಿಕ್ಷಣ ಪಡೆದು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2012ರಲ್ಲಿ ಸಿವಿಲ್ ಸರ್ವಿಸಸ್ ಪರೀಕ್ಷೆ ಬರೆದು ತಮ್ಮ ಮೊದಲ ಪ್ರಯತ್ನದಲ್ಲೇ ಪಾಸಾದರು. ಜೋಸೆಫ್ ಮೇರಿನ್ ಅವರು 2015ರಲ್ಲಿ ಓರ್ವ ಮನೋವೈದ್ಯರನ್ನು ಮದುವೆಯಾದರು.

 

 

ಖಡಕ್ ಅಧಿಕಾರಿ ಎನ್ನಿಸಿಕೊಂಡಿದ್ದ ಇವರು ನೋಡುವುದಕ್ಕೆ ಸುರದ್ರೂಪಿಯಾಗಿದ್ದರು ಇವರು 2016ರಲ್ಲಿ ಬ್ಯೂಟಿಫುಲ್ ಆಫೀಸರ್ ಆಫ್ ಇಂಡಿಯಾ ಎಂಬ ಗೌರವಕ್ಕೂ ಪಾತ್ರರಾದರು. ಆದರೆ ತಮ್ಮ ಫೇಸ್‌ಬುಕ್‌ನಲ್ಲಿ ಈ ಪ್ರಶಸ್ತಿಯನ್ನು ನನಗೆ ಬೇಡ ಎಂದು ತಿರಸ್ಕರಿಸಿದ್ದರು. “ಭಾರತದ ಅಧಿಕಾರಶಾಹಿ ವ್ಯವಸ್ಥೆಯಲ್ಲಿ ನನಗಿಂತಲೂ ಅತ್ಯಂತ ಕಷ್ಟಪಡುವ, ಬುದ್ಧಿವಂತಿಕೆಯಿಂದ ಕೆಲಸ ಮಾಡುವ ಆಫೀಸರ್ ಗಳು ಅನೇಕ ಜನ ಇದ್ದಾರೆ. ಜನರ ಪ್ರಸಂಶೆಯನ್ನು ಗಳಿಸಿದ ಅನೇಕ ಆಫೀಸರ್ ಗಳಿದ್ದಾರೆ ಅಂತಹವರಿಗೆ ಪ್ರಶಸ್ತಿ ಕೊಟ್ಟು ಸನ್ಮಾನಿಸಿ” ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

 

 

ಭಾರತ ದೇಶದಲ್ಲಿ ಬೆರಳೆಣಿಕೆಯಷ್ಟು ಮಂದಿ ಮಹಿಳೆಯರು ಮಾತ್ರ ಐಪಿಎಸ್‌ನಂತಹ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಐಪಿಎಸ್ ಅಧಿಕಾರಿಯಾಗಬೇಕು ಎಂದು ಕನಸು ಕಾಣುವ ದೇಶದ ಎಷ್ಟೋ ಯುವತಿಯರಿಗೆ ಮೇರಿನ್ ಜೋಸೆಫ್ ಸ್ಫೂರ್ತಿಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top