fbpx
ಜಾಗೃತಿ

ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡೋಕೆ ಪಣತೊಟ್ಟು ಸ್ವತಃ ಸಲಿಕೆ ಇಡಿದು ಗುಂಡಿ ತೋಡಲು ಆರಂಭಿಸಿದ ಸಿಇಒ ಅಶ್ವತಿ…

ಸಿಟ್ಟಿಗೆದ್ದು CEO ಅಶ್ವತಿ ಹಾರೆ – ಗುದ್ದಲಿ ಹಾಕಿ ಅವರೆ ತೆಗೆದರು ಗೊಂಡಿ

ದಾವಣಗೆರೆ ಜಿಲ್ಲೆಯಲ್ಲಿ ನಡೆದ ಈ ಕ್ರಾಂತಿಯ ಹಿಂದಿ ಶಕ್ತಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತಿ. ಗ್ರಾಮಗಳಲ್ಲಿ ಶೌಚಾಲಯ ಇಲ್ಲದ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದಾರೆ ಸಿಇಒ ಅಶ್ವತಿ ಅವರು.

ಕೆಲಸ  ಅಂದ್ರೆ ಇದಪ್ಪ…

ದಾವಣಗೆರೆಯನ್ನು ಅಕ್ಟೋಬರ್ 2ರೊಳಗೆ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕೆಂದು ಸಿಇಒ ಪಣತೊಟ್ಟಿದ್ದು, ಇಂದು ಶೌಚಾಲಯ ಕಟ್ಟಲು ಗುಂಡಿ ತೆಗೆಸುವಂತೆ ಗ್ರಾಮದ ಮಹಿಳೆಯರಿಗೆ ಒತ್ತಾಯಿಸಿದ್ದರು. ಇದಕ್ಕೆ ಗ್ರಾಮದ ಬೈರಪ್ಪ ಎಂಬುವರು ಮನೆಯಲ್ಲಿ ಗರ್ಭಿಣಿ ಮಹಿಳೆ ಇರೋ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಅವರ ಮನ ಪರಿವರ್ತನೆ ಮಾಡಲೂ ಸ್ವತಃ ತಾವೇ  ಸಲಿಕೆ ಹಿಡಿದು ಗುಂಡಿ ತೆಗೆಯಲು ಮುಂದಾದರು. ಈ ಮೂಲಕ ಅಶ್ವತಿ ಅವರು ಸುದ್ದಿ ಮಾಡಿದ್ದಾರೆ.

ಸ್ವಚ್ಛ ಭಾರತ ಅಭಿಯಾನ 2017-18ನೇ ಸಾಲಿನಲ್ಲಿ ಜಿಲ್ಲೆಯನ್ನು ಬಯಲು ಶೌಚ ಮುಕ್ತವಾಗಿಸಲು ಅವರು ಪಣ ತೊಟ್ಟಿದ್ದಾರೆ. ಅದಕ್ಕಾಗಿ ಶೌಚಾಲಯ ನಿರ್ಮಿಸಿಕೊಂಡ ಗರ್ಭಿಣಿಯರಿಗೆ ಸೀಮಂತ, ಬಾಣಂತಿಯರಿಗೆ ಮಡಿಲು ತುಂಬುವ ಯೋಜನೆ, ಶೌಚಾಲಯ ನಿರ್ಮಿಸಿಕೊಂಡ ಶಾಲಾ ಮಕ್ಕಳಿಗೆ ಪ್ರಶಂಸಾ ಪತ್ರ ನೀಡುವ ಕಾರ್ಯ ಮಾಡುತ್ತಿದ್ದಾರೆ.

ಮೂರು ತಿಂಗಳಿನಿಂದ ಪ್ರತಿ ಹಳ್ಳಿಗೂ ತೆರಳಿ ಗ್ರಾಮಸ್ಥರಿಗೆ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಇವರ ಕಾರ್ಯದ ಫಲವಾಗಿ ಬಯಲು ಶೌಚಾಲಯ ಮುಕ್ತ ಜಿಲ್ಲೆಗಳ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದ್ದ ದಾವಣಗೆರೆ ಇಂದು 3ನೇ ಸ್ಥಾನಕ್ಕೆ ಬಂದಿದೆ.

ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯನ್ನು ಅಕ್ಟೋಬರ್ 2ರಂದು ಬಯಲು ಶೌಚಾಲಯ ಮುಕ್ತ ಜಿಲ್ಲೆಯಾಗಿ ಘೋಷಣೆ ಮಾಡಬೇಕು ಎಂಬುದು ಅಶ್ವತಿ ಅವರ ಕನಸು. ಅದಕ್ಕಾಗಿ ಪ್ರಯತ್ನಗಳನ್ನು ಮಾಡುತ್ತಿದ್ದು, ಜನರು ಇವರಿಗೆ ಸಹಕಾರ ನೀಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top