fbpx
ಸಮಾಚಾರ

ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಕನ್ನಡತಿ..!

ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಕನ್ನಡತಿ..!

 

 

ಹೈದರಾಬಾದ್ ನಲ್ಲಿ ನಡೆದ ಪ್ರತಿಷ್ಠಿತ ರಿಲಯನ್ಸ್ ಜ್ಯುವೆಲ್-2017 ನ ಮಿಸ್ ಇಂಡಿಯಾ ಕಿರೀಟವನ್ನ ಕೋಲಾರದ ರಮ್ಯಾ ಸರಣ್ ಮುಡಿಗೇರಿಸಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 80 ಮಂದಿ ಮಾಡೆಲ್‌ಗಳ ಪೈಕಿ ಕನ್ನಡತಿ ರಮ್ಯಾ ಮಿಸ್ ಇಂಡಿಯಾ ಆಗಿ ಆಯ್ಕೆಯಾಗಿದ್ದಾರೆ.

 

 

ಕೋಲಾರದ ವಿನಾಯಕನಗರದ ಪೊಲೀಸ್ ಪೇದೆಯಾಗಿದ್ದ ದಿವಂಗತ ಆರ್.ಎ.ಸರಣ್ ಹಾಗೂ ಲಕ್ಷ್ಮೀ ಯವರ ಮಗಳು ರಮ್ಯಾ ಕೋಲಾರದಲ್ಲಿ ಪಿಯುಸಿವರೆಗೆ ತನ್ನ ವಿದ್ಯಾಭ್ಯಾಸವನ್ನ ಪೂರೈಸಿ, ನಂತರ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಆರ್ಕಿಟೆಕ್ಟರ್ ಎಂಜಿನಿಯರ್ ಮಾಡಿದ್ದಾರೆ.

 

 

ಕಳೆದ ಮಾರ್ಚ್‍ನಲ್ಲಿ ‘ಮಿಸ್ ಬೆಂಗಳೂರು’ ಪ್ರಶಸ್ತಿಯನ್ನು ಗೆದ್ದಿದ್ದ ರಮ್ಯಾ ಇದೀಗ ಪ್ರತಿಷ್ಠಿತ `ಮಿಸ್ ಇಂಡಿಯಾ’ ಸ್ಪರ್ಧೆಗೆ ಆಯ್ಕೆಯಾಗಿ `ಮಿಸ್ ಇಂಡಿಯಾ’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಪ್ರತಿಷ್ಠಿತ ಮಿಸ್ ಇಂಡಿಯಾ ಕಿರೀಟವನ್ನು ಗೆದ್ದ ಬಳಿಕ ಇದೆ ಮೊದಲ ಬಾರಿಗೆ ತಮ್ಮ ತವರಿಗೆ ಆಗಮಿಸಿದ್ದ ರಮ್ಯಾರನ್ನುಅವರು ಓದಿದ ಕೋಲಾರದ ಮಹಿಳಾ ಕಾಲೇಜಿನಲ್ಲಿ ಸನ್ಮಾನಿಸಲಾಯಿತು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top