fbpx
ಸಮಾಚಾರ

RBI ನ ಈ ಹೊಸ ರೂಲ್ಸ್ ಪ್ರಕಾರ ನಿಮ್ ದುಡ್ಡಿಗೆ ಈ ಸಮಯಗಳಲ್ಲಿ ನಯಾಪೈಸೆ ಬೆಲೆ ಇರೋದಿಲ್ಲಾ..!

ನಿಮ್ ದುಡ್ಡಿಗೆ ಈ ಸಮಯಗಳಲ್ಲಿ ನಯಾಪೈಸೆ ಬೆಲೆ ಇರೋದಿಲ್ಲಾ ..!

 

 

ಕಳೆದ ಕೆಲವು ತಿಂಗಳುಗಳಲ್ಲಿ ಡಿಜಿಟಲ್ ವಹಿವಾಟುಗಳ ಹೆಚ್ಚಳದ ಹೊರತಾಗಿಯೂ, ನಗದು ವಹಿವಾಟುಗಳು ನಮ್ಮ ಜೀವನದಲ್ಲಿ ಒಂದು ಭಾಗವಾಗಿದೆ.ಇದರಿಂದಾಗಿ ನಮ್ಮ ಹತ್ರವಿರುವ ಕರೆನ್ಸಿ ನೋಟುಗಳು ಲೀಗಲ್ ಟೆಂಡರ್ ಅನ್ನು ಯಾವ ಸಂದರ್ಭಗಳಲ್ಲಿ ಕಳೆದುಕೊಳ್ಳುತ್ತದೆ ಎಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ. ನಮ್ಮ ದಿನನಿತ್ಯದ ವ್ಯವಹಾರದಲ್ಲಿ ಇಂತಹ ನೋಟುಗಳನ್ನು ಸ್ವೀಕರಿಸಬೇಕು ಮತ್ತು ಯಾವ ಸಂಧರ್ಭಗಳಲ್ಲಿ ನಮ್ಮ ನೋಟುಗಳು ತಮ್ಮ ಬೆಳೆಯನ್ನು ಕಳೆದುಕೊಳ್ಳುತ್ತವೆ ಎಂದು ಇಲ್ಲಿ ಓದಿ ತಿಳ್ಕೊಳಿ.

 

 

ಕರೆನ್ಸಿ ನೋಟ್ ಮತ್ತು ನಾಣ್ಯಗಳನ್ನು ವಿನಿಮಯ ಮಾಡಿಕೊಳ್ಳುವ ಬಗ್ಗೆ ಈ ಅಂಶಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ 3 ಜುಲೈ, 2017 ರಂದು ಹೊರಡಿಸಿದ ಸರ್ಕುಲರ್ ನಲ್ಲಿ ಈ ಕೆಳಕಂಡಂತೆ ಹೇಳಿದೆ. ಆ ಅಂಶಗಳನ್ನು ಕೆಳಗೆ ಓದಿ ತಿಳಿದುಕೊಳ್ಳಿ.

1. ರಾಜಕೀಯ ಪಕ್ಷಗಳ ಘೋಷಣೆ ಸಂದೇಶಗಳೊಂದಿಗೆ ಪಕ್ಷದ ಚಿಹ್ನೆಯನ್ನು ಬರೆಯಲಾಗಿರುವ ಕರೆನ್ಸಿ ನೋಟುಗಳನ್ನು ಸ್ವೀಕರಿಸಬಾರದು. ಇದು ಕಾನೂನುಬದ್ಧ ಟೆಂಡರ್ ಅಲ್ಲ ಮತ್ತು ಬ್ಯಾಂಕ್ ಗಳು ಸಹ ಇಂತಹ ನೋಟುಗಳನ್ನು ಸ್ವೀಕರಿಸುವುದಿಲ್ಲ

2. ಹರಿದಿರುವ ಎರಡು ಬೇರೆ ಬೇರೆ ನೋಟುಗಳನ್ನು ಅಂಟಿಸಿರುವ ನೋಟುಗಳನ್ನು ಸೋಯಿಲ್ಡ್ ನೋಟು ಎಂದು ಕರೆದಿದ್ದು ವಹಿವಾಟಿನಲ್ಲಿ ಸ್ವೀಕರಿಸಬಾರದು. ಅಂತಹ ನೋಟುಗಳು ಲೀಗಲ್ ಟೆಂಡರ್ ಆಗಿರುವುದಿಲ್ಲ. ಇಂತಹ ನೋಟುಗಳನ್ನು ಯಾವ ಬ್ಯಾಂಕುಗಳೂ ಸ್ವೀಕರಿಸುವುದಿಲ್ಲ.

 

 

3. ಒಂದೇ ನೋಟಿನ ಹರಿದಿರುವ ಭಾಗವನ್ನು ಅಂಟಿಸಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಜಮೆ ಮಾಡಬಹುದು. ಇಂತಹ ನೋಟುಗಳನ್ನ ಒಮ್ಮೆ ಬ್ಯಾಂಕ್ ಗೆ ಜಮೆ ಮಾಡಿದರೆ ಮತ್ತೆ ಅಂತಹ ನೋಟುಗಳನ್ನು ಸಾರ್ವಜನಿಕರಿಗೆ ಕೊಡುವುದಿಲ್ಲ.

4.ಒಂದೇ ನೋಟು ಎರಡಕ್ಕಿಂತ ಹೆಚ್ಚು ಭಾಗಗಳಾಗಿ ಹರಿದು ಹೋಗಿದ್ದಾರೆ ಅವುಗಳನ್ನು ಮ್ಯುಟಿಲೇಟೆಡ್ ನೋಟ್ಸ್ ಎಂದು ಆರ್ ಬಿ ಐ ವ್ಯಾಖ್ಯಾನಿಸಿದೆ. ಇಂತಹ ಮ್ಯುಟಿಲೇಟೆಡ್ ನೋಟ್ಸ್ ಅನ್ನು ಎಲ್ಲಾ ಬ್ಯಾಂಕುಗಳಲ್ಲಿ ಸ್ವೀಕರಿಸುವುದಿಲ್ಲ ಬದಲಾಗಿ ಆರ್ ಬಿ ಐ ಸೂಚಿಸುವ ಕೆಲವೇ ಬ್ಯಾಂಕುಗಳಲ್ಲಿ ಜಮೆ ಮಾಡಬಹುದಾಗಿದೆ.

 

 

5. ನೋಟುಗಳು ಘಾಡವಾಗಿ ಕೊಳೆಯಾಗಿ ಸ್ಪಷ್ಟವಾಗಿ ಗೋಚರಿಸದಿದ್ದರೆ ಅಥವಾ ಮೇಲ್ಮೈ ಭಾಗವು ಸುಟ್ಟು ಹೋಗಿದ್ದಾರೆ ಅಂತಹ ನೋಟುಗಳನ್ನು ಯಾವ ಬ್ಯಾಂಕುಗಳು ಕೂಡ ಸ್ವೀಕರಿಸುವುದಿಲ್ಲ ಅಂತಹ ನೋಟುಗಳನ್ನು ಆರ್ ಬಿ ಐ ನ ಎಕ್ಸ್ ಚೇಂಜ್ ಆಫೀಸ್ ನಲ್ಲೆ ಪಾವತಿಸಬೇಕು.

 

 

6. ನೋಟುಗಳ ಬದಲಾವಣೆ ಅಥವಾ ಜಮೆ ಮಾಡಲು ಬ್ಯಾಂಕಿಗೆ ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ಹೊರತುಪಡಿಸಿ ಯಾವುದೇ ಚಾರ್ಜ್ ಅನ್ನು ನೀಡುವ ಹಾಗಿಲ್ಲ.

7. ವಿನಿಮಯ ಕೇಂದ್ರವು ದಿನಕ್ಕೆ ರೂ 5,000 ರ ಗರಿಷ್ಠ ಮೌಲ್ಯದೊಂದಿಗೆ 20 ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶವನ್ನು ಉಚಿತವಾಗಿ ನೀಡಿದೆ.ನೋಟುಗಳ ಸಂಖ್ಯೆ 20 ಕ್ಕೆ ಮೀರಿದರೆ ಅಥವಾ ಅದರ ಮೌಲ್ಯವು ದಿನಕ್ಕೆ 5,000 ರೂ. ಮೀರಿದರೆ, ವಿನಿಮಯ ಕೇಂದ್ರವನ್ನು ಒದಗಿಸಲು ಬ್ಯಾಂಕುಗಳು ಸೇವಾ ಶುಲ್ಕ ವಿಧಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top