fbpx
ಆರೋಗ್ಯ

ಹಾವು ಕಚ್ಚಿದ ತಕ್ಷಣ ಹೀಗ್ ಮಾಡಿದ್ರೆ ಕಚ್ಚಿಸಿಕೊಂಡೋರು ಬದುಕಿ ಉಳಿತಾರೆ .

ಹಾವು ಕಚ್ಚಿದ ತಕ್ಷಣ ಹೀಗ್ ಮಾಡಿದ್ರೆ ಕಚ್ಚಿಸಿಕೊಂಡೋರು ಬದುಕಿ ಉಳಿತಾರೆ .

ಹಾವು ಕಚ್ಚಿದ ತಕ್ಷಣ ಮೊದಲು ಹೀಗೆ ಮಾಡಬೇಕು .

ಹಾವು ಕಚ್ಚಿದ ಜಾಗದಲ್ಲಿ ನೋವು ಮತ್ತು ಉರಿ ಊತ ಕಾಣಿಸಿಕೊಳ್ಳುತ್ತದೆ , ಕೆಮ್ಮು
ಎದೆ ಕಟ್ಟಿದ ಅನುಭವವಾಗುತ್ತದೆ .
ರಕ್ತದ ಒತ್ತಡ ಕಡಿಮೆಯಾಗುವುದು .
ಹೊಟ್ಟೆಯಲ್ಲಿ ನೋವು ಸಂಭವಿಸಿದ ಅನುಭವ .
ವಾಂತಿ ಮತ್ತು ಭೇದಿ ಹೆಚ್ಚಾಗುವ ಸಂಭವ ಇರುತ್ತದೆ .

ಹಾವು ಕಚ್ಚಿದ ತಕ್ಷಣ ಮೊದಲು ಮಾಡಬೇಕಾದ ಪ್ರಥಮ ಚಿಕಿತ್ಸೆ :

ಈಶ್ವರಿ ಬೇರನ್ನು ನಿಂಬೆ ಉಳಿ ರಸದಲ್ಲಿ ತೇದು ಹಾವು ಕಚ್ಚಿದ ಜಾಗಕ್ಕೆ ಹಚ್ಚಬೇಕು .

 

ಉತ್ತಾರಾಣಿ ಗಿಡವನ್ನು ತೇದು ಗಾಯದ ಮೇಲೆ ಹಚ್ಚಬೇಕು , ಹಾಗೆಯೇ ಉತ್ತಾರಾಣಿ ಗಿಡದ ಎಲೆಗಳನ್ನು ಜಗಿದು ತಿನ್ನಬೇಕು .

 

ನಂಜು ನಾರಾಯಣಿ ಸೊಪ್ಪನ್ನು ಅರೆದು ಗಾಯದ ಮೇಲೆ ಹಚ್ಚಬೇಕು , ಹಾಗೆಯೇ ನಂಜು ನಾರಾಯಣಿ ಗಿಡದ ಎಲೆಗಳನ್ನು ಜಗಿದು ತಿನ್ನಬೇಕು .

ಒಂದು ಹೋಳು ನಿಂಬೆ ಹಣ್ಣಿನ ಒಳಗೆ ಉತ್ತಾರಾಣಿ ಅಥವಾ ತುಂಬೆ ರಸವನ್ನು ತುಂಬಿ ದಿನಕ್ಕೆರಡು ಬಾರಿ ಮೂರು ದಿನ ಸೇವಿಸಬೇಕು .

ನೆನೆಪಿನಲ್ಲಿಡಬೇಕಾದ ಅಂಶಗಳು .

ಹಾವು ಕಚ್ಚಿದ ಭಾಗವನ್ನು ಅಲ್ಲಾಡಿಸಬಾರದು ಮತ್ತು ಓಡಾಡಲೂಬಾರದು .

ಅಗಲವಾದ ಎಲಾಸ್ಟಿಕ್ ಅಥವಾ ಸ್ವಚ್ಛವಾದ ಬಟ್ಟೆಯಿಂದ ಹಾವು ಕಚ್ಚಿದ ಭಾಗವನ್ನು ಕಟ್ಟಬೇಕು ಹೀಗೆ ಮಾಡಿದರೆ , ವಿಷದ ಹಾವು ಕಚ್ಚಿದ್ದರೆ ಅದರ ವಿಷ ದೇಹದ ಪೂರಾ ಹರಡುವುದಿಲ್ಲ .
ರಕ್ತ ಪರಿಚಲನೆಯಾಗದಷ್ಟು ಮಾತ್ರ ಬಿಗಿಯಾಗಿ ಕಟ್ಟಬೇಕು ಇಲ್ಲವಾದರೆ ಹಾವು ಕಚ್ಚಿದ ಭಾಗ ಸಂಪೂರ್ಣ ರಕ್ತ ಪೂರೈಕೆ ಯಾಗದೆ ಕತ್ತರಿಸುವ ಸ್ಥಿತಿ ಉಂಟಾಗಬಹುದು .

ಹಾವು ಕಚ್ಚಿದ ಒಂದು ಸೆಂಟಿ ಮೀಟರ್ ನಷ್ಟು ಉದ್ದ ಹಾಗು ಆಳ ಬ್ಲೇಡ್ ನಿಂದ ಕೊರೆಯಿರಿ , ರಕ್ತ ಸೋರಲು ಬಿಡಿ .
ಕೂಡಲೇ ಡಾಕ್ಟರ್ ಬಳಿ ಕರೆದುಕೊಂಡು ಹೋಗಿ ತೋರಿಸಿ .

ಪ್ರಪಂಚದಲ್ಲಿ ಕೇವಲ ಆರು ಜಾತಿಯ ಹಾವುಗಳು ಮಾತ್ರ ವಿಷಕಾರಿ , ಜನರು ಹಾವು ಕಚ್ಚಿದ ಆತಂಕದಿಂದಲೇ ಸಾಯುವುದು ಹೆಚ್ಚು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top