fbpx
ಸಮಾಚಾರ

ಹತ್ತಿರ ಸಂಬಂಧದಲ್ಲಿ ಯಾಕೆ ಮದುವೆಯಾಗಬಾರದು ಗೊತ್ತೇ? ಇಲ್ಲಿದೆ ವೈಜ್ಞಾನಿಕ ಕಾರಣ.

ಹತ್ತಿರ ಸಂಬಂಧದಲ್ಲಿ  ಯಾಕೆ ಮದುವೆಯಾಗಬಾರದು ಗೊತ್ತೇ? ಇಲ್ಲಿದೆ ವೈಜ್ಞಾನಿಕ ಕಾರಣ.

 

 

ಹಿಂದಿನ ಕಾಲದಿಂದಲೂ ಹತ್ತಿರದ ಸಂಬಂಧಿಕರನ್ನು ಮದುವೆಯಾಗಬಾರದು ಅಕಸ್ಮಾತ್ ಹಾಗೇನಾದರೂ ಮದುವೆಯಾದರೆ ಮುಂದೆ ಹುಟ್ಟುವ ಮಕ್ಕಳು ಅಂಗವಿಕಲರಾಗಿ ಹುಟ್ಟುತ್ತಾರೆ ಎಂದು ಹೇಳುತ್ತಿದ್ದರು. ಆದರೆ ಈ ವಾದವನ್ನುಎಷ್ಟೋ ಜನ ನಂಬುತ್ತಿರಲಿಲ್ಲ ಇವೆಲ್ಲಾ ಮೂಡನಂಭಿಕೆ ಎಂದು ಮೂಗು ಮುರಿಯುತ್ತಿದ್ದರು.ಆದ್ರೆ ರಕ್ತ ಸಂಭಂದದ ಬಗ್ಗೆ ಆಧುನಿಕ ವಿಜ್ಞಾನಿಗಳು ಅನೇಕಾ ಸಂಶೋಧನೆಗಳನ್ನು ಕೈಗೊಂಡು ಹತ್ತಿರದ ಸಂಬಂಧಿಕರನ್ನು ಮದುವೆಯಾಗುವುದು ವೈಜ್ಞಾನಿಕವಾಗಿ ಒಳ್ಳೆಯದಲ್ಲ ಎಂದು ಅಭಿಪ್ರಾಯ ಪಟ್ಟಿದೆ.

 

 

ಮಾನವ ತಳಿಶಾಸ್ತ್ರದ ಪ್ರಕಾರ ಹತ್ತಿರದ ರಕ್ತ ಸಂಭದಿಗಳಿಗೆ ಸೇರಿದ ಗಂಡು ಮತ್ತು ಹೆಣ್ಣುಗಳಲ್ಲಿ ಒಂದೇ ರೀತಿಯ ವಂಶವಾಹಿಗಳು ಇರುತ್ತವೆ.ಇವುಗಳು ಕೂಡುವುದರಿಂದ ಆ ವಂಶವಾಹಿಗಳಲ್ಲಿರುವ ವರ್ಣತಂತುಗಳು ತನ್ನ ಶಕ್ತಿಯನ್ನು ಕಳೆದುಕೊಂಡು ಅಶಕ್ತ ವಂಶವಾಹಿಯ ಬೆಳವಣಿಗೆಗೆ ಕಾರಣವಾಗುತ್ತದೆ. ಹಾಗಾಗಿ ಎರಡು ಶಕ್ತಿಹೀನ ವಂಶವಾಹಿನಿಗಳ ಕೂಡುವಿಕೆಯಿಂದ ಹುಟ್ಟುವ ಮಗುವಿನ ಅಂಗರಚನೆಯ ಮೇಲೆ ಘಾಡವಾದ ಪರಿಣಾಮವನ್ನು ಬೀರುತ್ತದೆ ಎಂದು ಸಂಶೋದನೆಗಳು ತಿಳಿಸಿವೆ. ಆದ ಕಾರಣ ಹತ್ತಿರ ಸಂಬಂಧಿಗಳು ಮದುವೆಯಾಗುವುದನ್ನು ಆಧುನಿಕ ವೈಜಾನಿಗಳು ವಿರೋಧಿಸಿದ್ದಾರೆ.

 

 

ಆಧುನಿಕ ವಿಜ್ಞಾನಿಗಳು ಸಂಶೋದಿಸಿರುವ ಈ ವಿಷಯವನ್ನು ಅನೇಕ ಸಾವಿರ ವರ್ಷಗಳ ಹಿಂದೆಯೇ ಭರದಲ್ಲಿ ರೂಢಿಯಲ್ಲಿತ್ತು ಎಂದು ಹೇಳಲಾಗುತ್ತದೆ. ತಾಯಿ ಕಡೆಯ ಐದು ಮತ್ತು ತಂದೆ ಕಡೆಯ ಏಳು ತಲೆಮಾರುಗಳಿಗೆ ಸಂಭಂದಿಕರು ಮದುವೆಯಾಗುತ್ತಿರಲಿಲ್ಲ ಎಂಬುದು ನಂಬಿಕೆ. ಆದರೆ ಕಾಲ ಕ್ರಮೇಣ ತವರಿಯುಮನೆಯ ವಾತ್ಸಲ್ಯಕ್ಕೋ ತಮ್ಮ ಅಸ್ತಿ ಬೇರೆಯವರ ಪಾಲಾಗುತ್ತದೆ ಎಂಭ ಭಯಕ್ಕೂ ತಾಯಿಯ ಜೊತೆಯಲ್ಲಿ ಹುಟ್ಟಿದವರನ್ನೇ, ಅತ್ತೆ ಮಾವರ ಮಕ್ಕಳನ್ನೇ ಮದುವೆಯಾಗುವುದು ಪ್ರಾರಂಭವಾಯಿತು ಎಂಬುದು ಬುದ್ದಿಜೀವಿಗಳ ವಾದವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top