fbpx
ಸಮಾಚಾರ

ಒಂದು ಸಾವಿರ ರುಪಾಯಿಯ ಹೊಸ ನೋಟನ್ನು ಚಲಾವಣೆ ಮಾಡುವುದರ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತವಾಗಿ ಹೇಳಿದ್ದೇನು ಗೊತ್ತಾ?

ಒಂದು ಸಾವಿರ ರುಪಾಯಿಯ ಹೊಸ ನೋಟನ್ನು ಚಲಾವಣೆ ಮಾಡುವುದರ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತವಾಗಿ ಹೇಳಿದ್ದೇನು ಗೊತ್ತಾ?

 

 

ಹೊಸದಾಗಿ ಒಂದು ಸಾವಿರ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮತ್ತೆ ಪರಿಚಯಿಸುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್ ಗರ್ಗ್ ತಿಳಿಸಿದ್ದಾರೆ.

500, 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ನಂತ್ರ ಬಳಿಕ ಹೊಸದಾಗಿ 2000 ಮತ್ತು 500 ರೂ., 200 ರೂ., 50 ರೂ.ಮುಖಬೆಲೆಗಳ ನೋಟುಗಳನ್ನು ಬಿಡುಗಡೆ ಮಾಡಿರುವ ಭಾರತೀಯ ರಿಸೆರ್ವ್ ಬ್ಯಾಂಕ್ 1000 ರೂ. ಮುಖಬೆಲೆಯ ನೋಟುಗಳನ್ನೂ ಚಲಾವಣೆಗೆ ತರಲು ಮುಂದಾಗುತ್ತಿದೆ ಎನ್ನುವ ಸುದ್ದಿ ದೇಶದ ಎಲ್ಲಾಕಡೆ ಕಾಳ್ಗಿಚ್ಚಿನಂತೆ ಹಬ್ಬಿತ್ತು.

 

 

ಈ ಸುದ್ದಿಗಳಿಗೆ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್ ಗರ್ಗ್ ಒಂದು ಸಾವಿರ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮತ್ತೆ ಚಲಾವಣೆಗೆ ಪರಿಚಯಿಸುವ ಬಗ್ಗೆ ಯಾವುದೇ ಪ್ರಸ್ತಾಪವನ್ನು ಸರಿಕರ ಮಾಡಿಲ್ಲ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

 

 

ಸರ್ಕಾರ ವರ್ಷಾಂತ್ಯಕ್ಕೆ ಪುನಃ 1000 ರೂ. ನೋಟನ್ನು ಹೊಸ ವಿನ್ಯಾಸದಲ್ಲಿ ಜಾರಿಗೆ ತರಲಿದೆ. ಇದಕ್ಕಾಗಿ ಮೈಸೂರು ನೋಟು ಮುದ್ರಾಣಾಲಯಕ್ಕೆ ಈಗಾಗಲೇ ಸೂಚನೆ ಹೋಗಿದೆ ಎಂದು ಎಲ್ಲಾಕಡೆ ಸುದ್ದಿ ಹಬ್ಬಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top