fbpx
ತಿಂಡಿ ತೀರ್ಥ

ಫಟಾ ಫಟ್ ಅಂತಾ 5 ನಿಮಿಷದಲ್ಲಿ ತಯಾರಿಸಿ ಹೆಸರುಬೇಳೆ ಪಾಯಸ

ಹೆಸರುಬೇಳೆ ಪಾಯಸ :

ಹೆಸರುಬೇಳೆ ಪಾಯಸ ಮಾಡಲು ಬೇಕಾಗುರುವ ಸಾಮಗ್ರಿಗಳು:

ಹೆಸರುಬೇಳೆ 1.5 ಕಪ್,

ಬೆಲ್ಲ 1/2 ಕಪ್,

ಸಕ್ಕರೆ 1/2 ಕಪ್,

ತೆಂಗಿನ ತುರಿ 1 ಕಪ್,

ಹಾಲು 1/2 ಕಪ್,

ಏಲಕ್ಕಿ ಪುಡಿ 1/4 ಚಮಚ,

ಗೋಡಂಬಿ 8-10,

ಉಪ್ಪು 1/4 ಚಮಚ

ವಿಧಾನ :

ಹೆಸರುಬೇಳೆ ತೊಳೆದುಕೊಂಡು ನೀರು ಹಾಕಿ ಕುಕ್ಕರ್ ನಲ್ಲಿ ಎರಡು ಕೂಗು ಕೂಗಿಸಿ ಅಥವಾ ಹಾಗೆಯೇ ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಬೇಯಿಸಬಹುದು. ಬೇಳೆ ಪೂರ್ತಿ ಕರಗುವಷ್ಟು ಬೇಯಿಸಬಾರದು,  ತೆಂಗಿನ ತುರಿಗೆ ಏಲಕ್ಕಿ ಪುಡಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬೆಂದ ಹೆಸರುಬೇಳೆಗೆ ಹಾಲು, ರುಬ್ಬಿದ ತೆಂಗಿನಕಾಯಿ, ಗೋಡಂಬಿ ಚೂರುಗಳು, ಸಕ್ಕರೆ ಮತ್ತು ಬೆಲ್ಲ ಹಾಕಿ ಬೇಕಿದ್ದರೆ ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ. ಹೆಸರುಬೇಳೆ ಬೇಗ  ತಳಹಿಡಿಯುತ್ತದೆ, ಆಗಾಗ ಕಲಕುತ್ತಿರಿ. ಚೆನ್ನಾಗಿ  ಕುದಿ ಬಂದ ಮೇಲೆ ಉರಿ ಆರಿಸಿ. ಬಿಸಿ ಬಿಸಿ ಪಾಯಸಕ್ಕೆ ತುಪ್ಪ ಹಾಕಿಕೊಂಡು ಸವಿದರೆ ಆಹಾ …! ಹೆಸರುಬೇಳೆ ಪಾಯಸವನ್ನು ತಿನ್ನುವುದರಿಂದ ದೇಹದ ಉಷ್ಣತೆ ಜಾಸ್ತಿಯಾಗದೇ ತಂಪಾಗಿರುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top