fbpx
ಆರೋಗ್ಯ

ಗಂಡಸರಲ್ಲಿ ಹೆಚ್ಚಾಗಿ ಕಾಣೋ ಗಡ್ಡದ ಮೇಲಿನ ಗುಳ್ಳೆಗಳ ಸಮಸ್ಯೆಗೆ ಮನೆಯಲ್ಲೇ ಮಾಡ್ಕೊಳ್ಳಿ ಈ 7 ನೈಸರ್ಗಿಕ ಉಪಾಯಗಳನ್ನ

ಗಂಡಸರಲ್ಲಿ ಹೆಚ್ಚಾಗಿ ಕಾಣುವ ಗಡ್ಡದ ಮೇಲಿನ ಗುಳ್ಳೆಗಳ ಸಮಸ್ಯೆಗೆ ಮನೆಯಲ್ಲೇ ಮಾಡಿಕೊಳ್ಳಬಹುದಾದ 7 ನೈಸರ್ಗಿಕ ಪರಿಹಾರಗಳು

 

 

ಮೊದಲಿಗೆ ಒಂದು ಅಥವಾ ಎರಡು ಗಡ್ಡದ ಮೇಲಿನ ಕೂದಲಿನಲ್ಲಿ ಕಾಣಿಸಿಕೊಳ್ಳುವಾಗ ಸಮಸ್ಯೆ ನಂತರ ಪಕ್ಕದ ಕೂದಲಿನ ಬುಡಕ್ಕೂ ಸಹ ಹರಡುತ್ತದೆ
ಇದು ಈಸ್ಟ್ ಅಥವಾ ಶಿಲೀಂಧ್ರಗಳ ಸಮಸ್ಯೆ ಕೆಲವೊಂದು ಬಾರಿ ಬ್ಯಾಕ್ಟೀರಿಯಾ ಸಮಸ್ಯೆ ಕೂಡ ಆಗಬಹುದು.

ಬನ್ನಿ ಈ ಸಮಸ್ಯೆಗಳಿಗೆ ಪರಿಹಾರಗಳನ್ನು ತಿಳಿದುಕೊಳ್ಳೋಣ

ಬಿಸಿ ನೀರು

ಒಂದು ಬಟ್ಟಲಿನಲ್ಲಿ ಬಿಸಿ ನೀರನ್ನು ತೆಗೆದುಕೊಂಡು ಒಂದು ಚಮಚ ಉಪ್ಪನ್ನು ಸೇರಿಸಿ ನಂತರ ಒಂದು ಟವೆಲ್ನಿಂದ ನೀರನ್ನು ಅದ್ದಿ ಮತ್ತೆ ಹಿಂಡಿ ಮುಖದ ಮೇಲೆ ಒತ್ತುವುದು ಈ ಪ್ರಕ್ರಿಯೆಯನ್ನು ಹತ್ತು ನಿಮಿಷ ಮುಂದುವರಿಸಬೇಕು ದಿನಕ್ಕೆ ಮೂರರಿಂದ ಐದು ಬಾರಿ ಈ ಪ್ರಕ್ರಿಯೆಯನ್ನು ಮಾಡಿದರೆ ಪರಿಹಾರ ದೊರೆಯುತ್ತದೆ .

ಅರಿಶಿಣ

ಅರ್ಧ ಚಮಚ ಅರಿಶಿಣ ಕ್ಕೆ ಅರ್ಧ ಚಮಚ ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ಗಡ್ಡದ ಸೋಂಕಿತ ಭಾಗಕ್ಕೆ ಹಚ್ಚಿಕೊಳ್ಳಿ .

ಆಪಲ್ ಸೀಡರ್ ವಿನೆಗರ್

ಆಪಲ್ ಸೀಡರ್ ವಿನಿಗರ್ ನಲ್ಲಿ ಬ್ಯಾಕ್ಟೀರಿಯಾ ಹಾಗೂ ಫಂಗಸ್ ವಿರುದ್ಧ ಹೋರಾಡುವ ಗುಣಗಳು ಹೆಚ್ಚಾಗಿದ್ದು ನಿಮ್ಮ ಸಮಸ್ಯೆಯಿಂದ ಹೊರಬರಲು ಅರ್ಧ ಚಮಚ ಆಪಲ್ ಸೀಡರ್ ವಿನಿಗರ್ ಅನ್ನು ಅರ್ಧ ಚಮಚ ನೀರಿನಲ್ಲಿ ಬೆರೆಸಿ ಗಡ್ಡದ ಭಾಗಗಳಿಗೆ ಹಚ್ಚಿಕೊಳ್ಳಿ .

ಟೀ ಟ್ರೀ ಆಯಿಲ್

 

ಟೀ ಟ್ರೀ ಆಯಿಲ್ ಮತ್ತು ಕೊಬ್ಬರಿ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಗಡ್ಡದ ಭಾಗಗಳಿಗೆ ಹಚ್ಚುವುದರಿಂದ ಗಡ್ಡದ ಮೇಲಿನ ಯಾವುದೇ ಸೋಂಕು ಇಲ್ಲದಂತೆ ಮಾಡುತ್ತದೆ .

ಆಲ್ಕೊಹಾಲ್

 

ಆಲ್ಕೊಹಾಲ್ ಮಿಶ್ರಣವನ್ನು ಹತ್ತಿಯಲ್ಲಿ ಅದ್ದಿ ಗಡ್ಡದ ಸೋಂಕಿನ ಭಾಗಗಳಿಗೆ ಹಚ್ಚಿ ಇದರಿಂದ ಎರಡು ಮೂರು ದಿನಗಳಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು.

ಬೇವಿನ ಸೊಪ್ಪು

 

ಐದಾರು ಬೇವಿನ ಸೊಪ್ಪಿನ ಎಲೆಗಳನ್ನು ಚೆನ್ನಾಗಿ ಅರೆದು ಮೂವತ್ತು ನಿಮಿಷಗಳ ಕಾಲ ಗಡ್ಡದ ಮೇಲಿನ ಸೋಂಕಿತ ಭಾಗಗಳಿಗೆ ಲೇಪಿಸಿ ಅರ್ಧ ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು ಹೀಗೆ ಮಾಡಿದರೆ ಯಾವುದೇ ಸೋಂಕು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.

ಲೋಳೆ ಸರ

ಲೋಳೆಸರದ ಒಳಗಿನ ಭಾಗವನ್ನು ಗಡ್ಡ ಸೋಂಕಿತ ಪ್ರದೇಶಗಳಿಗೆ ಅನ್ವಯಿಸಿ ನಂತರ ಇಪ್ಪತ್ತು ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು ಇದು ನಮ್ಮ ನಿಮ್ಮ ಮುಖವನ್ನು ಸುಂದರವಾಗಿ ಕಾಣುವಂತೆ ಮಾಡುವುದಲ್ಲದೆ ಯಾವುದೇ ಸೂಕ್ಷ್ಮ ಜೀವಿಗಳಿಂದ ನಿಮ್ಮನ್ನು ಕಾಪಾಡುತ್ತದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top