fbpx
ದೇವರು

ಸೆಪ್ಟೆಂಬರ್ 2ನೇ ತಾರೀಖು ಶುಕ್ಲ ಪಕ್ಷ ಏಕಾದಶಿಯ ದಿನ ಉತ್ತಮವಾದ ಅದೃಷ್ಟವನ್ನು ಪಡೆಯಲು ಮತ್ತು ನಿಮ್ಮ ಆಸೆಯನ್ನು ಈಡೇರಿಸಿಕೊಳ್ಳಲು ಈ ಕೆಲಸಗಳನ್ನು ಮಾಡಿ.

ಪದ್ಮ ಏಕಾದಶಿ.

ಸೆಪ್ಟೆಂಬರ್ 2ನೇ ತಾರೀಖು ಶುಕ್ಲ ಪಕ್ಷ ಏಕಾದಶಿಯ ದಿನ ಉತ್ತಮವಾದ ಅದೃಷ್ಟವನ್ನು ಪಡೆಯಲು ಮತ್ತು ನಿಮ್ಮ ಆಸೆಯನ್ನು ಈಡೇರಿಸಿಕೊಳ್ಳಲು ಈ ಕೆಲಸಗಳನ್ನು ಮಾಡಿ.

ಈ ವರ್ಷ 2017  ಹೇವಿಳಂಬಿ ನಾಮ ಸಂವತ್ಸರ  ದಕ್ಷಿಣಾಯನ ಪುಣ್ಯಕಾಲ , ಸೆಪ್ಟೆಂಬರ್ 2 ನೇ ತಾರೀಖು ಭಾದ್ರಪದ ಮಾಸದಲ್ಲಿ ಬರುವ  ಶುಕ್ಲ ಪಕ್ಷ ಏಕಾದಶಿಯ ದಿನ ಶನಿವಾರ ಪೂರ್ವಾಷಾಡ ನಕ್ಷತ್ರವಿದೆ.

 

 

ಈ ಪದ್ಮ ಏಕಾದಶಿಯ ದಿನ ಭಕ್ತಿಯಿಂದ ಭಗವಂತನಾದ ಶ್ರೀ ಮಹಾವಿಷ್ಣು ಮತ್ತು ದೇವಿ ಲಕ್ಷ್ಮೀಯನ್ನು ಶ್ರದ್ದಾ ಭಕ್ತಿಯಿಂದ ಪೂಜಿಸಿದರೆ ತಮ್ಮ ಎಲ್ಲಾ ಆಸೆ ಮನೋಕಾಮನೆಗಳು ಪೂರ್ತಿಗೊಳ್ಳುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ ಪದ್ಮ ಏಕಾದಶಿಯ ಕಥೆಯನ್ನು ಕೇಳಿದರೂ ಸಹ  ಪದ್ಮ ಏಕಾದಶಿಯ ವ್ರತವನ್ನು ಮಾಡಿದಷ್ಟೇ ಪುಣ್ಯ ಲಭಿಸುವುದು.

ವೇದ ,ಶಾಸ್ತ್ರಗಳ ಪ್ರಕಾರ ಏಕಾದಶಿಯ ದಿನ ವಿಷ್ಣುವಿಗೆ ಪೂಜೆ ಸಲ್ಲಿಸಿದರೆ ಇದು ಅತ್ಯುತ್ತಮ  ಲಾಭಕರವಾಗುವುದು ಎಂದು ಭಾವಿಸಲಾಗಿದೆ.ಗಣೇಶನನ್ನು ಪೂಜಿಸುವುದರ ಜೊತೆಗೆ ಭಗವಂತನಾದ ಶ್ರೀ  ವಿಷ್ಣು ದೇವರನ್ನು ಪೂಜಿಸಬೇಕು.

1.ಹಳದಿ ಬಣ್ಣದ ಬಟ್ಟೆಗಳನ್ನು ಭಗವಂತನಾದ  ಶ್ರೀ ಮಹಾ ವಿಷ್ಣುವಿಗೆ ಅರ್ಪಿಸಿ ಪೂಜೆ ಸಲ್ಲಿಸಿ ನಂತರ ಬಡವರಿಗೆ  ದಾನ ಮಾಡಬೇಕು.ಹಳದಿ ಬಣ್ಣದ   ಹೂವುಗಳನ್ನು, ಅರ್ಪಿಸಿ,ಜೊತೆಗೆ  ಬಾಳೆಹಣ್ಣನ್ನು ಅರ್ಪಿಸಬೇಕು.ಈ ಏಕಾದಶಿಯ ದಿನ ಬೆಳೆಯನ್ನು ಕಟಾವು ಮಾಡುವವರು ಕೂಡ ಒಳ್ಳೆಯ ಲಾಭಗಳನ್ನು ಪಡೆದುಕೊಳ್ಳಬಹುದು.

2.ಬೆಣ್ಣೆ ಮತ್ತು ಬೆಣ್ಣೆಗೆ ಸಕ್ಕರೆಯನ್ನು ಮಿಶ್ರಣ ಮಾಡಿ ಸಾಕ್ಷಾತ್ ಶ್ರೀ  ಕೃಷ್ಣನ ಅವತಾರವಾದ ಶ್ರೀ ಮಹಾ ವಿಷ್ಣು ದೇವರಿಗೆ ಏಕಾದಶಿಯ ದಿನ ಅರ್ಪಿಸಬೇಕು. ಇವು ನಿಮ್ಮ ಎಲ್ಲಾ ಆಸೆಗಳನ್ನು ಪೂರೈಸಲು ಸಹಾಯಕಾರಿಯಾಗಿದೆ.

 

 

3.ಭಗವಂತನಾದ ಶ್ರೀ ಹರಿ,ಶ್ರೀ ವಿಷ್ಣು ದೇವರಿಗೆ ಪೂಜೆ ಸಲ್ಲಿಸುವುದರ  ಜೊತೆಗೆ ದೇವಿ  ಮಹಾ ಲಕ್ಷ್ಮೀಯನ್ನು ಪೂಜಿಸಿ ಜೊತೆಗೆ ಗಣೇಶನನ್ನು ಪೂಜಿಸಿದರೆ ಒಳ್ಳೆಯ ಅದೃಷ್ಟವನ್ನು ಪಡೆಯಬಹುದು.

 

 

4.ಶಂಖ (ದಕ್ಷಿಣಾವರ್ತಿ ಶಂಖ)  ವಿಷ್ಣು ದೇವರ ಪ್ರತೀಕ ಮತ್ತು ಲಕ್ಷ್ಮೀ ದೇವಿಯ ಪ್ರತೀಕ ಅಂತಹ ಶಂಖವನ್ನು ಮನೆಯಲ್ಲಿಟ್ಟು ಏಕಾದಶಿಯ ದಿನ ಪೂಜಿಸುವುದರಿಂದ ನಂತರ ಶಂಖವನ್ನು ಊದಿ ನಾದ ಅಥವಾ ದ್ವನಿ ಶಂಖನಾದವನ್ನು ಮೊಳಗಿಸುವುದರಿಂದ   ಭಗವಂತನಾದ  ಶ್ರೀ ವಿಷ್ಣುವು ಪ್ರಸನ್ನನಾಗುವನು.ಬಾಲ್ಯ ಆವತಾರದಲ್ಲಿರುವ ಶ್ರೀ ಕೃಷ್ಣನನ್ನು ಕೇಸರಿ ಮತ್ತು ಹಾಲಿನ ಜೊತೆ ಬರಮಾಡಿಕೊಳ್ಳಬೇಕು.

5.ಹಳದಿ ಬಣ್ಣದ ವಸ್ತ್ರಗಳನ್ನು ನಿರ್ಗತಿಕರಿಗೆ ಬಡವರಿಗೆ ದಾನ ಮಾಡಿದರೆ  ಶ್ರೀ ವಿಷ್ಣುವು ಪ್ರಸನ್ನನಾಗುವನು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top