fbpx
ಸಮಾಚಾರ

ದತ್ತು ಮಗನನ್ನೇ ನಡುಬೀದಿಯಲ್ಲಿ ಬಿಟ್ಟಿರುವ ಯಡಿಯೂರಪ್ಪ!

ದತ್ತು ಮಗನನ್ನೇ ನಡುಬೀದಿಯಲ್ಲಿ ಬಿಟ್ಟಿರುವ ಯಡಿಯೂರಪ್ಪ!

 

ಮಾಜಿ ಮುಖ್ಯಮಂತ್ರಿ ಮತ್ತು ಈಗಿನ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಟೈಮ್ ನಲ್ಲಿ ವಿಶ್ವನಾಥ್ ಎಂಬ ಒಬ್ಬ ಹುಡುಗನನ್ನು ದತ್ತು ತೆಗೆದುಕೊಂಡು ಆ ಹುಡುಗನಿಗೆ ಕೊನೆವರೆಗೂ ಶಿಕ್ಷಣ ಕೊಡಿಸುವುದಾಗಿ ಕೊಡಿಸುವುದಾಗಿ ಮಾತು ಕೊಟ್ಟಿದ್ದರು. ಆದರೆ ಈಗ ಆ ಹುಡುಗನಿಗೆ ಫೀಸ್ ಕಟ್ಟಲು ದುಡ್ಡಿಲ್ಲದೆ ತನ್ನ ವಿಧ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾನೆ.

2010 ರಲ್ಲಿ ತಾವು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಬ್ಯಾಟರಾಯನಪುರದ ವಿಶ್ವನಾಥ್ ಎಂಬ ಹುಡುಗ ಗಾಳಿ ಆಂಜನೇಯ ದೇವಸ್ಥಾನದ ಹತ್ತಿರ ಅಳುತ್ತಾ ನಿಂತಿದ್ದ. ಆ ಹುಡುಗ ಯಾದಗಿರಿ ಜಿಲ್ಲೆಯ ಬಸವರಾಜು ಮತ್ತು ಶಿವಮ್ಮ ಎಂಬುವವರ ಮಗನಾಗಿದ್ದನು. ಆ ಹುಡುಗನನ್ನು ದತ್ತು ಪಡೆದಿದ್ದ ಯಡಿಯೂರಪ್ಪ ಹುಡುಗನ ಹೆಸರಿನಲ್ಲಿ ಒಂದು ಲಕ್ಷ ರೂಪಾಯಿ ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡ್ತೀನಿ ಎಂದು ದೇವರ ಮುಂದೆ ಪ್ರಮಾಣ ಮಾಡಿದ್ದರು.

 

 

ನಂತರ ತಮ್ಮ ಆಪ್ತ ಸಿದ್ದಲಿಂಗಸ್ವಾಮಿಯವರಿಗೆ ಹೇಳಿ ಮೈಸೂರಿನ JSS ವಿದ್ಯಾಸಂಸ್ಥೆಯಲ್ಲಿ ಐದನೇ ಕ್ಲಾಸ್ ನಿಂದ 9ನೇ ಕ್ಲಾಸ್ ವರೆಗೆ ವ್ಯಾಸಂಗ ಮಾಡಿಸಿದ್ದಾರೆ. ಆದರೆ 10ನೇ ಕ್ಲಾಸ್ ಗೆ ಬಂದಾಗ ಆ ಹುಡುಗನ ಎಕ್ಸಾಮ್ ಫೀಸ್ ಕಟ್ಟದೇ ಯಡಿಯೂರಪ್ಪ ಬೇಜವಾಬ್ದಾರಿ ತೋರಿದ್ದಾರೆ. ಆದರೂ ಹೇಗೋ ಕಷ್ಟಪಟ್ಟು ವಿಶ್ವನಾಥ್ ಹತ್ತನೇ ತರಗತಿ ಪಾಸ್ ಮಾಡಿಕೊಂಡಿದ್ದಾನೆ. SSLCಯ ನಂತರ PUC ಓದಬೇಕು ಸಹಾಯ ಮಾಡಿ ಸಾರ್ ಎಂದು ಬಿಎಸ್‍ವೈ ಆಪ್ತ ಸಿದ್ದಲಿಂಗಸ್ವಾಮಿಯವರ ಮನೆ ಬಾಗಿಲಿಗೆ ಹೋದ್ರೆ “ನನ್ನನ್ನ ಏನ್ ಕೇಳ್ತಿಯಾ ಏನಿದ್ರೂ ಯಡಿಯೂರಪ್ಪ ಅವರನ್ನ ಕೇಳಿಕೋ. ನನ್ನ ಹತ್ರ ಬರಬೇಡಿ” ಎಂದು ಆ ಹುಡುಗನಿಗೆ ಹೆದರಿಸಿ ಬೆದರಿಸಿ ಬೈದು ಕಳಿಸಿದ್ದಾರಂತೆ.

 

 

ಇಷ್ಟೆಲ್ಲಾ ಆದ ಮೇಲೆ ವಿಶ್ವನಾಥ್ ನ ತಂದೆ ತಾಯಿ ಮಗನನ್ನು ಓಡಿಸಲು ಸಹಾಯ ಮಾಡಿ ಎಂದು ಕೇಳಿಕೊಳ್ಳಲು ಬಿಎಸ್‍ವೈ ಅವರ ಡಾಲರ್ಸ್ ಕಾಲೋನಿ ನಿವಾಸಕ್ಕೆ ಹೋದರೆ ಅಲ್ಲಿ ಯಡಿಯೂರಪ್ಪನವರ ಬೆಂಬಲಿಗರು ಬಿ.ಎಸ್.ವೈಯವರನ್ನು ಭೇಟಿ ಮಾಡಲು ಅವಕಾಶ ಕೊಡದೇ ವಾಪಸ್ ಕಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top