fbpx
ದೇವರು

ಶನಿಯು ನಿಮ್ಮ ಜನ್ಮ ಕುಂಡಲಿಯಲ್ಲಿ ಅಥವಾ ಜನ್ಮ ಜಾತಕದಲ್ಲಿ ಯಾವ ಮನೆಯಲ್ಲಿದ್ದರೆ ಏನು ಫಲ ಅಂತ ತಿಳ್ಕೊಳ್ಳೋಣ ಬನ್ನಿ

ಶನೈಶ್ಚರನು  ತಾವು ಮಾಡಿದ  ಪಾಪ  ಕರ್ಮಗಳಿಗಳಿಗೆ ಆನುಸಾರವಾಗಿ ಫಲವನ್ನು ನೀಡುವನು.ಅಂತಹ ಶನಿಯು ನಿಮ್ಮ ಜನ್ಮ ಕುಂಡಲಿಯಲ್ಲಿ  ಅಥವಾ ಜನ್ಮ ಜಾತಕದಲ್ಲಿ ಯಾವ ಮನೆಯಲ್ಲಿದ್ದರೆ ಏನು ಫಲ ಎಂಬುದನ್ನು ತಿಳಿಯೋಣ.

 

 

ಶನಿ ಗ್ರಹ ಅಥವಾ ಶನೈಶ್ಚರ ಎಂದರೆ ಯಾರು ?

ಸೂರ್ಯ ದೇವ ಮತ್ತು ಛಾಯಾ ದೇವಿಯ ಪುತ್ರನೇ ಶನೈಶ್ಚರ ದೇವನು.ಅವನೇ ಶನಿ ಗ್ರಹವೂ ಕೂಡ.ಜ್ಯೋತಿಷ್ಯ ಶಾಸ್ತ್ರದಲ್ಲಿ ಶನೈಶ್ಚರನು ಯಮ ದೇವನಿದ್ದಂತೆ ಯಾಕೆಂದರೆ ಯಾರಾದರೂ ತಪ್ಪು ಮಾಡಿದರೆ  ಶಿಕ್ಷೆ  ಕೊಡುವನು ಶನೈಶ್ಚರನೇ,ಅವನೇ  ನ್ಯಾಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವವನು.ಅವರವರ ಕರ್ಮ,ಪಾಪದ ಕೆಲಸ, ತಪ್ಪುಗಳಿಗೆ ಅನುಸಾರವಾಗಿ ಅವರಿಗೆ ಶಿಕ್ಷೆಯ ಪ್ರಮಾಣವನ್ನು ಶನಿಯೇ ನಿರ್ಧರಿಸುವನು.ಒಳ್ಳೆಯ ಶಿಕ್ಷಕನಂತೆ ಶನೈಶ್ಚರನು ತಪ್ಪು ದಾರಿ, ತಪ್ಪು ಮಾರ್ಗ ಹಿಡಿದವರನ್ನು ಸರಿ ದಾರಿಗೆ ತರುವವನು ಇವನೇ.

ಶನೈಶ್ಚರನನ್ನು ಭಕ್ತಿ ,ಶ್ರದ್ಧೆಯಿಂದ ಪೂಜಿಸಿದರೆ ಸಂಕಲ್ಪ ಮಾಡಿದ ಕಾರ್ಯಗಳು ನೆರವೇರುತ್ತವೆ.ಕೆಲಸದಲ್ಲಿ ಅನುಕೂಲ ಉಂಟಾಗುತ್ತದೆ.ನಮ್ಮನ್ನು ಕಷ್ಟಗಳಿಂದ  ಆತ ಪಾರು ಮಾಡುತ್ತಾನೆ. ಭಕ್ತಿಯಿಂದ ದೇವರ ಕಾರ್ಯಗಳನ್ನು  ಮಾಡುವವರನ್ನು ರಕ್ಷಣೆ ಮಾಡುತ್ತಾನೆ.

 

 

ಜನ್ಮ ಕುಂಡಲಿ ಅಥವಾ ಜನ್ಮ ಜಾತಕದಲ್ಲಿ  ಅಂದರೆ ಹುಟ್ಟಿದ ಸಮಯ ಮತ್ತು ದಿನಾಂಕವನ್ನು ಕೊಟ್ಟರೆ ಜಾತಕ ಮತ್ತು ಕುಂಡಲಿ ದೊರೆಯುವುದು.ಅಲ್ಲಿ 12 ಮನೆಗಳು ಇರುತ್ತವೆ  ಆ 12 ಮನೆಗಳಲ್ಲಿ ಯಾವ ಮನೆಯಲ್ಲಿ ಯಾವ ಗ್ರಹ ಇರುವುದು  ಎಂದು ನೋಡಿಕೊಂಡು ಲಗ್ನ ಇರುವ ಸ್ಥಾನದಿಂದ ಶನಿಗ್ರಹವು ಎಲ್ಲಿದ್ದಾನೆ ಎಂದು ತಿಳಿದು ನಿಮ್ಮ ಜೀವನವು ಹೇಗಿರುವುದು ಎಂದು ತಿಳಿಯಬಹುದು.

ಒಬ್ಬ ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಲಗ್ನದಲ್ಲಿಯೇ ಶನಿ ಇದ್ದರೆ.ಅವರ ದೇಹದ ಮೈ ಬಣ್ಣ ಕಪ್ಪಾಗಿರುತ್ತದೆ.ಆತ ರಾಜ್ಯದ ಅಧಿಪತಿಯಾಗುತ್ತಾನೆ.

 

 

ಲಗ್ನದಿಂದ 2ನೇ ಮನೆಯಲ್ಲಿ ಶನಿಯಿದ್ದರೆ ಇಂತಹ ಜಾತಕ ಹೊಂದಿರುವವರಿಗೆ ವಿದೇಶ ಪ್ರವಾಸ ಮತ್ತು ವಿದೇಶದಲ್ಲಿ ನೆಲೆಸುವ ,ವಾಸ ಮಾಡುವ ಯೋಗವಿರುತ್ತದೆ.ಇವರ ಮಾತು ಮೃದುವಾಗಿ ಇರುವುದಿಲ್ಲ .

 

 

ಲಗ್ನದಿಂದ ಮೂರನೇ ಮನೆಯಲ್ಲಿ ಶನಿ ಗ್ರಹ ಇದ್ದರೆ ರಾಜ ಮರ್ಯಾದೆ ಗೌರವ ಸಿಗುವುದು.ದೊಡ್ಡ ದೊಡ್ಡ ವಾಹನಗಳನ್ನು ಖರೀದಿಸುವ ಯೋಗವಿರುತ್ತದೆ.ಮಹಾನ ಪರಾಕ್ರಮಿ ಮತ್ತು ಎಲ್ಲರಿಂದಲೂ ಗೌರವಕ್ಕೆ ಪಾತ್ರನಾಗುವನು.

 

 

ಲಗ್ನದಿಂದ ನಾಲ್ಕನೆಯ ಮನೆಯಲ್ಲಿ ಶನಿಯಿದ್ದರೆ ಧನ ಹೀನನಾಗುತ್ತಾನೆ.ಪಿತ್ತ , ವಾಯುವಿನಂತಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾನೆ.ಮನಸ್ಸು ಅಶಾಂತಿಯಿಂದ ಕೂಡಿರುತ್ತದೆ.

 

ಲಗ್ನದಿಂದ  ಐದನೇ ಮನೆಯಲ್ಲಿ ಶನಿ ಗ್ರಹವಿದ್ದರೆ ಸಂತಾನ ಹೀನನಾಗುವ ಸಾಧ್ಯತೆ ಹೆಚ್ಚು,ಮಕ್ಕಳಿಂದ  ಅಷ್ಟಾಗಿ  ನೆಮ್ಮದಿ ಇರುವುದಿಲ್ಲ.

 

ಲಗ್ನದಿಂದ ಆರನೇ ಮನೆಯಲ್ಲಿ ಶನಿ ಗ್ರಹವಿದ್ದರೆ ಅಂತಹ ಜಾತಕವನ್ನು ಹೊಂದಿರುವವರು ಸಮಾಜಕ್ಕೆ ಹಿತವಾದ,ಒಳ್ಳೆಯ  ಮತ್ತು  ಉತ್ತಮ ಕಾರ್ಯಗಳನ್ನು ಮಾಡುತ್ತಾರೆ.ಉತ್ತಮ ಜ್ಞಾನಿಗಳಾಗಿದ್ದು ಬಲಿಷ್ಠರಾಗಿದ್ದು ದಾನ,ಧರ್ಮಗಳನ್ನು ಮಾಡುತ್ತಾರೆ.

 

 

ಲಗ್ನದಿಂದ  ಏಳನೇ ಮನೆಯಲ್ಲಿ ಶನಿ ಗ್ರಹವಿದ್ದರೆ ಸಂಸಾರದಲ್ಲಿ ನೆಮ್ಮದಿಯನ್ನು ಅಷ್ಟಾಗಿ ಕಾಣುವುದಿಲ್ಲ,ಕಂಕಣ ಭಾಗ್ಯ ನಿಧಾನವಾಗುತ್ತದೆ. ಸ್ನೇಹಿತರೊಂದಿಗೆ ಜಗಳವನ್ನು ಆಡಿ ಶತ್ರುತ್ವವನ್ನು ಹೊಂದುತ್ತಾರೆ.

 

 

ಲಗ್ನದಿಂದ ಎಂಟನೇ ಮನೆಯಲ್ಲಿ  ಶನಿ ಗ್ರಹವಿದ್ದರೆ ಜಾತಕನಿಗೆ ಚರ್ಮದ ಕಾಯಿಲೆ ಬರುವ ಸಾಧ್ಯತೆ ಹೆಚ್ಚಿದ್ದು,ಸೋಮಾರಿತನ,ಆಲಸ್ಯದಿಂದ ಬಳಲುತ್ತಾರೆ.

ಲಗ್ನದಿಂದ ಒಂಬತ್ತನೇ ಮನೆಯಲ್ಲಿ ಶನಿ ಗ್ರಹವಿದ್ದರೆ  ಧರ್ಮ ಕಾರ್ಯದಲ್ಲಿ ಆಸಕ್ತಿ ಉಳ್ಳವರಾಗಿರುತ್ತಾರೆ.ಆಧ್ಯಾತ್ಮಿಕ ಚಿಂತಕರಾಗಿದ್ದು, ದೇವಾಲಯಗಳನ್ನು ಕಟ್ಟಿಸುವ ಸಾಧ್ಯತೆ ಹೆಚ್ಚು.

ಲಗ್ನದಿಂದ ಹತ್ತನೇ  ಮನೆಯಲ್ಲಿ ಶನಿ ಗ್ರಹ ಇದ್ದರೆ ಮಂತ್ರಿ ಪದವಿಯನ್ನು ಹೊಂದುತ್ತಾರೆ.ರಾಜಕೀಯದಲ್ಲಿ ನಿಪುಣನಾಗಿರುತ್ತಾರೆ,ಅಧಿಕಾರದಲ್ಲಿ ಉನ್ನತ ಸ್ಥಾನವನ್ನು ಹೊಂದುತ್ತಾರೆ.ಬುದ್ದಿವಂತರಾಗಿರುತ್ತಾರೆ.

 

 

ಲಗ್ನದಿಂದ ಹನ್ನೊಂದನೇ  ಮನೆಯಲ್ಲಿ ಶನಿ ಇದ್ದರೆ ವಾಹನ ಲಾಭ, ವಸ್ತ್ರ, ರತ್ನ, ವ್ಯಾಪಾರದಲ್ಲಿ ಉತ್ತಮ ಫಲಗಳನ್ನು ಪಡೆಯುವರು.

ಲಗ್ನದಿಂದ 12 ನೇ ಮನೆಯಲ್ಲಿ ಶನಿಯಿದ್ದರೆ ಅಂಗ ನ್ಯೂನತೆಯಿಂದ ಬಳಲುವ ಸಾಧ್ಯತೆ ಹೆಚ್ಚು ,ಸದಾ ತಿರುಗಾಡುವವರಾಗಿದ್ದಾರೆ, ದುರ್ಜನರ ಸಂಪರ್ಕ ಮಾಡುತ್ತಾರೆ.

 

 

ಹೀಗೆ ನಿಮ್ಮ ಜಾತಕವನ್ನು ನೋಡಿಕೊಂಡು  ಯಾವ ಮನೆಯಲ್ಲಿ  ಶನಿ ಗ್ರಹ ಇದ್ದರೆ ಏನು ಲಾಭ ಎಂದು ನೀವೇ ತಿಳಿದುಕೊಳ್ಳಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top