fbpx
ಸಮಾಚಾರ

ರಾಜ್ಯ ಕಾಂಗ್ರೆಸ್ ನಿಲುವಿನಿಂದಾಗಿ ಸೆಂಟ್ರೆಲ್ ಮಿನಿಸ್ಟರ್ ಆಗಲಿದ್ದಾರಾ ಬೆಳಗಾವಿ ಸಂಸದ ಸುರೇಶ ಅಂಗಡಿ !

ರಾಜ್ಯ ಕಾಂಗ್ರೆಸ್ ನಿಲುವಿನಿಂದಾಗಿ ಸೆಂಟ್ರೆಲ್ ಮಿನಿಸ್ಟರ್ ಆಗಲಿದ್ದಾರಾ ಬೆಳಗಾವಿ ಸಂಸದ ಸುರೇಶ ಅಂಗಡಿ !

ಬೆಂಗಳೂರು-

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬಂದಿದೆ .ರಾಜ್ಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಆಗಲಿ ಎನ್ನುವ ಕೂಗು ಕೇಳಿಬಂದಿದೆ. ಕಾಂಗ್ರೆಸ್ ಅದಕ್ಕೆ ಸಾಥ್ ನೀಡಿದ ಕಾರಣ ರಾಜ್ಯದಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಸಂಸದರೊಬ್ಬರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ತಂತ್ರವನ್ನು ರಾಜ್ಯದ ಬಿಜೆಪಿ ನಾಯಕರು ರೂಪಿಸಿದ್ದು ಬೆಳಗಾವಿ ಸಂಸದ ಸುರೇಶ ಅಂಗಡಿ ಅವರಿಗೆ ಮಂತ್ರಿ ಸ್ಥಾನ ಸಿಗೋದು ಗ್ಯಾರಂಟಿಯೆಂದು ಹೇಳಲಾಗುತ್ತಿದೆ.


ಸಂಸದ ಪ್ರಲ್ಹಾದ ಜೋಶಿ ಮತ್ತು ಸಂಸದ ಸುರೇಶ ಅಂಗಡಿ ಅವರ ನಡುವೆ ಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆದಿತ್ತು, ಆದರೆ ರಾಜ್ಯದ ಬಲಿಷ್ಠ ಸಮುದಾಯ ಆಗಿರುವ ಲಿಂಗಾಯತ ಸಮುದಾಯದ ಸಂಸದರಿಗೆ ಮಂತ್ರಿ ಸ್ಥಾನ ನೀಡುವ ನಿರ್ಧಾರವನ್ನು ರಾಜ್ಯದ ಬಿಜೆಪಿ ನಾಯಕರು ಕೈಗೊಂಡಿರುವದರಿಂದ ಸಂಸದ ಸುರೇಶ ಅಂಗಡಿ ಅವರು ಸೆಂಟ್ರೆಲ್ ಮಿನಿಸ್ಟರ್ ಆಗೋದು ಖಚಿತವಾಗಿದ್ದು ಸಂಸದ ಸುರೇಶ ಅಂಗಡಿ ಅವರು ಬೆಂಗಳೂರಿನಿಂದ ರಾಜಧಾನಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ.ಸಂಸದ ಸುರೇಶ ಅಂಗಡಿ ಕೇಂದ್ರದ ಮಂತ್ರಿಯಾಗುತ್ತಿರುವ ವಿಷಯ ಬೆಳಗಾವಿ ಜಿಲ್ಲೆಯ ಜನತೆಗೆ ಖುಷಿ ತಂದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top