fbpx
ಜೀವನ ಕ್ರಮ

ಜೀವನ ಬೇಜಾರು ಅನ್ನೋರು ಬುದ್ಧನ ಈ 19 ವಿಷಯಗಳನ್ನ ತಲೇಲಿ ಇಟ್ಕೊಂಡ್ರೆ ಒಳ್ಳೇದಾಗುತ್ತೆ!

ಬುದ್ಧರ ಉಲ್ಲೇಖಗಳು.

ಗೌತಮ ಬುದ್ದರು ನಾವು ಜೀವನದಲ್ಲಿ ಯಾವೆಲ್ಲಾ ವಿಷಯಗಳನ್ನು ಅಳವಡಿಸಿಕೊಂಡರೆ ಸಂತೋಷವಾಗಿ ಇರುತ್ತೇವೆ ಎಂದು ಹೇಳಿದ್ದಾರೆ,ಯಾವುದನ್ನು ಬಿಟ್ಟು ಬಿಡಬೇಕು,ಯಾವುದನ್ನು ಮರೆಯಬೇಕು,ಯಾವ ವಿಷಯವನ್ನು ಮನಸ್ಸಿನಿಂದ ತೆಗೆದು ಹಾಕಬೇಕು?ಮತ್ತು ಯಾಕೆ ?.ಅವು ಯಾವ ವಿಷಯಗಳು ಎಂದು ತಿಳಿದು ನೀವು ಕೂಡ ನಿಮ್ಮ ಜೀವನದಲ್ಲಿ ಅವುಗಳನ್ನು ಪಾಲಿಸಿ ಸಂತೋಷದಿಂದಿರಿ.

1.ಒಳ್ಳೆಯವರಾಗಿರಿ ಆದರೆ ಅದನ್ನು ಸಾಬೀತುಪಡಿಸವಲ್ಲಿಯೇ ನಿಮ್ಮ ಜೀವನವನ್ನು ಮತ್ತು ಸಮಯವನ್ನು ವ್ಯರ್ಥ ಮಾಡಬೇಡಿ.

2.ನೀವೇ ನಿಮ್ಮ ಜೀವನದ ಚಾಲಕರು ಆ ಚಾಲನೆಯ ಅಧಿಕಾರವನ್ನು ಮತ್ತು ಆ ಸ್ಥಳವನ್ನು ಬೇರೆಯವರು ಕದಿಯಲು ಅವಕಾಶ ಮಾಡಿಕೊಡಬೇಡಿ.

3.ಯಾವತ್ತೂ ಬೆರೆಯವರಲ್ಲಿ ಕ್ಷಮೆ ಕೇಳಬೇಡಿ ಯಾಕೆಂದರೆ ಅವರು ನಿಮ್ಮ ಮಾತನ್ನು ತಪ್ಪು ಅರ್ಥ ಮಾಡಿಕೊಂಡರೆ ನೀವ್ಯಾಕೆ ಕ್ಷಮೆ ಕೇಳಬೇಕು.

4.ನಾವು ಒಂಟಿಯಾಗಿ ಇದ್ದರೆ ಅದರ ಅರ್ಥ ನಾವು ಒಂಟಿಯಾಗಿದ್ದೇವೆ ಎಂದು ಅಲ್ಲ.ಅದರ ಅರ್ಥ ನಾವು ಒಬ್ಬರೇ ಎಲ್ಲಾ ವಿಷಯಗಳನ್ನು ಎದುರಿಸುವ ಸಾಮರ್ಥ್ಯ ನಮಗಿದೆ ಎಂದು.

5.ಎಲ್ಲೇ ಆಗಲಿ ನೀವು ಒಂದೇ ತರದ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಒಂದೇ ತರನಾದ ವ್ಯಕ್ತಿಯಾಗಿರಿ ಅದು ನಿಮ್ಮ ಸ್ವಂತ ವಿಷಯದಲ್ಲಾಗಲಿ,ಸರ್ವಜನಿಕವಾಗಲಿ ಅಥವಾ ಖಾಸಗಿಯಾಗಲಿ.

6. ಹಣ ಮನುಷ್ಯರ ಜೀವನದ ಒಂದು ಅತೀ ಕೆಟ್ಟ ಸಂಶೋಧನೆ.ಆದರೆ ಅದು ನಂಬಿಕೆಗೆ ಮನುಷ್ಯನು ಅರ್ಹನೋ ಆಲ್ಲೊವೋ ಎಂಬುದನ್ನು ಮತ್ತು ಮನುಷ್ಯನ ಸ್ವಭಾವವನ್ನು ಪರೀಕ್ಷೆ ಮಾಡುತ್ತದೆ.

7.ಈ ಜಗತ್ತಿನ ತುಂಬೆಲ್ಲಾ ಆಧಿಕವಾಗಿ ರಾಕ್ಷಸರೇ ಇರುವುದು ಆದರೆ ಸ್ನೇಹಿತರಂತೆ ಮುಖವಾಡವನ್ನು ಹಾಕಿಕೊಂಡಿದ್ದಾರೆ ಅಷ್ಟೇ.

8.ನಿಮ್ಮ ಮಕ್ಕಳನ್ನು ಶ್ರೀಮಂತರನ್ನಾಗಿ ಮಾಡಿಸಲು ಶಿಕ್ಷಣ ಕೊಡಿಸಬೇಡಿ ಅದರ ಬದಲು ಜೀವನದಲ್ಲಿ ಹೇಗೆ ಖುಷಿಯಾಗಿರುವುದು ಎಂದು ಹೇಳಿಕೊಡಿ.ಆಗ ಅವರು ಬೆಳೆದು ದೊಡ್ಡವರಾದಾಗ ವಸ್ತುಗಳ ಮಹತ್ವ ತಿಳಿಯುತ್ತಾರೆ ಬರೀ ಅದರ ಬೆಲೆಯನಲ್ಲ.

9.ನೀವು ಎಷ್ಟು ಕಡಿಮೆ ಕೆಟ್ಟ ವ್ಯಕ್ತಿಗಳಿಗೆ ಸ್ಪಂದಿಸದೇ ಇರುತ್ತೀರೋ ಜೀವನದಲ್ಲಿ ಅಷ್ಟು ನೆಮ್ಮದಿಯಿಂದ ಇರುತ್ತೀರಿ.

10.ಬಲಹೀನ ವ್ಯಕ್ತಿಗಳು ಪ್ರತೀಕಾರವನ್ನು ತೆಗೆದುಕೊಳ್ಳುತ್ತಾರೆ. ಬಲವಾದ ವ್ಯಕ್ತಿಗಳು ಕ್ಷಮಿಸಿಬಿಡುತ್ತಾರೆ,ಬುದ್ದಿವಂತ ವ್ಯಕ್ತಿಗಳು ನಿರ್ಲಕ್ಷಿಸುತ್ತಾರೆ.

11.ನೀವು ಸಂತೋಷದಿಂದ ಇರಬೇಕಾದರೆ ಹಿಂದೆ ನಿಮ್ಮ ಜೀವನದಲ್ಲಿ ಆದ ಘಟನೆಗಳನ್ನು ನೆನೆಸಿಕೊಂಡು ಕೊರಗಬೇಡಿ.ಮುಂದಿನ ಜೀವನದ ಬಗ್ಗೆ ಯೋಚನೆ ಮಾಡಿ ತಲೆ ಕೆಡಿಸಿಕೊಳ್ಳಬೇಡಿ. ಈಗಿರುವ ಜೀವನದ ಬಗ್ಗೆ ಸಂಪೂರ್ಣವಾಗಿ ಹೇಗಿರಬೇಕೆಂದು ಯೋಚಿಸಿ.

12.ನೀವು ನಿಮ್ಮ ಜೀವನದಲ್ಲಿ ಗಳಿಸುವ ಸಂತೋಷಕ್ಕೆ ನೀವೇ ಕಾರಣ ಕರ್ತರಾಗಬೇಕು.ಬೇರೆಯವರು ನಿಮ್ಮನ್ನು ಸಂತೋಷ ಪಡಿಸುತ್ತಾರೆ ಎಂದು ಅಂದುಕೊಂಡರೆ.ಅದು ಯಾವಾಗಲೂ ಕೊನೆಗೆ ನಿರಾಸೆಯಿಂದಲೇ ಕೊನೆಗೊಳ್ಳುತ್ತದೆ.

13.ನಾನು ಸತ್ಯವನ್ನು ಹೇಳುವವರನ್ನು ಗೌರವಿಸುತ್ತೇನೆ.ಸತ್ಯವೂ ಎಷ್ಟೇ ಕಠಿಣವಾಗಿದ್ದರೂ ಸರಿಯೇ.

14.ನೀವು ಜೀವನದಲ್ಲಿ ಗಿಣಿಯ ತರ ಇರಬೇಡಿ ಬದಲಿಗೆ ಹದ್ದುಗಳಾಗಿ ಇರಿ.ಗಿಣಿಯೂ ಅಧಿಕವಾಗಿ ಮಾತನಾಡುತ್ತದೆ. ಆದರೆ ಹದ್ದು ಶಾಂತವಾಗಿ ಇದ್ದು, ಅದಕ್ಕೆ ಆಕಾಶವನ್ನು ಮುಟ್ಟುವಂತಹ ಯೋಚನಾ ಶಕ್ತಿ ಇದೆ.

15.ಜೀವನದಲ್ಲಿ ಬದಲಾವಣೆಯನ್ನು ಕಾಲಕ್ಕೆ ತಕ್ಕಂತೆ ಮಾಡಿಕೊಳ್ಳಿ,ಎದರಿಕೊಳ್ಳಬೇಡಿ,ನೀವು ಯಾವುದೋ ಒಂದು ಒಳ್ಳೆಯದನ್ನು ಕಳೆದುಕೊಳ್ಳುತ್ತೀರ ಆದರೆ ಏನೋ ಒಂದು ಉತ್ತಮವಾದುದನ್ನು ಪಡೆದುಕೊಳ್ಳುತ್ತೀರ.

16.ನಮ್ಮ ತೊಂದರೆಗಳ ಬಗ್ಗೆ ಮಾತನಾಡುವುದೇ ನಮ್ಮ ಅತೀ ದೊಡ್ಡ ತಪ್ಪು,ಹುಚ್ಚು ಚಟವಾಗಿದ್ದು ,ಅಂತಹ ಅಭ್ಯಾಸವನ್ನು ಬಿಟ್ಟುಬಿಡಿ,ನಿಮ್ಮ ಸಂತೋಷ ಮತ್ತು ಖುಷಿಯ ಬಗ್ಗೆ ಮಾತನಾಡಿ.

17.ಯಾರ ಜೊತೆಗೂ ಯಾವತ್ತೂ ಕೂಡ ಅತಿಯಾದ ಬಾಂಧವ್ಯವನ್ನು ಇಟ್ಟುಕೊಳ್ಳಬೇಡಿ,ಯಾಕೆಂದರೆ ಆ ಅತಿಯಾದ ಬಾಂಧವ್ಯ ಅತಿಯಾದ ನಿರೀಕ್ಷೆಗಳನ್ನು ತಂದೊಡ್ಡಿ ಆ ನೀರಿಕ್ಷೆಗಳು ಸುಳ್ಳಾದಾಗ ನೋವಿನಿಂದ ಬಳಲುವಂತೆ ಮಾಡುತ್ತದೆ.

18.ಅಸಂಬದ್ಧತೆಗಿಂತ ಶಾಂತಿಯೇ ಮೇಲು.

19.ಅತಿಯಾದ ಯೋಚನೆಯೇ ನಮ್ಮ ಜೀವನದ ಸಂತೋಷವನ್ನು ಹಾಳುಮಾಡಿ ದುಃಖಪಡಲು ಅತೀ ದೊಡ್ಡ ಕಾರಣವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments

2 Comments

Leave a Reply

Your email address will not be published. Required fields are marked *

To Top