fbpx
ಆರೋಗ್ಯ

ಕಾಡುವ ಚರ್ಮ ರೋಗ ಸೋರಿಯಾಸಿಸ್ ಸಮಸ್ಯೆಗೆ ಮನೇಲೆ ಮಾಡಿಕೊಳ್ಳಬಹುದಾದ ಮನೆಮದ್ದುಗಳು

ಸೋರಿಯಾಸಿಸ್ :

 

 

ಇಮ್ಯೂನ್ ಸಿಸ್ಟಂಗೆ (ಕಾಪೇರ್ಪಾಟು) ಸಂಬಂಧಿಸಿದ ತೊಂದರೆಯಾಗಿದ್ದು ಇದೊಂದು ಆಟೋ ಇಮ್ಮ್ಯೂನ್ ಕಾಯಿಲೆಯಾಗಿದೆ.
ಸೋರಿಯಾಸಿಸ್ನಲ್ಲಿ ಟಿ- ಸೆಲ್ಸ್ ತಪ್ಪಾಗಿ ಆರೊಗ್ಯವಂತ ಚರ್ಮದ ಕಣಗಳ ಮೇಲೆ ಧಾಳಿ ನಡೆಸಿ ಚರ್ಮಕೊಶಗಳ ಅನಿಯಂತ್ರಿತ ಉತ್ಪಾದನೆಗೆ ಉತ್ತೇಜಿಸುತ್ತದೆ.

ಆಹಾರ ಪದ್ಧತಿಗಳಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು :

ಸೇಬಿನ ಬೀಜ ಎಣ್ಣೆ ಮಸಾಜ್ ಮಾಡಿಕೊಳ್ಳಬಹುದು.

 

ಫಿಶ್ ಆಯಿಲ್ ಒಮೇಗಾ ಫ್ಯಾಟಿ ಆಸಿಡ್ಸ್ , ಸಾಲ್ಮನ್ ಫಿಶ್ , ಆಲ್ಬಕರ್ ಟುನ  ಇಮ್ಯೂನ್ ಸಿಸ್ಟಂ ಅನ್ನು ಉತ್ತೇಜಿಸುತ್ತದೆ.

 

ದಾಳಿಂಬೆ, ಸೇಬು, ಬಾಳೆಹಣ್ಣು ಹಾಗೂ ಪಪ್ಪಾಯ.ಒಮೇಗಾ 3 ಫ್ಯಾಟಿ ಆಸಿಡ್ ಪೂರಕ ಆಹಾರ ಸೇವನೆಯೂ ಸೋರಿಯಾಸಿಸ್ ಲಕ್ಷಣಗಳನ್ನು ಗುಣಪಡಿಸುತ್ತದೆ. ಅಗಸೆ ಬೀಜ, ಅಕ್ರೋಟು , ಗೋಧಿ, ಹೆಸರುಕಾಳು. ಅರಿಶಿಣ, ಪಡವಲೆ­ಕಾಯಿ, ಬೇವು, ಒಂದೆಲಗ, ಬೆಳ್ಳುಳ್ಳಿ ಸೇವನೆ ಉತ್ತಮ ಆಹಾರಗಳಾಗಿವೆ.

ಬಿಸಿಲಿನಲ್ಲಿ ಒಣಗಿದ ದಾಳಿಂಬೆ ಎಲೆಯನ್ನು ಒಣಗಿಸಿ ಚೂರ್ಣ ಮಾಡಿ ಒಂದು ಲೋಟ ನೀರಿಗೆ ಸೇರಿಸಿ ಕುಡಿಯುತ್ತಿದ್ದರೆ ಸೋರಿಯಾಸಿಸ್ ಸಮಸ್ಯೆಯಿಂದ ದೂರವಾಗುತ್ತದೆ.

 

ಷಾರ್ಕ್ ಮೀನು ಮೃದ್ವಸ್ಥಿ(ಕಾರ್ಟಿಲೇಜ್ ) ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ ಹೊಂದಿದೆ ಇದು ಪ್ಲೇಕ್ ಸೋರಿಯಾಸಿಸ್ ಲಕ್ಷಣಗಳನ್ನು ನಿವಾರಿಸುತ್ತದೆ.

ಗ್ಲುಟೆನ್ ಇಲ್ಲದ ಆಹಾರ ಪದಾರ್ಥಗಳನ್ನು ಸೇವಿಸಬೇಕು.

ಹೆಚ್ಚೆಚ್ಚು ನೀರನ್ನು ಸೇವಿಸಬೇಕು ಚರ್ಮವನ್ನು ಒಣಗದಂತೆ ಕಾಪಾಡಬೇಕು.

ಡೆಡ್ ಸೀ ಸಾಲ್ಟ್ಸ್ ಅನ್ನು ಬಿಸಿ ನೀರಿಗೆ ಹಾಕಿಕೊಂಡು ಸ್ನಾನ ಮಾಡಬೇಕು ಅಥವಾ ಸಮುದ್ರದ ಸ್ನಾವು ಒಳ್ಳೆಯದು.

ಟೀ ಟ್ರೀ ಆಯಿಲ್ ಚರ್ಮವನ್ನು ಒಣಗದಂತೆ ಮತ್ತು ಸತ್ತ ಜೀವಕೋಶಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.

ಪಪ್ಪಾಯ ಗಿಡದ ಹಾಲನ್ನು ಸೋರಿಯಾಸಿಸ್ ಸಮಸ್ಯೆ ಇರುವ ಜಾಗಕ್ಕೆ ಹಚ್ಚಿದರೆ ಒಳ್ಳೆಯದು.

ಹಸಿ ಹಣ್ಣು-ತರಕಾರಿಗಳು, ಮೊಳಕೆ ಕಾಳುಗಳು, ಶೇಂಗಾ, ಅಗಸೆಬೀಜ ಇತ್ಯಾದಿಗಳ ಸೇವನೆಯಿಂದ, 10-15 ದಿನಗಳು ಸಂಪೂರ್ಣವಾಗಿ ಇದೇ ನೈಸರ್ಗಿಕ ಆಹಾರವನ್ನು ಸೇವಿಸಿದರೆ ಕ್ರಮೇಣವಾಗಿ ಮಾಯವಾಗುತ್ತವೆ.

ಉತ್ತಮ moisturizer ನ ಬಳಕೆ ಮಾಡಬೇಕು ರಾತ್ರಿ ನಿದ್ರೆ ಹೋದಾಗ ಸಹ ಮೊಇಸ್ಟುರಿಜ್ರ್ ಬಳಸಬೇಕು .

ಪೆರ್ಫ್ಯೂಮ್ ಬಳಕೆ ನಿಲ್ಲಿಸಿ.

ಅರಿಶಿನವನ್ನು ಹಚ್ಚಬಹುದು .

ಖಾಲಿ ಹೊಟ್ಟೆಯಲ್ಲಿ ಒಂದು ಚಮಚೆ ನಿಂಬೆರಸ ನೆನೆಸಿದ ಅರ್ಧ ಬಟ್ಟಲು ಹಾಗಲ ಕಾಯಿ ರಸವನ್ನು ಕುಡಿಯುವುದು ಉತ್ತಮ.

ಮಧ್ಯಪಾನ ಮಾಡುವುದನ್ನು ನಿಲ್ಲಿಸಿ

ನುಗ್ಗೆ ಎಲೆಯ ರಸವನ್ನು ಎಳ್ಳೆಣ್ಣೆಯಲ್ಲಿ ಸೇರಿಸಿ ಚೆನ್ನಾಗಿ ಕುದಿಸಬೇಕು ನಂತರ ತಣ್ಣಗಾದ ಮೇಲೆ ಚರ್ಮದ ಮೇಲೆ ಹಚ್ಚಿದರೆ ಸೋರಿಯಾಸಿಸ್ ಸಮಸ್ಯೆಯಿಂದ ದೂರವಾಗಬಹುದು.


ಸ್ಟ್ರೆಸ್ ಕಡಿಮೆ ಮಾಡಿ ದೇಹದ ಮಸಾಜ್ ಮಾಡಿಕೊಳ್ಳಿ .

೨೦ ನಿಮಿಷ ಯೋಗ ಮಾಡಿ .

ಬದನೆಕಾಯಿ, ಮೂಲಂಗಿ, ಮೀನು, ಮೊಟ್ಟೆ, ಹುಳಿ, ಹುರುಳಿ ಕಾಳು,ಮೊಸರು, ಉದ್ದು ಇವುಗಳನ್ನು ತಿನ್ನಬಾರದು.

ಒಂದು ಒಟ್ಟಲು ಎಳ್ಳೆಣ್ಣೆಗೆ ಎರಡು ಬಟ್ಟಲು ಬೇವಿನ ಎಲೆ ರಸವನ್ನು ಸೇರಿಸಿ ಚರ್ಮದ ಮೇಲೆ ಹಚ್ಚಿದರೆ ಸೋರಿಯಾಸಿಸ್ ಸಮಸ್ಯೆಯಿಂದ ದೂರವಾಗಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top