ನೀವ್ ಹುಟ್ಟಿದ ದಿನದ ಆಧಾರದ ಮೇಲೆ ಈ ವಸ್ತುಗಳು ನಿಮ್ಮ ಮನೇಲಿ ಇದ್ರೆ ಒಳ್ಳೇದು !
ನಿಮ್ಮ ಹುಟ್ಟಿದ ದಿನ ಒಂಬತ್ತಕ್ಕಿಂತ ಹೆಚ್ಚಾಗಿ ಇದ್ರೆ ಹೀಗೆ ಲೆಕ್ಕ ಹಾಕಿ
ಹುಟ್ಟಿದ ದಿನ 22
2 +2 =4 ಅಂದ್ರೆ ನಿಮ ಸಂಖ್ಯೆ ನಾಲ್ಕು
ಸಂಖ್ಯೆ 1 ಆಗಿದ್ದರೆ
ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಒಂದು ಕೊಳಲು ಇಟ್ಟುಕೊಳ್ಳಬೇಕು.
ಸಂಖ್ಯೆ 2 ಆಗಿದ್ದರೆ
ತಮ್ಮ ಮನೆಯ ಉತ್ತರ ದಕ್ಷಿಣ ದಿಕ್ಕಿನಲ್ಲಿ ಬಿಳಿ ಬಣ್ಣದ ಪ್ರದರ್ಶನ ವಸ್ತು (show piece ) ಇಡಬೇಕು ಹಾಗು ಯುದ್ಧ ಮತ್ತು ಇನ್ನಿತರ ಋಣಾತ್ಮಕ ಚಿತ್ರಗಳನ್ನು ಇರಿಸಬಾರದು.
ಸಂಖ್ಯೆ 3 ಆಗಿದ್ದರೆ
ತಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ಒಂದು ರುದ್ರಾಕ್ಷಿ ಇಟ್ಟುಕೊಳ್ಳಬೇಕು ಹಾಗೆಂದು ಮಾಲೆ ಇಟ್ಟುಕೊಳ್ಳಬೇಡಿ.
ಸಂಖ್ಯೆ 4 ಆಗಿದ್ದರೆ
ನಿಮ್ಮ ಮನೆಯ ನೈಋತ್ಯ ದಿಕ್ಕಿನಲ್ಲಿ ಗಾಜಿನ ಕೆಲವು ತುಣುಕುಗಳನ್ನು ಇಟ್ಟುಕೊಳ್ಳಬೇಕು ಹಾಗೆಂದು ಒಡೆದ ಗಾಜಿನ ಚೂರುಗಳನ್ನು ಇಟ್ಟುಕೊಳ್ಳಬಾರದು.
ಸಂಖ್ಯೆ 5 ಆಗಿದ್ದರೆ
ಮನೆಯ ಉತ್ತರ ದಿಕ್ಕಿನಲ್ಲಿ ಕುಬೇರ ಅಥವಾ ಲಕ್ಷ್ಮಿ ಚಿತ್ರವನ್ನು ಇಟ್ಟುಕೊಳ್ಳಬೇಕು.
ಸಂಖ್ಯೆ 6 ಆಗಿದ್ದರೆ
ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿ ನವಿಲು ಗರಿಗಳನ್ನು ಇಟ್ಟುಕೊಳ್ಳಬೇಕು ಇದು ನಿಮ್ಮ ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.
ಸಂಖ್ಯೆ 7 ಆಗಿದ್ದರೆ
ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿ ಒಂದು ರುದ್ರಾಕ್ಷಿ ಇಟ್ಟುಕೊಳ್ಳಬೇಕು ರುದ್ರಾಕ್ಷಿ ಬಣ್ಣದಲ್ಲಿ ಕಂದು ಬಣ್ಣದಾಗಿರಬೇಕು.
ಸಂಖ್ಯೆ 8 ಆಗಿದ್ದರೆ
ನಿಮ್ಮ ಮನೆಯ ದಕ್ಷಿಣ ದಿಕ್ಕಿನಲ್ಲಿ ಕಪ್ಪು ಸ್ಫಟಿಕ ಇಟ್ಟುಕೊಳ್ಳಬೇಕು, ಸ್ಫಟಿಕ ನಿಮ್ಮ ಮನೆಯಲ್ಲಿ ಎಲ್ಲಾ ಋಣಾತ್ಮಕ ಶಕ್ತಿಗಳನ್ನು ಹೀರಿಕೊಳ್ಳುತ್ತದೆ.
ಸಂಖ್ಯೆ 9 ಆಗಿದ್ದರೆ
ನಿಮ್ಮ ಮನೆಯ ದಕ್ಷಿಣ ದಿಕ್ಕಿನಲ್ಲಿ ಒಂದು ಪಿರಮಿಡ್ ಇಟ್ಟುಕೊಳ್ಳಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
