fbpx
ಆರೋಗ್ಯ

ಬೆಳಗ್ಗೆ ಎದ್ದ ತಕ್ಷಣ ನೀರಿಗೆ ಅರಿಶಿನ ಹಾಕೊಂಡು ಕುಡಿಯೋದ್ರಿಂದ ಈ ಅದ್ಭುತ ಪ್ರಯೋಜನಗಳನ್ನ ಪಡ್ಕೋಬೋದು.

ಭಾರತದಲ್ಲಿ ಅಡುಗೆಯಲ್ಲಿ ಅರಿಶಿಣ ಬಳಸುವುದು ಸಾಮಾನ್ಯ. ವಿದೇಶದಲ್ಲಿ ಕೂಡ ಅರಿಶಿಣದ ಬಗ್ಗೆ ಸಂಶೋಧನೆ ನಡೆದಿದೆ. ಅರಿಶಿಣ ಉತ್ತಮ ಔಷಧೀಯ ಗುಣ ಹೊಂದಿದೆ. ಇದರಲ್ಲಿ ಕರಕ್ಯೂಮಿನ್ ಹೆಸರಿನ ಒಂದು ರಸಾಯನಿಕ ವಸ್ತು ಇದೆ. ಈ ರಸಾಯನಿಕ ಸಾಕಷ್ಟು ರೋಗಗಳಿಗೆ ಔಷಧಿ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ.

ಭಾರತದಲ್ಲಿ ಅರಿಶಿನದ ಬಳಕೆಯು 4000 ವರ್ಷಗಳಷ್ಟು ಹಿಂದೆ, ವೇದದ ಕಾಲದಲ್ಲಿಯೇ ಪ್ರಚಲಿತದಲ್ಲಿತ್ತು. ಭಾರತೀಯ ಆಯುರ್ವೇದದ ಪ್ರಕಾರ ಅರಿಶಿಣ ಎಲ್ಲಕ್ಕಿಂತ ಉತ್ತಮ ಟಾನಿಕ್‌‌ ಆಗಿದೆ. ಬಂಗಾರದಂತ ಬಣ್ಣದ ಸಾಂಬಾರ ಪದಾರ್ಥವಾಗಿರುವ ಅರಿಶಿಣ- ಭಾರತ ಮತ್ತು ಏಶಿಯಾದ ಅಡಿಗೆಯ ಪ್ರಮುಖ ವಸ್ತುಗಳಲ್ಲಿ ಒಂದು. ಹೃದಯ , ಲೀವರ್‌ , ಶ್ವಾಸಕೋಶಕ್ಕಾಗಿ ಅರಿಶಿಣಕ್ಕಿಂತ ಉತ್ತಮ ಔಷಧಿ ಮತ್ತೊಂದಿಲ್ಲ. ಪ್ರತಿನಿತ್ಯ ಅರಿಶಿಣ ಕುಡಿಯಿರಿ, ಇದರಿಂದ ಯಾವುದೇ ಅಡ್ಡಪರಿಣಾಮ ಇಲ್ಲ.

haladiwater

ಬೆಳಗ್ಗೆ ನೀರಿನಲ್ಲಿ ಶುದ್ಧವಾದ ಅರಿಶಿನ ಹಾಕಿ ಕುಡಿಯುವುದರಿಂದ ಆಗುವ ಲಾಭಗಳು :

ದಿನಾಲೂ ಬೆಳಗ್ಗೆ ಶುದ್ಧವಾದ ಅರಿಶಿನದ ನೀರು ಕುಡಿಯುವುದರಿಂದ ದೇಹದಲ್ಲಿನ ರಕ್ತ ಶುದ್ಧಗೊಳ್ಳುತ್ತದೆ.

ದೇಹದಲ್ಲಿನ ಟಾಕ್ಸಿನ್ ಗಳನ್ನು ಹೊರಹಾಕುತ್ತದೆ.

ಮೆದುಳಿನ ಕಾರ್ಯಾಚರಣೆಯನ್ನು ಚುರುಕುಗೊಳಿಸುತ್ತದೆ.

ವೃದ್ದಾಪ್ಯ ಸಮಸ್ಯೆಯಿಂದ ದೊರವಿರಲು ಸಹಕರಿಸುತ್ತದೆ.

ಮೊಡವೆ, ಚರ್ಮ ಸಂಬಂಧಿತ ಸಮಸ್ಯೆಗಳು ಎದುರಾಗುವುದಿಲ್ಲ.

ನಿಮ್ಮ ತ್ವಚೆಯ ಅಂದ ಹೆಚ್ಚಾಗುತ್ತದೆ.

ಊತವನ್ನು ಕಡಿಮೆಗೊಳಿಸಲು ಸಹಕಾರಿಯಾಗಿದೆ.

ರಕ್ತದ ಸಕ್ಕರೆ ಮಟ್ಟದ ನಿಯಂತ್ರಣ

ಕೊಲೆಸ್ಟರಾಲ್ ಮಟ್ಟ ಕಡಿಮೆ ಮಾಡುತ್ತದೆ.

ಅರಿಶಿನವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಆಂಟಿಬ್ಯಾಕ್ಟಿರಿಯಲ್, ಆಂಟಿವೈರಲ್, ಆಂಟಿಫಂಗಲ್ ಗುಣಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಅಷ್ಟೇ ಅಲ್ಲ, ಅರಿಶಿನ ಹಾಕಿದ ನೀರು ಅರಿಶಿನ ಮಸಾಲೆ ಪದಾರ್ಥವಾಗಿದ್ದು ಕ್ರಿಮಿಗಳ ನಾಶಕ್ಕೆ ಸಹಕಾರಿಯಾಗಿದೆ. ಕುದಿಯುತ್ತಿರುವ ನೀರಿಗೆ 5 ಚಮಚದಷ್ಟು ಅರಶಿನ ಹುಡಿಯನ್ನು ಹಾಕಿ. ಈ ನೀರಿಗೆ ಹಣ್ಣು ಮತ್ತು ತರಕಾರಿಯನ್ನು ಹಾಕಿ. ಸ್ವಲ್ಪ ಹೊತ್ತು ಕಳೆದ ನಂತರ ಇವುಗಳನ್ನು ತೊಳೆದುಕೊಂಡು ಬೇರೆ ಪಾತ್ರೆಗೆ ವರ್ಗಾಯಿಸಿಕೊಳ್ಳಿ. ಹಣ್ಣು ಮತ್ತು ತರಕಾರಿಗಳನ್ನು ಸ್ವಚ್ಛವಾಗಿಸುವ ವಿಧಾನಗಳಲ್ಲಿ ಇದೂ ಕೂಡ ಒಂದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top