fbpx
ರಾಜಕೀಯ

ಒಂದು ಕಾಲದಲ್ಲಿ ಸೈಕಲ್ ಶಾಪಲ್ಲಿ ಪಂಚರ್ ಹಾಕ್ತಿದ್ದ ವ್ಯಕ್ತಿ ಈಗ ಮೋದಿ ಸಂಪುಟದಲ್ಲಿ ಮಿನಿಸ್ಟರ್! ಆತ ಯಾರು ಗೊತ್ತಾ..?

ಒಂದು ಕಾಲದಲ್ಲಿ ಸೈಕಲ್ ಶಾಪಲ್ಲಿ ಪಂಚರ್ ಹಾಕ್ತಿದ್ದ ವ್ಯಕ್ತಿ ಈಗ ಮೋದಿ ಸಂಪುಟದಲ್ಲಿ ಮಿನಿಸ್ಟರ್! ಆತ ಯಾರು ಗೊತ್ತಾ..?

 

 

 

ಒಂದು ಕಾಲದಲ್ಲಿ ಟೀ ಮಾರುತ್ತಿದ್ದ ಹುಡುಗ ಹೇಗೆ ನರೇಂದ್ರ ಮೋದಿ ಎಂಬ ದೊಡ್ಡ ಲೀಡರ್ ಆಗಿ ಬೆಳೆದು ದೇಶದ ಪ್ರಧಾನಿಯಾಗಿದ್ದಾರೆಯೋ ಅದೇ ರೀತಿ ಇಲ್ಲೊಬ್ಬ ಸಂಸದರು ಒಂದು ಕಾಲದಲ್ಲಿ ಸೈಕಲ್‌ಗೆ ಪಂಚರ್‌ ಹಾಕುತ್ತಿದ್ದರು ಈಗ ಅವರು ಮೋದಿಯವರ ಸಚಿವ ಸ್ಥಾನ ಸಂಪುಟದಲ್ಲಿ ಗಿಟ್ಟಿಸಿಕೊಂಡಿದ್ದಾರೆ.

 

 

ನೂತನ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಕೇಂದ್ರ ಸಚಿವರಾಗಿ ಆಯ್ಕೆಯಾಗಿರೋ 63 ವರ್ಷದ ವಿರೇಂದ್ರ ಕುಮಾರ್ ಖಟಿಕ್ ಅವರು ಬಡಕುಟುಂಬದಿಂದ ಬಂದವರು. ಅವರ ತಂದೆ ಅಮರ್‌ ಸಿಂಗ್‌ ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿದ್ದರು. ಜೀವನ ನಡೆಸಲು ಪಂಚರ್ ಅಂಗಡಿಯೊಂದನ್ನು ಇಟ್ಟಿಕೊಂಡಿದ್ದರು ಈ ಸೈಕಲ್ ಶಾಪ್‌ನಲ್ಲಿ ತಂದೆಗಿಂತ ವಿರೇಂದ್ರ ಕುಮಾರ್‌ ಅವರೇ ಹೆಚ್ಚು ದುಡಿಯುತ್ತಿದ್ದರು ನಂತರ ಸೈಕಲ್‌ ಶಾಪ್‌ ಮತ್ತು ಕಟುಂಬದ ಜವಾಬ್ದಾರಿಯನ್ನು ಚಿಕ್ಕ ವಯಸ್ಸಿನಲ್ಲೇ ತಮ್ಮ ಹೆಗಲ ಮೇಲೆ ಹೊತ್ತಿಕೊಂಡರು. ಇವರು ತಮ್ಮ ಬಾಲ್ಯವನ್ನು ಪಂಚರ್ ಹಾಕುತ್ತಲೇ ಕಳೆದಿದ್ದರು ಮತ್ತು 10 ವರ್ಷಗಳ ಕಾಲ ಪಂಚರ್‌ ಹಾಕುತ್ತಲೇ ವಿದ್ಯಾಭ್ಯಾಸ ಪೂರ್ಣಗೊಳಿಸಿದರು.

 

 

ಬಳಿಕ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು `ಬಾಲಕಾರ್ಮಿಕ’ ವಿಷಯಕ್ಕೆ ಸಂಬಂಧಿಸಿದಂತೆ ಪಿಎಚ್ ಡಿ ಪದವಿ ಪಡೆದರು. RSS ಕಾರ್ಯಕರ್ತರ ಮಗನಾಗಿದ್ದ ವಿರೇಂದ್ರ ಕುಮಾರ್ ಚಿಕ್ಕಂದಿನಿಂದಲೇ RSS ಮತ್ತು BJP ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಚುನಾವಣಾ ಸಂದರ್ಭದಲ್ಲೂ ಕೂಡ ಇವರು ಸೈಕಲ್ ಶಾಪ್ ಗಳಿಗೆ ಹೋಗಿ ವ್ಯವಹಾರದ ಕೇಳುತ್ತಾರೆ. ಹಾಗಾಗಿ ಇವರು ಹೆಚ್ಚು ಜನರ ಪ್ರೀತಿಗೆ ಪಾತ್ರರಾಗಿದ್ದರು.

 

 

ವಿರೇಂದ್ರ ಕುಮಾರ್ ರವರಿಗೆ ತಮ್ಮ ಹಳೆಯ ಸ್ಕೂಟರ್‌ ಅಂದ್ರೆ ಸಕತ್ ಇಷ್ಟ. ಇವರು ಯಾವುದೇ ಕಾರ್ಯಕ್ರಮಕ್ಕೆ ಹೋದರು ಅದೇ ಸ್ಕೂಟರ್‌ನಲ್ಲಿಯೇ ಹೋಗುತ್ತಾರೆ. ಇವರಿಗೆ ಯಾವುದೇ ರೀತಿಯ ಐಶಾರಾಮಿ ಕಾರು ಇಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಸೈಕಲ್ ಶಾಪಲ್ಲಿ ಪಂಚರ್ ಹಾಕ್ತಿದ್ದ ವ್ಯಕ್ತಿ ಈಗ ಮೋದಿ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿರುವುದು ನಿಜಕ್ಕೂ ದೇಶದ ಎಲ್ಲಾ ಪ್ರಜೆಗಳಿಗೂ ಮಾದರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top