fbpx
ಸಮಾಚಾರ

ಫೋರ್ಬ್ಸ್ ವರದಿ ಪ್ರಕಾರ ಇಡೀ ಏಷ್ಯಾದಲ್ಲೇ ಭಾರತವೇ ಅತ್ಯಂತ ಭ್ರಷ್ಟ ದೇಶವಾಗಲು ಇದೇ ಕಾರಣ.

ಫೋರ್ಬ್ಸ್ ವರದಿ ಪ್ರಕಾರ ಇಡೀ ಏಷ್ಯಾದಲ್ಲೇ ಭಾರತವೇ ಅತ್ಯಂತ ಭ್ರಷ್ಟ ದೇಶವಾಗಲು ಇದೇ ಕಾರಣ.

 

 

ಕೇಂದ್ರ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವುದಾಗಿ ಪದೇಪದೇ ಹೇಳಿಕೊಳ್ಳುತ್ತಿರುವಾಗಲೇ, ಜಾಗತಿಕ ಮಟ್ಟದ ಸಂಸ್ಥೆಯಾದ ಭ್ರಷ್ಟಾಚಾರ ನಿಗ್ರಹ ನಾಗರಿಕ ಸೊಸೈಟಿ ಟ್ರಾನ್ಸರೆನ್ಸಿ ಇಂಟರ್ ನ್ಯಾಷನಲ್ ನಡೆಸಿರುವ ಸಮೀಕ್ಷೆ ಪ್ರಕಾರ, ಏಷ್ಯಾ ಖಂಡದಲ್ಲಿ ಭಾರತ ಅತ್ಯಂತ ಭ್ರಷ್ಟ ದೇಶ ಎಂಬ ಕುಖ್ಯಾತಿಗೆ ಒಳಗಾಗಿದೆ.

 

 

ಫೋರ್ಬ್ಸ್ ವರದಿ ಪ್ರಕಾರ ಭ್ರಷ್ಟಾಚಾರದ ವಿಚಾರದಲ್ಲಿ ಭಾರತವು, ವಿಯಟ್ನಾಂ, ಪಾಕಿಸ್ತಾನ ಹಾಗೂ ಮ್ಯಾನ್ಮಾರ್ ಗಳನ್ನೂ ಹಿಂದಿಕ್ಕಿ ಮೊದಲಸ್ಥಾನದಲ್ಲಿದೆ .ಭಾರತದಲ್ಲಿ ಈಗ ಲಂಚ ಶೇಕಡಾ 69ರಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ವರದಿಯು ಕಳೆದ ಮಾರ್ಚ್ ತಿಂಗಳಲ್ಲಿ ಪ್ರಕಟವಾಗಿದ್ದು, ಫೋರ್ಬ್ಸ್ ನ ಅಧಿಕೃತ ಟ್ವಿಟ್ಟರ್ ಪೇಜ್ ನಲ್ಲಿ ಮತ್ತೊಮ್ಮೆ ಪೋಸ್ಟ್ ಮಾಡಲಾಗಿದೆ.

 

 

ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ ಕಾರ್ಯಗಳ ಕುರಿತು ಸಮೀಕ್ಷೆಯ ಶೇ.53ರಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋದಿ ಅವರು ಅತ್ಯುತ್ತಮವಾಗಿ ಮುನ್ನಡೆಯುತ್ತಿದ್ದಾರೆ ಎಂದು ಎಂದು ಸಮೀಕ್ಷೆ ತಿಳಿಸಿದೆ.

 

 

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಜನರು ಶಾಲೆ, ಆಸ್ಪತ್ರೆ, ಪೊಲೀಸ್, ಗುರುತಿನ ಕಾರ್ಡ್, ಸಾರ್ವಜನಿಕ ಸೌಲಭ್ಯ ನೀಡುವ ಸ್ಥಳಗಳಲ್ಲಿ ಲಂಚ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ ಅಲ್ಲದೆ ಈ ಮಟ್ಟದಲ್ಲೇ ಲಂಚ ಮತ್ತು ಭ್ರಷ್ಟಾಚಾರ ಜಾಸ್ತಿ ಪ್ರಮಾಣದಲ್ಲಿದರಿಂದ ಭ್ರಷ್ಟಾಚಾರದ ಪಟ್ಟಿಯಲ್ಲಿ ಭಾರತ ಮೊದಲ ರಾಷ್ಟ್ರವಾಗಲು ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top