fbpx
ಉಪಯುಕ್ತ ಮಾಹಿತಿ

ಒಂದು ಕ್ಷಣವೂ ಫೋನ್ ಬಿಟ್ಟಿರಲು ನಿಮ್ಮಿಂದ ಸಾದ್ಯವಾಗಿತ್ತಿಲ್ವಾ..?ಹಾಗಿದ್ರೆ ನಿಮ್ಗೆ ಈ ಖಾಯಿಲೆ ಇದೆ.

ಒಂದು ಕ್ಷಣವೂ ಫೋನ್ ಬಿಟ್ಟಿರಲು ನಿಮ್ಮಿಂದ ಸಾದ್ಯವಾಗಿತ್ತಿಲ್ವಾ..?ಹಾಗಿದ್ರೆ ನಿಮ್ಗೆ ಈ ಖಾಯಿಲೆ ಇದೆ.

 

 

ನಿರಂತರ ಮೊಬೈಲ್ ಬಳಕೆದಾರರೇ ಎಚ್ಚರಿಕೆ!.ಮೊಬೈಲ್ ಅನಿವಾರ್ಯ ಎಂದೆನಿಸುತ್ತಿರುವ ಈ ದಿನಗಳಲ್ಲಿ ಅದರಿಂದ ದೂರ ಉಳಿಯಲೇಬೇಕಾದ ಅನಿವಾರ್ಯತೆಯೂ ಇದೆ. ಮೊಬೈಲ್ ಫೋನ್ ಅನ್ನು ಒಂದು ಕ್ಷಣವೂ ಬಿಟ್ಟಿರಲು ಸಾಧ್ಯವಾಗದಿದ್ದರೆ ನಿಮಗೆ ನೋಮೊಫೋಬಿಯಾ ಸಮಸ್ಯೆ ಇದೆ ಎಂದರ್ಥ.ನೋಮೊಫೋಬಿಯಾ ಎಂದರೆ, “ನಮ್ಮ ಅಸ್ತಿತ್ವ ನಶಿಸುತ್ತದೆ ಮತ್ತು ತಂತ್ರಜ್ಞಾನದಿಂದ ದೂರ ಇರಬೇಕಾಗುತ್ತದೆ ಎಂಬ ಭಯ.

 

 

ಇತ್ತೀಚಿಗೆ ಸ್ಮಾರ್ಟ್‌ಫೋನ್‌ಗಳು ಅನೇಕ ಜನರ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ನಿತ್ಯ ಜೀವನದ ಪ್ರತಿ ಹಂತದಲ್ಲೂ ಸ್ಮಾರ್ಟ್ ಫೋನ್ ಬಳಕೆಯಾಗುತ್ತಿವೆ. ಒಬ್ಬರನೊಬ್ಬರು ಸಂಪರ್ಕ ಮಾಡಲು ಅವು ಅನಿವಾರ್ಯವಾಗಿ ಬಿಟ್ಟಿವೆ. ಈ ರೀತಿ ಅನಿವಾರ್ಯವಾಗಿರುವ ಮೊಬೈಲ್‌ಫೋನ್‌ಗಳಿಂದ ದೂರವಿದ್ದಾಗ ಉಂಟಾಗುವ ಭಯ ಅಥವಾ ಆತಂಕವನ್ನು ಸಂಶೋಧಕರು ‘ನೊಮೊಫೋಬಿಯಾ’ ಎಂದು ಕರೆಯುತ್ತಾರೆ.

 

 

ಸ್ಮಾರ್ಟ್‌ಫೋನ್‌ಗಳನ್ನು ಅತಿಯಾಗಿ ಅವಲಂಬಿಸಿರುವವರು ಅವುಗಳಿಂದ ಒಂದು ಕ್ಷಣ ದೂರವಾದರೂ ಅವರಿಗೆ ಏನೋ ಒಂದು ರೀತಿ ಮಾನಸಿಕ ಒತ್ತಡ,, ಹೃದಯ ಬಡಿತ ಹೆಚ್ಚಾಗುವುದು, ರಕ್ತದೊತ್ತಡ, ಆತಂಕ ಮತ್ತು ಅಹಿತಕರ ಮನೋಭಾವ ಮೂಡುವುದಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನಗಳೂ ಎಚ್ಚರಿಸಿವೆ. ಹಾಗಾಗಿ, ನಿಮಗೂ ನೋಮೊಫೋಬಿಯಾ ಇದೆಯಾ ಎಂದು ಚೆಕ್ ಮಾಡಿಕೊಳ್ಳಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top