fbpx
ಜಾಗೃತಿ

ಬೆಂಗಳೂರಿನ ಭಾರಿ ಮಳೆಯಿಂದಾಗುವ ಸಮಸ್ಯೆಗೆ ಬ್ರೇಕ್ ಹಾಕಲು ಉಪ್ಪಿ ಕೊಟ್ರು ಮಾಸ್ಟರ್ ಪ್ಲಾನ್..!ಆ ಪ್ಲಾನ್ ಏನು ಗೊತ್ತಾ?

ಬೆಂಗಳೂರಿನ ಭಾರಿ ಮಳೆಯಿಂದಾಗುವ ಸಮಸ್ಯೆಗೆ ಬ್ರೇಕ್ ಹಾಕಲು ಉಪ್ಪಿ ಕೊಟ್ರು ಮಾಸ್ಟರ್ ಪ್ಲಾನ್..! ಆ ಪ್ಲಾನ್ ಏನು ಗೊತ್ತಾ?

 

 

ಧಾರಾಕಾರವಾಗಿ ಸತತ ಮಳೆಯಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಜನರು ಮತ್ತೆ ತತ್ತರಿಸಿ ಹೋಗಿದ್ದಾರೆ. ಮಳೆಯ ಅಬ್ಬರಕ್ಕೆ ರಸ್ತೆಗಳಲ್ಲಿ ನೀರು ಹರಿದು ರಸ್ತೆಗಳು ಜಲಾವೃತವಾಗುವುದು ಮಾಮೂಲಿಯಾಗಿದೆ. ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗುತ್ತಿದೆ. ಹಲವೆಡೆ ಮರಗಳು ನೆಲಕ್ಕೆ ಉರುಳುತ್ತಿವೆ. ಇದರಿಂದ ಟ್ರಾಫಿಕ್ ಕಿರಿಕಿರಿಯಾಗುತ್ತಿದೆ. ಮಳೆ ಬಂದಾಗ, ಸಾಮಾನ್ಯ ದಿನಗಳಲ್ಲೂ ಬೆಂಗಳೂರಿನ ಜನರಿಗೆ ಈ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ.

 

 

ಈ ಸಮಸ್ಯೆಗೆ ಸರ್ಕಾರದ ಬಳಿಯೂ ಪರಿಹಾರವಿಲ್ಲ ಆದರೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರ ಬಳಿ ಒಂದು ಮಾಸ್ಟರ್ ಪ್ಲಾನ್ ಇದೆ. ಸದ್ಯ ಪ್ರಜಾಕಾರಣ,ಪ್ರಜಕೀಯ,ಪ್ರಜನೀತಿಯ ಪರಿಕಲ್ಪನೆಯೊಂದಿಗೆ ಉತ್ತಮ ಪ್ರಜಾ ಪಕ್ಷವನ್ನು ಸ್ಥಾಪಿಸಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಉಪೇಂದ್ರ ಅವರು ಇದೆ ಮೊದಲ ಬಾರಿಗೆ ಅನಿವಾಸಿ ಭಾರತೀಯ ಸೌರವ್ ಬಾಬು ಅವರ ಜೊತೆ ಫೇಸ್‌ಬುಕ್‌ ಲೈವ್‌ ಮೂಲಕ ಬೆಂಗಳೂರಿನ ರಸ್ತೆ, ಒಳಚರಂಡಿ, ಮಳೆನೀರಿನಿಂದಾಗುವ ಸಮಸ್ಯೆಗೆ ಪರಿಹಾರ ಕುರಿತು ಮಾತನಾಡಿದ್ದಾರೆ.

 

 

ಭಾರತದಲ್ಲಿ‌ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕಾಗಿ ಹಣ ದೋಚುತ್ತಿರುವ ದೊಡ್ಡ ದಂಧೆಯೇ ಆಗಿದೆ ಕಳಪೆ ಚರಂಡಿ ವ್ಯವಸ್ಥೆ ಮತ್ತು ದೋಷಪೂರಿತ ರಸ್ತೆಗಳೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ ಎಂದು ಸೌರಭ್ ಹೇಳುತ್ತಾರೆ.ಈಗಾಗಲೇ ವಿದೇಶದ ಕೆಲವು ನಗರಗಳಲ್ಲಿ ಇರುವಂತೆ ರಸ್ತೆ ಪಕ್ಕ ಒಳಚರಂಡಿ ವ್ಯವಸ್ಥೆ ಬೆಂಗಳೂರಿನಲ್ಲಿ ಜಾರಿಗೆ ತರಬೇಕು ಎನ್ನುತ್ತಾರೆ ಸೌರವ್ ಬಾಬು. ಪ್ರತಿಯೊಂದು ರಸ್ತೆ ಪಕ್ಕ ಪೈಪ್ ಹಾಕಿ ಅದಕ್ಕೆ ಚೇಂಬರ್ ಗಳನ್ನ ಮಾಡಿದರೆ ರಸ್ತೆಯಲ್ಲಿ ನೀರು ನಿಲ್ಲುವುದಿಲ್ಲ ಒಂದು ವೇಳೆ ಚೇಂಬರ್ ನಲ್ಲಿ ಕಸ ಕಟ್ಟಿಕೊಂಡರೆ ಕಟ್ಟಿಕೊಂಡರೂ, ಕ್ಲೀನ್ ಮಾಡಿಕೊಳ್ಳಬಹುದು, ರಸ್ತೆಯಲ್ಲಿ ನೀರು ನಿಲ್ಲುವುದರಿಂದ, ರಸ್ತೆಗಳು ಬೇಗ ಹಾಳಾಗುತ್ತಿವೆ. ರೋಡ್ ಮೇಲೆ ಬೀಳುವ ಪ್ರತಿ ಹನಿ ನೀರು ಕೂಡ ಒಳಚರಂಡಿ ತಲುಪಿದರೆ, ರಸ್ತೆ ಹಾಳಾಗುವುದಿಲ್ಲ ಹಾಗಾಗಿ ಈ ರಸ್ತೆ ಪಕ್ಕ ಒಳಚರಂಡಿ ವ್ಯವಸ್ಥೆ ಜಾರಿಗೆ ಬಂದರೆ ಎಷ್ಟೇ ವರ್ಷ ಆದರೂ ರಸ್ತೆ ಚೆನ್ನಾಗಿರುತ್ತದೆ. ಪ್ರತಿ ನಗರದದಲ್ಲಿ ಟ್ಯಾಂಕ್ ಕಟ್ಟಿ ಮಳೆ ನೀರನ್ನು ಸಂಗ್ರಹಿಸಿದರೆ, ಇಡೀ ಏರಿಯಾಗೆ ನೀರನ್ನು ಒದಗಿಸಬಹುದು. ಹೀಗಾದರೆ ಬೆಂಗಳೂರಿಗೆ ಕಾವೇರಿ ನೀರಿನ ಅವಶ್ಯಕತೆ ಇರೋದಿಲ್ಲ. ನೀರಿನ ಸಮಸ್ಯೆಯೂ ಬರುವುದಿಲ್ಲ ಎಂದು ಹೇಳಿದ್ದಾರೆ.

 

 

ಉಪೇಂದ್ರ ಮತ್ತು ಸೌರಭ್ ಅವರ ಈ ಸೂಪರ್ ಐಡಿಯಾವನ್ನು ಜಾರಿಗೆ ತರಲು ರಸ್ತೆಗಳನ್ನ ಸರಿಪಡಿಸಲು ಎಷ್ಟು ಖರ್ಚು ಆಗುತ್ತದೆಯೋ ಅದಕ್ಕೆ ಖರ್ಚಾಗುವ ಅರ್ಧದಷ್ಟು ಹಣದಲ್ಲಿ ಈ ಸಮಸ್ಯೆ ಪರಿಹರಿಸಬಹುದು ಎಂದು ಸಲಹೆ ನೀಡಿದ್ದಾರೆ. ಈ ಸೂಪರ್ ಐಡಿಯಾ ನೀಡಿರುವ ಉಪೇಂದ್ರ ಮತ್ತು ಸೌರಭ್ ಅವರ ವಿಡಿಯೋವನ್ನು ಇಲ್ಲಿ ನೋಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top