fbpx
ಸಾಧನೆ

36 ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಲ್ಲರಿಂದಲೂ ಪ್ರೀತಿಯಿಂದ ‘ಅಮ್ಮ’ ಎಂದು ಕರೆಸಿಕೊಳ್ಳುವ ಹೆಮ್ಮೆಯ ಐಎಎಸ್ ಅಧಿಕಾರಿಣಿ ಯಾರು ಅಂತ ತಿಳ್ಕೊಳ್ಳಿ

ಇಂದು ನಾವು 36 ವರ್ಷಗಳು ತಮ್ಮ ಸೇವೆಯನ್ನು ಭಾರತದ ಏಳಿಗೆಗೆ ಮುಡುಪಾಗಿಟ್ಟ ದಕ್ಷ ಅಧಿಕಾರಿಣಿ ರತ್ನ ಪ್ರಭಾ ಐಎಎಸ್ ಅವರ ಬಗ್ಗೆ ತಿಳಿದುಕೊಳ್ಳೋಣ .

ಓರ್ವ ಯಶಸ್ವಿ ಮಹಿಳೆಯಾಗಿ ಖಾಸಗಿ ಕೆಲಸ , ಕಚೇರಿಯಲ್ಲಿನ ಕೆಲಸ ತಮ್ಮ ವಲಯಕಷ್ಟೆ ಮೀಸಲಿರದೆ ಜನರು ತರುವ ಅಹವಾಲುಗಳನ್ನೆಲ್ಲ ತಮ್ಮ ಶಕ್ತಿಗೆ ಮೀರಿ ಪರಿಹರಿಸಲು ಪ್ರಯತ್ನ ಪಡುವ ಹಾಗು ಎಲ್ಲರನ್ನು ನಗು ಮೊಗದಿ ಎಲ್ಲರನ್ನು ಬರಮಾಡಿಕೊಳ್ಳುವ ಅವರ ಗುಣ ಮೆಚ್ಚುವಂತದ್ದು , ಎಷ್ಟು ಜನ ಸರ್ಕಾರಿ ಅಧಿಕಾರಿಗಳು ತಮ್ಮ ರಜಾ ದಿನಗಳಲ್ಲೂ ,ದಿನದ 24 ಘಂಟೆಗಳಲ್ಲೂ ತಮ್ಮ ಇಲಾಖೆಯ ಏಳಿಗೆಗಾಗಿ ಶ್ರಮಿಸುತ್ತಾರೆ ಹೇಳಿ ? ನಿಮ್ಮ ಉತ್ತರ ಇಲ್ಲ ಎಂದಾದರೆ ಅದು ತಪ್ಪು ಇಲ್ಲೊಬ್ಬರು ಅಧಿಕಾರಿಣಿ ಇದ್ದಾರೆ ಅವರೇ ಶ್ರೀಮತಿ ರತ್ನ ಪ್ರಭಾ ಐಎಎಸ್ .

 

 

36 ವರ್ಷಗಳ ನಿರಂತರ ಸೇವೆ ಆದರೂ ಇನ್ನು ಜನಪರ ಕೆಲಸ ಮಾಡುವ ಹಂಬಲ

ರತ್ನ ಪ್ರಭಾರವರ ತಂದೆ ಒಬ್ಬ ನಿಷ್ಠಾವಂತ ಐಎಎಸ್ ಅಧಿಕಾರಿಗಳು ,ತಾಯಿ ಹೆಸರಾಂತ ವೈದ್ಯರು ಹೀಗಿರುವಾಗ ಇಬ್ಬರು ಜನಪರ ಕಾಳಜಿ ಹಾಗು ಸೇವಾ ಮನೋಭಾವನೆ ಹೊಂದಿದ್ದವರು ಸಮಾಜಕ್ಕಾಗಿ ಒಳಿತು ಮಾಡುವ ತುಡಿತ , ಸಮಾಜದಲ್ಲಿ ಉನ್ನತ ಸ್ಥಾನ ಮಾನದಲ್ಲಿದ್ದರು ಪೋಷಕರು,

ಬಡವರು , ಸಹಾಯ ಬೇಡಿಬಂದವರನ್ನು ಆದರಿಸುತ್ತಿದ್ದ ರೀತಿ ರತ್ನ ಪ್ರಭಾರವರ ಮೇಲೆ ಗಾಢವಾದ ಪರಿಣಾಮ ಬೀರಿತ್ತು , ಇದೆ ನಿಟ್ಟಿನಲ್ಲಿ ಸತತ 36 ವರ್ಷಗಳಿಂದ ತಮ್ಮ ಮೊದಲನೆಯ ದಿನ ಎಷ್ಟು ಉತ್ಸುಕರಾಗಿದ್ದರೋ ಈಗಲೂ ಹಾಗೆ ಸಮಾಜಮುಖಿ ,ಜನಪರ ಕೆಲಸಗಳನ್ನು ಬಹಳ ಇಷ್ಟ ಪಟ್ಟು ತಮ್ಮ ಶಕ್ತಿ ಮೀರಿ ಮಾಡುತ್ತಾ ಬಂದಿದ್ದಾರೆ , ತಮ್ಮ ಪೋಷಕರ ಸರಳ ಜೀವನ ಹಾಗು ಮಕ್ಕಳು ತಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ಅವರೇ ರೂಪಿಸಿಕೊಳ್ಳಲು ನೀಡಿದ್ದ ಸ್ವಾತಂತ್ರದ ಫಲವಾಗಿ ರತ್ನ ಪ್ರಭಾರವರು ಇಂದು ಓರ್ವ ದಕ್ಷ ಐಎಎಸ್ ಅಧಿಕಾರಿಣಿಯಾಗಿದ್ದಾರೆ .

 

ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ಕೆಲಸ ಶುರು ಮಾಡಿದಾಗ ಕಲಿತದ್ದು ಜೀವನ ಪಾಠ

ನಗರಗಳಲ್ಲಿ ಅಥವಾ ಮೂಲಭೂತ ಸೌಕರ್ಯಗಳು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಕೆಲಸ ಮಾಡುವ ಹಂಬಲ ಎಷ್ಟೋ ಸರ್ಕಾರಿ ಅಧಿಕಾರಿಗಳಿಗಿರುತ್ತದೆ ಆದರೆ ರತ್ನ ಪ್ರಭಾರವರು ಮೊದಲಿಗೆ ಕೆಲಸ ಮಾಡಲು ಶುರು ಮಾಡಿದ್ದು ಬೆಳಗಾವಿಯಲ್ಲಿ ಪರೀಕ್ಷಣಾಧಿಕಾರಿಯಾಗಿ ,ಹಿಂದುಳಿದ ಪ್ರದೇಶಗಳ ಜನರ ನೋವಿಗೆ ಸ್ಪಂದಿಸುತ್ತಾ ಕಷ್ಟ ವೆಂದರೆ ಏನೆಂದು ತಿಳಿದುಕೊಂಡು ಅದನ್ನು ಪರಿಹರಿಸುತ್ತಾ ಅವರೊಡನೆ ಒಬ್ಬರಾಗಿ ಹೋದರು ಈ ರೀತಿಯ ಸಾರ್ಥಕ ಮನೋಭಾವನೆ ಸಿಟಿಯಲ್ಲಿ ಬರುವುದು ಬಹಳ ಕಡಿಮೆ ಎಂಬುದು ಅವರ ಅಭಿಪ್ರಾಯ .

 

 

ಹಳ್ಳಿಗಳು ಉದ್ದಾರವಾದರೆ ದೇಶ ಉದ್ದಾರವಾದಂತೆಮಾದರಿ ಹಳ್ಳಿಯ ಕನಸು ಸಾಕಾರ

ನಾವು ಗ್ರಾಮಗಳನ್ನು ಸುಧಾರಿಸಿದರೆ ನಾವು ರಾಷ್ಟ್ರವನ್ನು ಸುಧಾರಿಸಬಹುದು ಹಾಗೆಯೇ ಪ್ರಭಾರವರು ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹರಿಸಲು ಪ್ರಯತ್ನಿಸಿದರು .
ಉದಾಹರಣೆಗೆ : ಬೀದರ್ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅಪಾರವಾಗಿತ್ತು ಈ ಸಮಸ್ಯೆಯನ್ನು ಪರಿಹರಿಸಲು ಬೋರೆವೆಲ್ಸ್, ಟ್ಯಾಂಕ್ ಸರಬರಾಜು, ಸಂರಕ್ಷಣೆ ಕ್ರಮಗಳು ಮತ್ತು ಜಾಗೃತಿ ಶಿಬಿರಗಳು ಇನ್ನು ಅನೇಕ ಕಾರ್ಯಕ್ರಮ ಕೈಗೊಂಡರು ಅಷ್ಟೇ ಅಲ್ಲದೆ ನೈರ್ಮಲ್ಯ, ಆಹಾರ ಪದ್ಧತಿಗಳು, ಚಟ ವಿಮುಕ್ತಿ, ವೈದ್ಯಕೀಯ ಸೌಲಭ್ಯಗಳು, ರಸ್ತೆಗಳು, ಕುಡಿಯುವ ನೀರು, ಸುಸ್ಥಿರ ಕೃಷಿ, ಸಾಂಸ್ಕೃತಿಕ ಪುಷ್ಟೀಕರಣ, ಲಿಂಗ ಪಕ್ಷಪಾತ, ಸಾಂಪ್ರದಾಯಿಕ ಜೀವನ, ವರ್ತನೆಯ ಸವಾಲುಗಳು, ಸಮುದಾಯ ಅಭಿವೃದ್ಧಿ, ಉದ್ಯೋಗ, ಯುವ ಸಬಲೀಕರಣ, ಕೌಶಲ್ಯ ಅಭಿವೃದ್ಧಿ ಇತ್ಯಾದಿ. ಕಾರ್ಯಕ್ರಮಗಳನ್ನು ಮಾದರಿ ಗ್ರಾಮದ ಪರಿಕಲ್ಪನೆಗಾಗಿ ಬೀದರ್ ನಲ್ಲಿ ಡಿಸಿಯಾಗಿದ್ದಾಗ ಸಂಪೂರ್ಣ ಕ್ರಿಯಾ ಯೋಜನೆ ರಚಿಸುವಲ್ಲಿ ಯಶಸ್ವಿಯಾಗಿದ್ದರು.

 

80 ದಶಕದಲ್ಲಿ ನಡೆದಿತ್ತು ಹಿಂದುಳಿದ ಮಹಿಳೆಯರ ಅಕ್ಷರಾಭ್ಯಾಸ

ಬೀದರ್ ನಲ್ಲಿ ಸಹಾಯಕ ಕಮಿಷನರ್ ಆಗಿದ್ದ ಸಂದರ್ಭದಲ್ಲಿ ಯಾವಾಗಲೂ ಮಹಿಳೆಯರಲ್ಲಿ ಶಿಕ್ಷಣವನ್ನು ಸುಧಾರಿಸಲು ಅತ್ಯುತ್ತಮ ಪ್ರಯತ್ನವನ್ನು ಮಾಡಿದ್ದಾರೆ . ಮಹಿಳಾ ದಾಖಲಾತಿ ಹೆಚ್ಚಿಸಲು ಪಂಚಾಯಿತಿ ಹಿರಿಯರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿ ಹಳ್ಳಿಯ ಹೆಣ್ಣು ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಉತ್ತೇಜಿಸಲಾಗಿತ್ತು ,  ಶಾಲಾ ಮೂಲಸೌಕರ್ಯವನ್ನು ಸುಧಾರಿಸಲಾಯಿತು. ಬಾಲಕಿಯರ ಪ್ರತ್ಯೇಕ ಟಾಯ್ಲೆಟ್ಗಳನ್ನು ನಿರ್ಮಿಸಲಾಯಿತು,ದೂರದಲ್ಲಿರುವ ಗ್ರಾಮಗಳ ಹೆಣ್ಣು ಮಕ್ಕಳು , ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಹೆಣ್ಣು ಮಕ್ಕಳು ಮತ್ತು ದೇವದಾಸಿ ಮಹಿಳೆಯರನ್ನು ಸಹ ಪ್ರೋತ್ಸಾಹಿಸಲಾಯಿತು .

 

 

ಮಹಿಳಾ ಸ್ವಯಂ ಸೇವಕಿಯರನ್ನು ಸಹ ನೇಮಿಸಲಾಗಿತ್ತು ಅವರನ್ನು ‘ಗ್ರಾಮ್ ಚೇತಾಕಿಸ್’ ಎಂದು ಕರೆಯಲಾಗುತಿತ್ತು , ಅಷ್ಟೇ ಅಲ್ಲದೆ ದೇವದಾಸಿ ಹೆಣ್ಣು ಮಕ್ಕಳಿಗೆ ಅಂಗನವಾಡಿಗಳಲ್ಲಿ ಕೆಲಸ ಹಾಗು ಸುಮಾರು ೮೦೦-೧೦೦೦ ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು ಈ ಕೆಲಸಕ್ಕೆ ಸರ್ಕಾರದಿಂದ ಪುರಸ್ಕಾರವು ದೊರೆತಿತ್ತು .ಹೀಗೆ ಎಲ್ಲರ ಬಾಯಲ್ಲೂ ಗೌರವದಿಂದ ‘ಅಮ್ಮ ‘ ಎಂದು ಕರೆಸಿಕೊಂಡರು .

 

ಕೋಮು ಗಲಭೆಗಳನ್ನು ನಿವಾರಿಸಿದ್ದ ಗಟ್ಟಿಗಿತ್ತಿ !

ರಾಯಚೂರಿನಲ್ಲಿ ಗಣೇಶ ಚತುರ್ಥಿಯ ಸಂಧರ್ಭದಲ್ಲಿ ನಡೆದ ಎರಡು ಧರ್ಮಗಳ ನಡುವಿನ ಕೋಮು ಗಲಭೆ ನಡೆದು ಇಡೀ ಜಿಲ್ಲೆಯಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು , ರತ್ನ ಪ್ರಭಾರವರು ಎಂದಿನಂತೆ ತಮ್ಮ ಬುದ್ದಿವಂತಿಕೆ ಉಪಯೋಗಿಸಿ ಉಸಿರುಗಟ್ಟಿಸುವ ವಾತಾವರಣದಲ್ಲಿಯೂ ಇಬ್ಬರು ಧಾರ್ಮಿಕ ಮುಖಂಡರನ್ನು ಕರೆಸಿ ಶಾಂತಿ ಸಂಧಾನ ಮಾಡಿಸಿ ಸಮಸ್ಯೆಯನ್ನು ಒಬ್ಬರೇ ಹೆಣ್ಣು ನಿಭಾಯಿಸಿದ್ದರು .
ಸೆನ್ಸರ್ ಬೋರ್ಡ್ ನಿಭಾಯಿಸಿದ್ದ ಮೊದಲ ಮಹಿಳಾ ಅಧಿಕಾರಿಣಿ.

ಮದುವೆಯ ನಂತರ ಆಂಧ್ರ ಪ್ರದೇಶಕ್ಕೆ ಮರಳಿ ಹೋಗಿ ಅಲ್ಲಿನ ಸೆನ್ಸಾರ್ ಬೋರ್ಡ್ ನಲ್ಲಿ ಕೆಲಸ ಶುರುವಿಟ್ಟುಕೊಂಡರು ,ಆನಂತರದಲ್ಲಿ ರಫ್ತು ಸಂಸ್ಕರಣಾ ವಲಯದಲ್ಲಿ ಡೆವಲಪ್‍ಮೆಂಟ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸಲು ಶುರು ಮಾಡಿದ್ದರು , ಮಹಿಳೆಯಾಗಿ ಈ ಉನ್ನತ ಜವಾಬ್ದಾರಿಯನ್ನು ಹೊರುವುದು ಸುಲಭವಾದ ಮಾತಾಗಿರಲಿಲ್ಲ ಬಂಡವಾಳ ಹೂಡಿಕೆದಾರರ ಗಮನ ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿ ಅಂತಹ ಪರಿಸ್ಥಿತಿಯಲ್ಲಿ ವಿಶಾಖ ಪಟ್ಟಣ ದಂತ ಟೈರ್ -2 ನಗರಗಳಿಗೆ ಉದ್ಯಮಿಗಳನ್ನು ಕರೆ ತರುವುದು ಸುಲಭವಾದ ಮಾತಾಗಿರಲಿಲ್ಲ ಕಾರಿನ ಚಕ್ರ ಯೋಜನೆ ಮತ್ತು ಡೈಮಂಡ್ ಕತ್ತರಿಸುವ ಘಟಕ ಮತ್ತು ಹೊಳಪು ಮಾಡುವ ಘಟಕವನ್ನು ತರಲು ಬಹಳ ಹೆಣಗಾಡಬೇಕಾಯಿತು. ಹಲವಾರು ಮಹಿಳೆಯರಿಗೆ ತರಬೇತಿ ಮತ್ತು ಉದ್ಯೋಗ ನೀಡಲಾಯಿತು ಅವರ ಜೀವನವು ಸಂಪೂರ್ಣವಾಗಿ ಬದಲಾಯಿತು ಮತ್ತು ಮಹಿಳೆಯರು ಕೆಲಸ ಮಾಡಲು ಸೈಕಲ್ ಮತ್ತು ಮೊಪೆಡ್ಗಳಲ್ಲಿ ಬರುತ್ತಿದ್ದರು .

ಸುಮಾರು 4000 ಮಹಿಳೆಯರಿಗೆ ಉದ್ಯೋಗಾವಕಾಶಗಳು ದೊರಕಿದವು
ಇದಲ್ಲವೇ ಮಹಿಳಾ ಸಬಲೀಕರಣ ? ರತ್ನ ಪ್ರಭಾರವರು ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು.

 

 

ಕನ್ನಡ ನಾಡಿನ ಬಗೆಗಿನ ಪ್ರೀತಿ

ಹೌದು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಅನೇಕ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದಾರೆ , ಅಷ್ಟೇ ಅಲ್ಲದೆ ಅವರ ನೆಚ್ಚಿನ ಕ್ರೀಡೆಗಳನ್ನು ಬೆಳೆಸುವ ಉದ್ದೇಶದಿಂದ ಗುರು ಸಾಯಿ ದತ್ತ , ಸೈನಾ ನೆಹವಾಲ್ ,ಶ್ರೀಕಾಂತ್ ರವರನ್ನು ಅವರ ಆರಂಭಿಕ ದಿನಗಳಲ್ಲಿ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡಿದ್ದಾರೆ .

 

 

ಮಾತೃ ಭಾಷೆ ತೆಲುಗಾದರು , ಕನ್ನಡ ಭಾಷೆಯ ಬಗೆಗಿನ ಪ್ರೀತಿ ಅವರನ್ನು ಕನ್ನಡ ಕಲಿಯುವ ಹಾಗೆ ಮಾಡಿತು ಅಷ್ಟೇ ಅಲ್ಲದೆ ಕನ್ನಡ ಭಾಷೆಯ ಮೇಲೆ ಹಿಡಿತ ಸಾಧಿಸಲು ಅನೇಕ ಪರೀಕ್ಷೆಗಳನ್ನು ಬರೆದು ಪಾಸ್ ಮಾಡಿರುವ ಹೆಗ್ಗಳಿಕೆಯೂ ಇವರದ್ದು , ಜನರ ಜೊತೆ ಬೆರೆತು ಅವರ ಭಾವನೆಗಳಿಗೆ ಸ್ಪಂದಿಸಬೇಕಾದರೆ ಮಾತೃ ಭಾಷೆ ಬಹಳ ಮುಖ್ಯ ಎನ್ನುವುದು ಇವರ ಅಭಿಪ್ರಾಯ .

 

ಉದ್ಯೋಗ ಸೃಷ್ಟಿಗಾಗಿ ಹೊಸ ಕೈಗಾರಿಕೆಗಳು ಬರಬೇಕು ,ಹೊಸ ಆಲೋಚನೆ ಹೊಸದೊಂದು ಮೈಲಿಗಲ್ಲಾಗಿ ಪರಿವರ್ತನೆಗೊಳ್ಳುತ್ತದೆ

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕೆ ವಲಯದಲ್ಲಿ ಕೆಲಸ ಮಾಡಿದ್ದಾರೆ ಹಾಗಾಗಿ ಕೈಗಾರಿಕಾ ಅಭಿವೃದ್ಧಿಯ ಪ್ರತಿ ಮಜಲುಗಳನ್ನು ಬಹಳ ಹತ್ತಿರದಿಂದ ನೋಡಿದ್ದಾರೆ ಅಷ್ಟೇ ಅಲ್ಲದೆ ದೂರದೃಷ್ಟಿತ್ವ ಬಹಳ ಮುಖ್ಯವಾಗಿ ಬೇಕಾಗುತ್ತದೆ ಏಕೆಂದರೆ ದೇಶಿಯ ಜಿಡಿಪಿ ಅಥವಾ ವಾರ್ಷಿಕ ತಲಾದಾಯಕ್ಕೆ ಕೈಗಾರಿಕೆಗಳ ಕೊಡುಗೆ ಬಹಳ ಮಹತ್ವದ್ದಾಗಿದೆ.

 

 

ಹೊಸ ಸಣ್ಣಕೈಗಾರಿಕೆಗಳು ಬರಬೇಕು ,ಹೊಸ ಆಲೋಚನೆ ಹೊಸದೊಂದು ಮೈಲಿಗಲ್ಲಾಗಿ ಪರಿವರ್ತನೆಗೊಳ್ಳುತ್ತದೆ ಅಲ್ಲದೆ ಉದ್ಯೋಗ ಸೃಷ್ಟಿಸುತ್ತದೆ ಬಂಡವಾಳ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಬಾರದು ಹಾಗಾಗಿ ಹೆಚ್ಚು ‘ಸ್ಟಾರ್ಟ್ ಅಪ್ ‘ ಸಂಸ್ಥೆಗಳು ಬರಬೇಕು , ರಾಜ್ಯದಲ್ಲಿ ಕೈಗಾರಿಕಾ ಪ್ರಚಾರದ ಜವಾಬ್ದಾರಿಯನ್ನು ಹೊತ್ತಿದ್ದರು , 2014-15 ರ ಹೊಸ ಕೈಗಾರಿಕಾ ನೀತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ,
“ಇನ್ವೆಸ್ಟ್ಮೆಂಟ್ ಕರ್ನಾಟಕ -2016 ” ಈ ಹೂಡಿಕೆ ಕಾರ್ಯಕ್ರಮವನ್ನು ಆಯೋಜಿಸುವ ಬಹುಮುಖ್ಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು .
ಎಲ್ಲಾ ಬಾಕಿ ಉಳಿದಿರುವ ಕೇಸುಗಳನ್ನು ಪರಿಹರಿಸಿದರು ಕೈಗಾರಿಕೋದ್ಯಮಿಗಳ ಕುಂದುಕೊರತೆಗಳಿಗೆ ಪರಿಹಾರ ಕಂಡುಹಿಡಿಯಲು ಅನೇಕ ಸಭೆಗಳನ್ನು ಕಾರ್ಯ ರೂಪಕ್ಕೆ ತರಲಾಯಿತು ಇದರಿಂದ ಮೂರು ಲಕ್ಷ ಕೋಟಿ ಹೂಡಿಕೆ ಪ್ರಸ್ತಾಪಗಳು ರಾಜ್ಯಕ್ಕೆ ಹರಿದುಬಂದು ಬಂಡವಾಳ ಹೂಡಿಕೆಯಲ್ಲಿ 8 ನೇ ಸ್ಥಾನದಲ್ಲಿದ್ದ ಕರ್ನಾಟಕ ರಾಜ್ಯ 1 ನೇ ಸ್ಥಾನಕ್ಕೆ ಜಿಗಿಯಿತು .

ಫಾರ್ಮಾ , ಏರೋಸ್ಪೇಸ್ ನೀತಿಗಳನ್ನು ಪರಿಷ್ಕರಿಸಿದರು ಅಲ್ಲದೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಸೆಳೆದರು .
‘ಥಿಂಕ್ ಬಿಗ್ ಸಮ್ಮಿಟ್-2016’ ಸಂಘಟಕ ಕಾರ್ಯನಿರತ ಗುಂಪಿನ ಅಧ್ಯಕ್ಷತೆ ವಹಿಸಿದ್ದರು , ಏಷ್ಯಾದ ಅತಿದೊಡ್ಡ ಮಹಿಳಾ ಉದ್ಯಮಶೀಲತೆ (Asia’s largest women entrepreneurship ) ಮತ್ತು ಆರ್ಥಿಕ ಸಬಲೀಕರಣ ವೇದಿಕೆ(economic empowerment platform ), 14-15 ನವೆಂಬರ್, 2016., ಮಹಿಳಾ ಉದ್ಯಮಶೀಲತೆಗಾಗಿ ಕರ್ನಾಟಕ ಸರ್ಕಾರವು ಹೆಚ್ಚು ಬೆಂಬಲ ನೀಡಿದ ಸರ್ಕಾರ “Most supportive Government” for women entrepreneurship ಎಂಬ ಪ್ರಶಸ್ತಿಗೂ ಭಾಜನವಾಯಿತು .

 

 

ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲುಉಬಂಟು(Ubantu)’ ಎನ್ನುವ ವಾಟ್ಸ್ ಆಪ್ ಗ್ರೂಪ್

ಮಹಿಳಾ ಪ್ರಾಬಲ್ಯವನ್ನು ಪುರುಷ ಪ್ರಾಬಲ್ಯದ ಸಮಾಜದಲ್ಲಿ ದುರ್ಬಲರೆಂದು ನೋಡಲಾಗುತ್ತದೆ, ಮಹಿಳೆಯರು ಎಲ್ಲ ಅಂಶಗಳಲ್ಲಿ ಪುರುಷರ ಸಮಾನರಾಗಿದ್ದಾರೆ. ಹಾಗಾಗಿ ಮಹಿಳೆಯರಿಗೆ ಅಧಿಕಾರ ನೀಡುವ ಅವಶ್ಯಕತೆಯಿದೆ ಎಂದು ಕಂಡುಕೊಂಡರು. ಉಬುಂಟು ಎಂಬ ಮಹಿಳಾ ಉದ್ಯಮಿಗಳ ಗುಂಪನ್ನು ರಚಿಸಿ ಅಲ್ಲಿ ಪ್ರತಿದಿನ ಸಂಪರ್ಕದಲ್ಲಿರುತ್ತಾರೆ ಎಲ್ಲರ ಸಹಯೋಗವನ್ನು ಒಟ್ಟಿಗೆ ತಂದು ಪ್ರಗತಿಯತ್ತ ಮುನ್ನಡೆಯಬೇಕು ಎಂಬುದು ಇದರ ಉದ್ದೇಶ .

ಅಷ್ಟೇ ಅಲ್ಲದೆ ‘She for her ‘ ಎಂಬುದು ಇನ್ನೊಂದು ವಿನೂತನ ಪ್ರಯತ್ನ ಒಬ್ಬ ಮಹಿಳೆ ಮತ್ತೊಂದು ಮಹಿಳೆಯ ಬೆಂಬಲದಿಂದ ಎತ್ತರಕ್ಕೆ ಏರಿದ ಮಹಿಳೆಯರ ಯಶಸ್ಸಿನ ಕಥೆಗಳನ್ನು
ನಾವು ದಾಖಲಿಸಲು ಪ್ರಯತ್ನಿಸುತ್ತೇವೆ ಇದರಿಂದ ಮಹಿಳೆಯರನ್ನು ಧನಾತ್ಮಕವಾಗಿ ಪ್ರೇರೇಪಿಸಲು ಸಹಾಯವಾಗುತ್ತದೆ ಆಕೆ ಅದ್ಭುತಗಳನ್ನು ಮಾಡಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Geetha Shivaram says:

Rathna prabha madam is a keen inspiration to all women . All d best madam want to see u as our honarable chief secretary govt of Karnataka.

To Top