fbpx
ಭವಿಷ್ಯ

ನಾಳೆಯ ಪಂಚಾಂಗ ಮತ್ತೆ ಭವಿಷ್ಯ : 6 ಸೆಪ್ಟೆಂಬರ್

ಬುಧವಾರ, ೦೬ ಸೆಪ್ಟೆಂಬರ್ ೨೦೧೭
ಸೂರ್ಯೋದಯ : ೦೬:೧೨
ಸೂರ್ಯಾಸ್ತ : ೧೮:೨೩
ಅಮಂತ ತಿಂಗಳು : ಭಾದ್ರಪದ
ಪಕ್ಷ : ಶುಕ್ಲ ಪಕ್ಷ
ತಿಥಿ : ಹುಣ್ಣಿಮೆ – ೧೨:೩೨ ವರೆಗೆ
ನಕ್ಷತ್ರ : ಶತಭಿಷ – ೧೨:೫೭ ವರೆಗೆ
ಯೋಗ : ಧೃತಿ – ೨೪:೩೩+ ವರೆಗೆ

ಅಮೃತಕಾಲ : ೨೮:೫೭+ – ೩೦:೩೩+

ರಾಹು ಕಾಲ: ೧೨:೧೭ – ೧೩:೪೯
ಗುಳಿಕ ಕಾಲ: ೧೦:೪೬ – ೧೨:೧೭
ಯಮಗಂಡ: ೦೭:೪೩ – ೦೯:೧೪

ಮೇಷ (Mesha)


ಮಕ್ಕಳು ನಿಮ್ಮ ಸಹಾಯಕ್ಕೆ ಧಾವಿಸುವ ತವಕ ತೋರುತ್ತಾರೆ. ಅವರನ್ನು ಅಧೀರರನ್ನಾಗಿ ಮಾಡಬೇಡಿ. ಒಳಿತಿಗೆ ದಾರಿ.

ವೃಷಭ (Vrushabh)


ಆರೋಗ್ಯದ ಬಗೆಗೂ ಯೋಚಿಸುವ ವಿಚಾರ ಅಲಕ್ಷ್ಯ್ಕೆ ಒಳಗಾಗದಿರಲಿ. ಇದರಿಂದ ಹೆಚ್ಚಿನ ದಕ್ಷತೆಗೆ ದಾರಿ ಇದೆ.

ಮಿಥುನ (Mithuna)


ಹೊಸ ವಿಚಾರವೊಂದನ್ನು ರ್ಚಚಿಸಲು ಅವಸರ ಮಾಡದಿರಿ. ಕೈಯಲ್ಲಿರುವ ಕೆಲಸ ಮುಗಿಸಲೆತ್ನಿಸಿ. ಸಿದ್ಧಿ ಇದೆ.

ಕರ್ಕ (Karka)


ಖರ್ಚುವೆಚ್ಚಗಳನ್ನು ನಿಭಾಯಿಸುವುದು ಕಷ್ಟದ ವಿಷಯವೇ ಆಗಿರುತ್ತದೆ. ಕೆಲವು ವಿಚಾರಗಳಿಗೆ ಕತ್ತರಿ ಇಡಿ.

ಸಿಂಹ (Simha)


ಬಹಳ ದಿನಗಳಿಂದಲೂ ಉದ್ಭವಿಸುತ್ತಿರುವ ಸಂಕಟಗಳನ್ನು ಆಲಿಸಲು ಹಿರಿಯ ವ್ಯಕ್ತಿಗಳೊಬ್ಬರು ಸಿಗಲಿದ್ದಾರೆ.

ಕನ್ಯಾರಾಶಿ (Kanya)


ದೂರದ ಪ್ರವಾಸಗಳನ್ನು ಮಾಡುವುದು ಸೂಕ್ತವಾಗಿದೆಯಾದರೂ ಆರೋಗ್ಯದ ಬಗೆಗೆ ಎಚ್ಚರ ಇದ್ದೇ ಇರಲಿ.

ತುಲಾ (Tula)


ನಿಮ್ಮ ಕೆಲಸದ ಸ್ಥಳದಲ್ಲಿ ಅನಪೇಕ್ಷಿತವಾದ ಕಲಹವೊಂದು ಉದ್ಭವಿಸಬಹುದಾಗಿದೆ. ಆದಷ್ಟು ಜಾಗ್ರತರಾಗಿರಿ.

ವೃಶ್ಚಿಕ (Vrushchika)


ಬಹಳ ದಿನಗಳಿಂದಲೂ ಕಾಲು ಕೆದರಿ ಜಗಳ ಮಾಡುವ ಯೋಚನೆ ಹಾಕಿರುವ ಜನರನ್ನು ಮೌನದಿಂದ ಸಾಗಹಾಕಿ.

ಧನು ರಾಶಿ (Dhanu)


ಅಜ್ಞಾನವನ್ನು ನೀಗಿಸುವ ಕ್ರಿಯಾಶೀಲತೆಯು ನಿಮ್ಮ ಬೆಳವಣಿಗೆಗೆ ಸಾರ್ಥಕ ಕಾಣಿಕೆಯೊಂದನ್ನು ಇಂದು ಒದಗಿಸಿ ಕೊಡಲಿದೆ.

ಮಕರ (Makara)


ಮಾತುಗಳು ನಿಮ್ಮ ಜೀವಂತಿಕೆಯೇ ಆಗಿವೆ. ಆದರೂ ಕೃತಘ್ನರಾದವರು ಮಾತಿನಿಂದ ನಿಮಗೆ ಪೇಚು ತಂದಾರು.

ಕುಂಭರಾಶಿ (Kumbha)


ಹೊಸ ರೀತಿಯ ಬದಲಾವಣೆಗಳಿಗಾಗಿ ಈಗ ಯೋಚಿಸಬಹುದಾಗಿದೆ. ನಿಮ್ಮ ಚಾತುರ್ಯಕ್ಕೆ ಗೆಲುವು ಲಭ್ಯ.

ಮೀನರಾಶಿ (Meena)


ವಸತಿಯ ಸ್ಥಳದ ಬದಲಾವಣೆಗಾಗಿ ಬೆಳವಣಿಗೆಯೊಂದು ತೀರ ಅನಿರೀಕ್ಷಿತವಾಗಿ ಎದುರಾಗಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top