fbpx
ವಿಶೇಷ

ಗೌರಿ ಲಂಕೇಶ್‌ ಬಗೆಗಿನ ಈ 8 ಶಾಕಿಂಗ್ ವಿಷಯಗಳನ್ನು ನೀವು ತಿಳ್ಕೊಳ್ಳೇಬೇಕು.

ಗೌರಿ ಲಂಕೇಶ್‌ ಬಗೆಗಿನ ಈ 8 ಶಾಕಿಂಗ್ ವಿಷಯಗಳನ್ನು ನೀವು ತಿಳ್ಕೊಳ್ಳೇಬೇಕು.

ಹಿರಿಯ ಪತ್ರಕರ್ತೆ, ಎಡಪಂಥೀಯ ವಿಚಾರಗಳ ನಾಯಕಿ ಗೌರಿ ಲಂಕೇಶ್‌ ರ ಬಗ್ಗೆ ನೀವು ತಿಳ್ಕೋಲೇಬೇಕಾದ ಕೆಲವು ಸಂಗತಿಗಳನ್ನ ನಾವು ನಿಮಗೆ ತಿಳಿಸಿಕೊಡ್ತೀವಿ ಬನ್ನಿ.

 

 

1. ಗೌರಿ ಲಂಕೇಶ್ ಅವರು “ಲಂಕೇಶ್ ಪತ್ರಿಕೆ” ಎಂಬ ವಾರ ಪತ್ರಿಕೆಯ ಮೂಲಕ ಕರ್ನಾಟಕ ಮಾಧ್ಯಮದಲ್ಲಿ ಒಂದು ಕ್ರಾಂತಿಯನ್ನು ಸೃಷ್ಟಿಸಿದ್ದ ಖ್ಯಾತ ಲೇಖಕ, ಪತ್ರಕರ್ತ ಪಿ.ಲಂಕೇಶ್‌ ಅವರ ಮಗಳಾಗಿದ್ದಾರೆ.

 

 

2. ಗೌರಿ ಆರಂಭದಲ್ಲಿ ಇಂಗ್ಲಿಷ್ ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2000ನೇ ಇಸವಿಯಲ್ಲಿ ಪಿ.ಲಂಕೇಶ್‌ ನಿಧನರಾದ ನಂತರ ತನ್ನ ಸಹೋದರ ಇಂದ್ರಜಿತ್‌ ಲಂಕೇಶ್‌ ಜತೆಗಿನ ಭಿನ್ನಾಭಿಪ್ರಾಯದಿಂದ ಅವರು ‘ಗೌರಿ ಲಂಕೇಶ್‌ ಪತ್ರಿಕೆ’ ಎಂಬ ಬೇರೆ ಹೆಸರಿನಲ್ಲಿ ಪ್ರತ್ಯೇಕವಾದ ವಾರಪತ್ರಿಕೆಯೊಂದನ್ನ ಸ್ಥಾಪಿಸಿ ಸುಮಾರು 20 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.

 

 

3. ಶೋಷಿತರ ಪರ ದನಿಯಾಗಿದ್ದ ಗೌರಿ ಲಂಕೇಶ್ ಅವರು ದೀನ ದಲಿತರ, ರೈತ ಹಾಗೂ ಮಹಿಳಾ ಪರ ಹೋರಾಟಗಳಲ್ಲೂ ತಮ್ಮನ್ನು ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಪ್ರಗತಿಪರ ಚಿಂತಕಿಯಾಗಿದ್ದರು. ಜಾತ್ಯತೀತ ವಾದದ ಪರವಾಗಿ ವಾದಿಸುತ್ತಿದ್ದರು. ದಲಿತ ಮತ್ತು ಶೋಷಿತ ಜನಸಮುದಾಯದ ಪರ ಗೌರಿ ಲಂಕೇಶ್‌ಅವರು ಅನೇಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು.

 

 

4. ನಕ್ಸಲೀಯರನ್ನು ಸಮಾಜಕ್ಕೆ ವಾಪಸ್ಸು ಕರೆದು ತರುವಲ್ಲಿ ನಿರಂತರ ಪ್ರಯತ್ನ ನಡೆಸುತ್ತಿದ್ದ ಗೌರಿ ಲಂಕೇಶ್ ಈಗಿನ ರಾಜ್ಯ ಸರಕಾರದ ಅವಧಿಯಲ್ಲಿ ಕೆಲವು ನಕ್ಸಲರ ಶರಣಾಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

5. .ಕೋಮುವಾದಿ ಶಕ್ತಿಗಳ ಯಾವಾಗಲು ಕಿಡಿಕಾರುತ್ತಿದ್ದ ಗೌರಿ ಲಂಕೇಶ್ ಅವರು ಕೋಮುವಾದದ ವಿರುದ್ಧದ ಹೋರಾಟದಲ್ಲಿ ಸಕ್ರಿಯರಾಗಿ ಗುರುತಿಸಿಕೊಳ್ಳುತ್ತಿದ್ದರು ಮತ್ತು ಕೋಮುಸೌಹಾರ್ದ ವೇದಿಕೆ ಸದಸ್ಯರಾಗಿ ನಾಡಿನ ಉದ್ದಗಲಕ್ಕೂ ಹಲವು ಹೋರಾಟ, ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಕೊಂಡಿದ್ದರು.

6. ‘ಗಾಂಧೀಜಿಯವರ ಜಾತ್ಯತೀತದ ತತ್ವ, ಬಸವಣ್ಣನವರ ಎಲ್ಲರೂ ಸಮಾನರೂ ಎಂಬ ಆಶಯ ಹಾಗೂ ಅಂಬೇಡ್ಕರ್‌ ಅವರ ಸಮಾನತೆಯಾ ವಾದವೇ ಲಂಕೇಶ್‌ ಪತ್ರಿಕೆಯ ಮೂಲಪರಿಕಲ್ಪನೆ ಎಂದು ಗೌರಿ ಲಂಕೇಶ್ ಪ್ರತಿಪಾದಿಸುತ್ತಿದ್ದರು.

7.ಗೌರಿ ಅವರು ಖ್ಯಾತ ಪತ್ರಕರ್ತ ಚಿದಾನಂದ ರಾಜ್ ಘಟ್ಟ ಎಂಬುವವರನ್ನು ಮದುವೆಯಾಗಿದ್ದರು.ಕೆಲವೇ ಸಮಯದ ನಂತರ ಅವರಿಬ್ಬರೂ ಡೈವೋರ್ಸ್ ಪಡೆದುಕೊಂಡಿದ್ದರು. ಚಿದಾನಂದ್ ರಾಜ್ಘಾಟ್ಟ ಅವರು ಭಾರತೀಯ ಅಭಿಪ್ರಾಯದ ಅಂಕಣಕಾರರಾಗಿದ್ದು, ಪ್ರಸ್ತುತ ಅವರು ಅಮೆರಿಕಾದ ವಾಷಿಂಗ್ಟನ್ ಡಿ.ಸಿ.ಯಲ್ಲಿ ವಾಸವಾಗಿದ್ದಾರೆ.

8 . ಗೌರಿಯವರಿಗೆ ಕವಿತಾ ಲಂಕೇಶ್ ಹಾಗು ಇಂದ್ರಜಿತ್ ಲಂಕೇಶ್ ಸಹೋದರಿ ಹಾಗು ಸಹೋದರರಾಗಿದ್ದಾರೆ. ಪ್ರಖ್ಯಾತ ಚಲನಚಿತ್ರ ಕಲಾವಿದ ಪ್ರಕಾಶ್ ಬೆಲವಾಡಿ ಯವರು ಗೌರಿಯವರ ಬಾಲ್ಯದ ಸ್ನೇಹಿತರಾಗಿದ್ದು ಸುಮಾರು 35 ವರ್ಷಗಳಿಂದ ಪರಸ್ಪರ ತಿಳಿದವರಾಗಿದ್ದರು.

ಹಿರಿಯ ಪತ್ರಕರ್ತೆ, ಎಡಪಂಥೀಯ ವಿಚಾರಗಳ ನಾಯಕಿ ಹಾಗೂ ಸಾಹಿತಿ 55 ವರ್ಷದ ಗೌರಿ ಲಂಕೇಶ್‌ ಅವರನ್ನು ಅವರ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ 5 -9 -2017 ರಂದು ನಡೆದು ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top