fbpx
ದೇವರು

ನಿಮ್ಮ ಜಾತಕದಲ್ಲಿ ಸಾಡೇ ಸಾತಿ ಶನಿಯ ಕ್ರೂರ ದೃಷ್ಟಿ ಇದ್ದರೆ ಕೆಲವು ಪರಿಹಾರಗಳನ್ನು ಅನುಸರಿಸಿದರೆ ಶನಿ ದೋಷ ದೂರವಾಗುವುದು.

ನಿಮ್ಮ ಜಾತಕದಲ್ಲಿ ಸಾಡೇ ಸಾತಿ ಶನಿಯ ಕ್ರೂರ ದೃಷ್ಟಿ ಇದ್ದರೆ ಕೆಲವು ಪರಿಹಾರಗಳನ್ನು ಅನುಸರಿಸಿದರೆ ಶನಿ ದೋಷ ದೂರವಾಗುವುದು.

ಯಾರಾದರೂ ತಮ್ಮ  ಜೀವನದಲ್ಲಿ   ಕೆಲಸದಲ್ಲಿ,ಆರೋಗ್ಯದಲ್ಲಿ ತುಂಬಾ ತೊಂದರೆ ಅನುಭವಿಸುತ್ತಿದ್ದರೆ. ಆ ಕ್ಷಣದಲ್ಲಿ ನೀವು ಜ್ಯೋತಿಷಿಗಳನ್ನು ಸಂಪರ್ಕಿಸಿದರೆ ಅವರಿಂದ ಬರುವ ಸಾಮಾನ್ಯ ಉತ್ತರ ಸಾಡೇಸಾತಿ,ಪಂಚಮ ಶನಿ,ಅಷ್ಟಮ ಶನಿ ಜಾತಕದಲ್ಲಿ ಈಗ ನೆಡೆಯುತ್ತಿದೆ  ಎಂದು ಹೇಳುವರು.ಅದರೇ ಎಷ್ಟೋ ಜನಗಳಿಗೆ ಸಾಡೇ ಸಾತಿ ಎಂದರೇನು ಎನ್ನುವುದು ಯಾರಿಗೂ ಅಷ್ಟಾಗಿ ತಿಳಿದಿಲ್ಲ.ಬನ್ನಿ ಅದರ ಬಗ್ಗೆ ತಿಳಿಯೋಣ…

 

 

ಯಾವುದೇ ರಾಶಿಗೆ ಶನಿ ಗ್ರಹ ತಮ್ಮ  ರಾಶಿಯಿಂದ 12 ನೇ ಮನೆಯಲ್ಲಿ  ಮತ್ತು ಅದೇ ರಾಶಿಯಲ್ಲಿ  ಮತ್ತು  ರಾಶಿಯಿಂದ 2ನೇ ಮನೆಯಲ್ಲಿ  ಶನಿ ಸಂಚರಿಸುತ್ತಾ ಇರುತ್ತಾನೆ.ಪ್ರತಿಯೊಂದು ರಾಶಿಯಲ್ಲೂ ಎರಡು ವರ್ಷ ಆರು ತಿಂಗಳು ತನ್ನ ಅವಧಿಯನ್ನು ಶನಿ ಪೂರ್ಣಗೊಳಿಸುತ್ತಾನೆ.ಒಟ್ಟು ಮೂರು ರಾಶಿಗಳಿಗೆ ಈ ಮೇಲೆ ಹೇಳಿರುವ ಸ್ಥಾನಗಳಿಗೆ ಬಂದರೆ ಮಾತ್ರ ಸಾಡೇ ಸಾತಿ ಅಥವಾ ಶನಿ ಕಾಟ ಎನ್ನುತ್ತಾರೆ.

ಒಬ್ಬ ಮನುಷ್ಯನು ಈ ಭೂಮಿಯ ಮೇಲೆ  ತಾನು  ಜೀವನ ನೆಡೆಸುವ ಸಮಯದಲ್ಲಿ ಶನಿ ಕಾಟ ಏಳೂವರೆ ವರ್ಷಗಳ ಕಾಲ ಇರುವುದು.ಶನಿ ಗ್ರಹ  ಸಾಮಾನ್ಯವಾಗಿ  ಮೂರರಿಂದ  ರಿಂದ ನಾಲ್ಕು ಬಾರಿ  ಒಂದು ರಾಶಿಗೆ ಬಂದು ಹೋಗುವುದು.

ಮೊದಲ ಎರಡು ಬಾರಿ ಜೀವನವನ್ನು  ಅನೇಕ ಬಾರಿ ಕಷ್ಟ ,ನೋವು,ಸೋಲು ,ದುಃಖ,  ಸಂಕಟ ನಾನಾ ರೀತಿಯ ಹಿಂಸೆಗಳಿಂದ ಶನಿ ಕಷ್ಟ ಕೊಡುತ್ತಾನೆ.

ಮೂರನೆಯ ಬಾರಿ ಭಯಂಕರವಾಗಿ ತೊಂದರೆ ಮತ್ತು ಅನೇಕ ರೀತಿಯ ಕಷ್ಟಗಳನ್ನು ಒಟ್ಟೊಟ್ಟಿಗೆ ತಂದೊಡ್ಡುತ್ತಾನೆ.

ಒಂದು ವೇಳೆ ನಾಲ್ಕನೇ ಬಾರಿ ಪ್ರವೇಶಿಸಿದರೆ  ಈ ಭೂಮಿಯ ಮೇಲೆ ಬದುಕಿದ್ದು ವ್ಯರ್ಥ ಎನ್ನುವಂತೆ ಜೀವನವನ್ನು ಹಾಳು ಮಾಡಿ ಅತ್ಯಂತ ಕೆಟ್ಟ ದುಃಸ್ಥಿತಿಯ ಸ್ಥಿತಿಗೆ ಶನಿ ಗ್ರಹ ಪೀಡಿತರನ್ನು    ಘೋರ ಕಷ್ಟಗಳಿಂದ ಹಿಂಸೆಕೊಟ್ಟು  ಅನುಭವಿಸುತ್ತಾರೆ.

 

 

ಆದರೆ ಕೊನೆಯಲ್ಲಿ ಕೊನೆಯ ಬಾರಿ ತಮ್ಮ ರಾಶಿಗೆ  ಶನಿ ಬಂದು ಮತ್ತೆ ಹೋಗುವಾಗ ರಾಜಯೋಗವನ್ನು  ತಂದು ಕೊಡುತ್ತಾನೆ.

ಆದರೆ ಸಾಡೇ ಸಾತಿ ಎಲ್ಲ ರಾಶಿಯನ್ನು ಕಾಡುವುದಿಲ್ಲ.ಸಾಡೇ ಎಂದರೆ 7 ಸಾತಿ ಎಂದರೆ ಅರ್ಧ ವರ್ಷಗಳ ಶನಿ ಕಾಟ.ಕೆಲವರಿಗೆ ಪಂಚಮ ಶನಿ ,ಇನ್ನೂ ಕೆಲವರಿಗೆ ಅಷ್ಟಮ ಶನಿ ಹೀಗೆ ವಿವಿಧ ರೀತಿಯ ಶನಿ ಕಾಟ ಇರುವುದು.

ಸಾಡೇ ಸಾತಿಗೆ ಪರಿಹಾರಗಳು.

ಪ್ರತಿ ಶನಿವಾರ ಆಂಜನೇಯನ ಸ್ವರೂಪವೇ ಆಗಿರುವ ಕೋತಿಗಳಿಗೆ ತಿನ್ನಲು ಆಹಾರ ,ಹಣ್ಣುಗಳನ್ನು ಅದರಲ್ಲೂ ವಿಶೇಷವಾಗಿ ಬಾಳೆಹಣ್ಣು ಕೊಟ್ಟರೆ  ಒಳ್ಳೆಯದು.ನಿಮ್ಮ ಕಷ್ಟಗಳು ತಕ್ಕ ಮಟ್ಟಿಗೆ ಕಡಿಮೆ ಯಾಗಬಹುದು.

 

 

ನಾಯಿಗಳಿಗೆ ಸಿಹಿ ಪದಾರ್ಥವನ್ನು  ತಿನ್ನಲು ಆಹಾರವನ್ನಾಗಿ ನೀಡಬೇಕು.

 

 

ತಾರೆ  ಮರದ ಕೆಳಗೆ ಎಳ್ಳೆಣ್ಣೆ ದೀಪವನ್ನು ಪ್ರತಿ ಶನಿವಾರ ಬೆಳಗಿಸಬೇಕು,ಭಕ್ತಿಯಿಂದ ಪೂಜೆಯನ್ನು ಮಾಡಿ ಪ್ರದಕ್ಷಿಣೆ ಹಾಕಿ ಶನಿ ಮಂತ್ರವನ್ನು ಜಪಿಸಬೇಕು.

 

 

ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಮೂರು ಕರಿ ಎಳ್ಳನ್ನು ತುಂಬಿ ಮಾಡಿದ ಎಳ್ಳು ಬತ್ತಿಯನ್ನು  ಹಚ್ಚಬೇಕು.

 

 

ಸಾಡೇಸಾತಿ ಶುರುವಾದಾಗ ಯಾವುದಾದರೂ ಒಂದು ಅಮಾವಾಸ್ಯೆಯ ದಿನದಂದು ಕರಿ ಎಳ್ಳು ಬತ್ತಿ,ಕಪ್ಪು ಬಣ್ಣದ ಬಟ್ಟೆ,ಕಬ್ಬಿಣದ ಬಾಂಡ್ಲಿ,ಎಳ್ಳೆಣ್ಣೆ,ಬಾಳೆಹಣ್ಣುಗಳನ್ನು ದಾನವಾಗಿ  ಬಡವರಿಗೆ ನೀಡಬೇಕು.

 

 

ಆಂಜನೇಯ ಹಾಗೂ ಶನಿ ದೇವರ ಸ್ತೋತ್ರಗಳನ್ನು ಹೇಳಿಕೊಳ್ಳುವುದರಿಂದ ಹಾಗೂ ಹನುಮಾನ ಚಾಲೀಸವನ್ನು  ಓದುವುದರಿಂದ ಸಹ ಶನಿಯ ಶಿಕ್ಷೆಯ ಪರಿಣಾಮ  ಕಡಿಮೆಯಾಗಬಹುದು.

 

ಶನಿ ಮಂತ್ರ.

“ಓಂ ನೀಲಾಂಜನಂ ಸಮಾಭಾಸಂ , ರವಿ  ಪುತ್ರಂ  ಯಮಾಗ್ರಜಂ ಛಾಯಾಮಾರ್ತಂಡ  ಸಂಭೂತಂ  ತಂ  ನಮಾಮಿ ಶನೈಶ್ಚರಂ”ಇದನ್ನು ಪ್ರತಿ ಶನಿವಾರ 11,48,108 ಹೀಗೆ ನಿಮಗೆ ಅನುಕೂಲವಾಗುವಂತೆ ಜಪಿಸಿದರೆ ಶನಿಯು ಪ್ರಸನ್ನಗೊಳ್ಳುತ್ತಾನೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top