ಜಾಗೃತಿ

ಪೊಲೀಸ್ ಸ್ಟೇಷನ್ ನಲ್ಲೇ ಬಡ ಸ್ಲಮ್ ಮಕ್ಕಳಿಗೆ ಸ್ವತಃ ತಾವೇ ಶಿಕ್ಷಣ ನೀಡುತ್ತಿರುವ ಮಾದರಿ ಪೊಲೀಸರು..!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಪೊಲೀಸ್ ಸ್ಟೇಷನ್ ನಲ್ಲೆ ಬಡ ಸ್ಲಮ್ ಮಕ್ಕಳಿಗೆ ಸ್ವತಃ ತಾವೇ ಶಿಕ್ಷಣ ನೀಡುತ್ತಿರುವ ಮಾದರಿ ಪೊಲೀಸರು..!

 

 

ಪ್ರತಿ ದಿನ ಬೆಳಿಗ್ಗೆ ಸ್ಲಾಮ್ ನಲ್ಲಿನ ಮನೆಗಳ ಮುಂದೆ ಬಂದು ನಿಲ್ಲುವ ಪೊಲೀಸ್ ವ್ಯಾನ್ ನಲ್ಲಿ ಈ ಪುಟಾಣಿಗಳನ್ನು ಠಾಣೆಗೆ ಕರೆದುಕೊಂಡು ಹೋಗುತ್ತಾರೆ. ಪೊಲೀಸ್ ಠಾಣೆಯಲ್ಲಿ ಪೊಲೀಸರೇ ಶಿಕ್ಷಕರಾಗಿ ಮಕ್ಕಳಿಗೆ ಪಾಠ ಮಾಡುತ್ತಾರೆ. ಅಪರಾಧ ಕೆಲಸಗಳಿಂದ ಕುಖ್ಯಾತವಾದ ಕೊಳಗೇರಿ ಖೈದಿಗಳ 4 ರಿಂದ 12 ವರ್ಷದೊಳನ ಮಕ್ಕಳು ಯಾವುದೇ ಸಮಾಜಘಾತುಕ ಚಟುವಟಿಕೆಗಳ ಕಡೆಗೆ ಆಕರ್ಷಿತರಾಗುವುದನ್ನು ತಡೆಯಲು ಈ ಹೊಸ ಪ್ರಯೋಗವನ್ನು ಮಧ್ಯಪ್ರದೇಶದ ಹನುಮಾನ್ ಗಂಜ್ ಪೊಲೀಸ್ ಸ್ಟೇಷನ್ ಆರಂಭಿಸಲಾಗಿದೆ.

 

 

ಈ ಶಾಲೆಗೆ ‘ಬಾಲ ಸಂಜೀವಿನಿ ಪರಾಮರ್ಶ ಕೇಂದ್ರ’ ಎಂದು ಹೆಸರಿಸಲಾಗಿದ್ದು, ಪೊಲೀಸ್ ಇಲಾಖೆಯ ವಿದ್ಯಾವಂತ ಸಿಬ್ಬಂದಿ ವರ್ಗದವರೇ ಆ ಕೊಳಗೇರಿ ಮಕ್ಕಳಿಗೆ ಪಾಠ ಪ್ರವಚನಗಳನ್ನು ಮಾಡುತ್ತಾರೆ. ಈ ಶಾಲೆಗೆ ಅವಶ್ಯವಾಗಿರುವ ಸಹಾಯವನ್ನು ಅದೇ ಪೊಲೀಸ್ ಠಾಣೆ ಮತ್ತು ಪೊಲೀಸ್ ಇಲಾಖೆ ಮಾಡುತ್ತಿದೆ.

 

 

” ಪೊಲೀಸ್ ಸ್ಟೇಷನ್ ನಲ್ಲಿ ಕೊಳಗೇರಿ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ದೇಶದ ಮುಂದಿನ ಪ್ರಜೆಗಳು ಯಾವುದೇ ಸಮಾಜಘಾತುಕತನಕ್ಕೆ ಒಳಗಾಗದೆ ಅಪರಾಧ ಜಗತ್ತಿಗೆ ಪ್ರವೇಶಿಸದಂತೆ ಮಾಡಲು ಅವಶ್ಯಕವಾಗಿರುವ ಶಿಕ್ಷಣವನ್ನು ಕೊಳಗೇರಿಗಳ ಮಕ್ಕಳಿಗೆ ನೀಡಲಾಗುತ್ತದೆ. ಅವರ ಜೀವನದಲ್ಲಿ ಅವರಿಗಿರುವ ಉತ್ತಮ ಅವಕಾಶಗಳನ್ನು ಅವರಿಗೆ ಪರಿಚಯಿಸುವುದೇ ಇದರ ಮೂಲ ಉದ್ದೇಶವಾಗಿದೆ. ಈ ಪುಟಾಣಿ ಮಕ್ಕಳ ಕನಸು ನನಸಾಗಿಸಿಕೊಳ್ಳಲು ಇದು ವೇದಿಕೆಯಾಗಲಿದೆ” ಎಂದು ಹಿರಿಯ ಪೊಲೀಸ್ ಅಧೀಕ್ಷಕ ರಮಣ್ ಸಿಂಗ್ ಸಿಕಾರ್‌ವರ್ ಹೇಳುತ್ತಾರೆ.

 

 

“ನಮ್ಮ ಪೊಲೀಸ್ ಶಿಕ್ಷಕರು ನಮಗೆ ಚನ್ನಾಗಿ ಪಾಠವನ್ನು ಹೇಳಿಕೊಡುತ್ತಿದ್ದಾರೆ. ನಾವು ಮೊದಲು ಪೊಲೀಸ್ ಎಂದರೆ ಹೆದರಿಕೊಳ್ಳುತ್ತಿದ್ದೋ ಆದರೆ ಇದೀಗ ಪೊಲೀಸರು ಎಂದರೆ ಭಯವಾಗೋದಿಲ್ಲಾ ” ಎಂದು ಪೊಲೀಸರ ಬಗ್ಗೆ ಭಯಪಡುತ್ತಿದ್ದ ಆ ಶಾಲೆಯ ಮಕ್ಕಳು ಹೇಳುತ್ತಾರೆ.  “ಕೆಲ ಮಕ್ಕಳು ನಿಜಕ್ಕೂ ತುಂಬಾ ಪ್ರತಿಭಾವಂತರಾಗಿದ್ದಾರೆ. ಆದರೆ ಮನೆಯಲ್ಲಿರುವ ಅವರ ಕುಟುಂಬದ ಪರಿಸ್ಥಿಯಿಂದ ಕಲಿಕೆಗೆ ಉತ್ತಮ ವಾತಾವರಣ ಇರಲಿಲ್ಲ, ಇಷ್ಟು ವರ್ಷಗಳ ಕಾಲ ಅಪರಾಧಿಗಳನ್ನು ಹಿಡಿಯುವುದರಲ್ಲೇ ಕಾಲ ಕಳೆಯುತ್ತಿದ್ದ ನನಗೆ ಇದೀಗ ಪುಟ್ಟ ಮಕ್ಕಳಿಗೆ ಬೋಧಿಸುವ ಅವಕಾಶ ಸಿಕಿರುವುದು ನಿಜಕ್ಕೂ ಸಂತೋಷದ ವಿಷಯ” ಎಂದು ಹನುಮಾನ್ ಘನ್ಜ್ ನ ಪಿಎಸ್‌ಐ ಕಾಂಚನ್ ಸಿಂಗ್ ಹೇಳುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top