ಮಾಹಿತಿ

ಮರಣ ದಂಡನೆಯನ್ನು ನೀಡಿದ ನಂತರ ನ್ಯಾಯಾಧೀಶರು ತಮ್ಮ ಪೆನ್ ನ ಮೂತಿಯನ್ನು ಮುರಿಯುವದೇಕೆ ಗೊತ್ತಾ?

ಮರಣ ದಂಡನೆಯನ್ನು ನೀಡಿದ ನಂತರ ನ್ಯಾಯಾಧೀಶರು ತಮ್ಮ ಪೆನ್ ನ ಮೂತಿಯನ್ನು ಮುರಿಯುವದೇಕೆ ಗೊತ್ತಾ?

 

 

 

ಬ್ರಿಟಿಷರ ಕಾಲದಿಂದಲೂ, ಕೋರ್ಟ್ ನಲ್ಲಿ ಖೈದಿಗಳಿಗೆ ಮರಣದಂಡನೆ ಶಿಕ್ಷೆಯನ್ನು ಬರೆದ ನಂತರ ತಮ್ಮ ಪೆನ್ನಿನ ಮೂತಿಯನ್ನು ಮುರಿಯುವ ಸಂಪ್ರದಾಯವನ್ನು ಸಾಂಕೇತಿಕವಾಗಿ ಭಾರತೀಯ ನ್ಯಾಯಾಧೀಶರು ಅನುಸರಿಸಿಕೊಂಡು ಬಂದಿದ್ದಾರೆ. ಆದರೆ ಅವರು ಆ ರೀತಿ ಏಕೆ ಮಾಡುತ್ತಾರೆಂದು ನಿಮಗೆ ತಿಳಿದಿದೆಯೇ? ಈ ಪ್ರಶ್ನೆಯು ಜನರಿಗೆ ಗೊಂದಲವನ್ನುಂಟುಮಾಡಿದೆ.
 


 

ಒಬ್ಬ ವ್ಯಕ್ತಿಯ ಜೀವನವನ್ನು ಅಳಿಸಲು ಬಳಸಿದ ಪೆನ್ಅನ್ನು ಮತ್ತೆ ಎಂದಿಗೂ ಯಾವುದೇ ಕೆಲಸಗಳಿಗೂ ಬಳಸಬಾರದು ಎಂಬ ಸಾಕೇತಿಕವಾಗಿ ಹೀಗೆ ಮಾಡಲಾಗುತ್ತದೆ.ಮರಣ ದಂಡನೆಗೆ ಸಹಿ ಹಾಕಲು ಬಳಸುವ ಪೆನ್ಅನ್ನು ಅಪವಿತ್ರ ಎಂದು ಪರಿಗಣಿಸಿ ಅದರ ಮೂತಿಯನ್ನು ಮುರಿಯಲಾಗುತ್ತದೆ. ಎಂದು ಕೆಲವು ಲೇಖನಗಳು ಹೇಳುತ್ತವೆ. ಅಥವಾ ಸ್ವತಃ ತೀರ್ಪನ್ನು ಬರೆದವರೇ ಮನಸ್ಸು ಬದಲಿಸಿ ತೀರ್ಪನ್ನು ಬದಲಿಸಬಾರದು ಅಥವಾ ತಿದ್ದಬಾರದು

 

 

ನ್ಯಾಯಾಧೀಶರು ಒಮ್ಮೆ ನೀಡಿದ ಮರಣದಂಡನೆಯ ತೀರ್ಪನ್ನು ಅಂತಿಮ ಎಂದು ಪರಿಗಣಿಸಬೇಕು ಅದನ್ನು ಪುನಃ ತಿದ್ದುವುದಾಗಲೇ ಪ್ರಶ್ನಿಸುವುದಾಗಲಿ ಆಗಬಾರದೆಂಬ ಸಂಕೇತವಾಗಿ ಹೀಗೆ ಮಾಡಲಾಗುತ್ತದೆ ಎಂದು ಕೆಲವು ಸಿದ್ಧಾಂತಗಳು ಹೇಳುತ್ತವೆ.

 

 

ಒಬ್ಬ ವ್ಯಕ್ತಿಯ ಪ್ರಾಣತೆಗೆಯುವುದು ಸ್ವತಃ ನ್ಯಾಯಾಧೀಶರಿಗೂ ಇಷ್ಟ ಇರುವುದಿಲ್ಲ ಆದ್ರೆ ಕಾನೂನಿನ ಚೌಕಟ್ಟಿನೊಳಗೆ ತಮ್ಮ ಕರ್ತವ್ಯವನ್ನು ಮಾಡುವುದು ಅವರಿಗೆ ಅದು ಅನಿವಾರ್ಯವಾಗಿರುತ್ತದೆ. ತಾವು ಮರಣ ದಂಡನೆ ನೀಡಿದಕ್ಕೆ ದುಃಖವನ್ನು ವ್ಯಕ್ತ ಪಡಿಸುವ ಉದ್ದೇಶದಿಂದ ಪೆನ್ನಿನ ಮೂತಿಯನ್ನು ಮುರಿಯಲಾಗುತ್ತದೆ ಎಂದು ಕೆಲವರು ನಂಬುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top