fbpx
ದೇವರು

16 ನೇ ಸೆಪ್ಟೆಂಬರ್ ಪಿತೃಪಕ್ಷ ಮಾಸದಲ್ಲಿ ಬಂದಿರುವ ಶನಿ ಏಕಾದಶಿಯ ದಿನದ ವಿಶೇಷತೆ ಮತ್ತು ಉಪಾಯಗಳು.

16 ನೇ ಸೆಪ್ಟೆಂಬರ್ ಪಿತೃಪಕ್ಷ ಮಾಸದಲ್ಲಿ ಬಂದಿರುವ  ಶನಿ ಏಕಾದಶಿಯ ದಿನದ ವಿಶೇಷತೆ ಮತ್ತು  ಉಪಾಯಗಳು.

 

 

ಭಾದ್ರಪದ ಮಾಸದಲ್ಲಿ ಬಂದಿರುವ, ಪಿತೃ ಪಕ್ಷ ಮಾಸದ 16 ನೇ ಸೆಪ್ಟೆಂಬರ್  ಏಕಾದಶಿ ಅದರಲ್ಲೂ ಶನಿವಾರ ಬಂದಿರುವುದು ಬಹಳ  ವಿಶೇಷವಾಗಿದೆ. ಶನೈಶ್ಚರನ ದಿನವಾದ ಶನಿವಾರ ಏಕಾದಶಿ  ಬಂದಿರುವುದರಿಂದ ಇದನ್ನು ಶನಿ ಏಕಾದಶಿ ಎಂದು ಸಹ ಕರೆಯಲಾಗುತ್ತದೆ.ಶನಿವಾರ ಪಿತೃ ಪಕ್ಷದಲ್ಲಿ ಬಂದಿರುವುದರಿಂದ ಇದನ್ನು ಇಂದಿರಾ ಏಕಾದಶಿ ಎಂದು ಸಹ ಕರೆಯಲಾಗುತ್ತದೆ.ಆ ದಿನ ಕೆಲವು ನಿಯಮಗಳನ್ನು,ಉಪಾಯಗಳನ್ನು  ಪಾಲಿಸಿದರೆ  ಒಳ್ಳೆಯದು.ಬನ್ನಿ ಆ ಉಪಾಯಗಳು ಏನೇನು ಯಾಕಾಗಿ ?  ಮಾಡಬೇಕು ?  ಎಂದು ತಿಳಿಯೋಣ.

1.ಸಿಹಿ ಚಪಾತಿ ತಯಾರಿಸಿ ಹಸುವಿಗೆ ಆಹಾರವಾಗಿ ತಿನ್ನಲು ಕೊಡಿ.

 

 

ಚಪಾತಿಯಲ್ಲಿ ಒಂದು ಚಮತ್ಕಾರಿ ಉಪಾಯವನ್ನು ಮಾಡಬಹುದು. ಅದೇನೆಂದರೆ ಏಕಾದಶಿಯ ದಿನ ರಾತ್ರಿ ಮಲಗುವ ಮುನ್ನ ಒಂದು ಬಟ್ಟಲು ಗೋದಿ ಹಿಟ್ಟು ತೆಗೆದುಕೊಳ್ಳಬೇಕು ಅದನ್ನು ಒಂದು ತಟ್ಟೆಗೆ ಹಾಕಿ ಕೊಳ್ಳಬೇಕು.ನಂತರ ನಿಮ್ಮ ಒಂದು ಬೆರಳಿನಿಂದ ಅದರ ಮೇಲೆ ನಿಮ್ಮ ಹೆಸರು ಬರೆಯಬೇಕು.ನಂತರ ಮನೆಯಲ್ಲಿ ಯಾರಿಗೂ ಕಾಣದ ಹಾಗೆ ಯಾರ ದೃಷ್ಟಿಯೂ ಸಹ ಬೀಳದಂತಹ ಜಾಗದಲ್ಲಿ ಆ ತಟ್ಟೆಯನ್ನು ಇಟ್ಟು ಮಲಗಿ. ಬೆಳಗ್ಗೆ ಬೇಗನೆ ಎದ್ದು ನಿತ್ಯ ಕರ್ಮಗಳನ್ನು ಸ್ನಾನವನ್ನು  ಮುಗಿಸಿ ತಟ್ಟೆಯಲ್ಲಿ ಇಟ್ಟಿರುವ ಚಪಾತಿ ಹಿಟ್ಟನ್ನು ತೆಗೆದುಕೊಂಡು  ಸೀದಾ ಅಡುಗೆ ಮನೆಗೆ ಹೋಗಿ ಬೆಲ್ಲವನ್ನು ಪುಡಿ ಮಾಡಿಕೊಂಡು  ಚಪಾತಿ  ಹಿಟ್ಟಿಗೆ ಮಿಶ್ರಣ ಮಾಡಿ ನೀರು ಹಾಕಿ ಕಲೆಸಿ ನಂತರ  ಸಿಹಿಯಾದ ಚಪಾತಿ ಮಾಡಿ.ಹಾಗೆ ಮಾಡಿದ   ಸಿಹಿ ಚಪಾತಿಗಳನ್ನು ಹಸುವಿಗೆ ತಿನ್ನಲು ಆಹಾರವಾಗಿ ಕೊಟ್ಟು ಬನ್ನಿ.

 

 

ಹೀಗೆ ಮಾಡುವುದರಿಂದ ನಿಮಗೆ ಹಣದ ಅಭಾವ ಮತ್ತು ಕೊರತೆ ನಿಮ್ಮ ಮನೆಯಲ್ಲಿ ಎಂದಿಗೂ ಎದುರಾಗುವುದಿಲ್ಲ.ಹಣದ ಸುರಿಮಳೆಯೇ ಬಂದು ಮನೆಯಲ್ಲಿ ಬೀಳುವುದು. ಮಹಾಲಕ್ಷ್ಮೀಯ ಕೃಪೆ ನಿಮ್ಮ ಮೇಲೆ ಸದಾ ಕಾಲ ಇರುವುದು.ಮತ್ತು ಇನ್ನೊಂದು ಮುಖ್ಯವಾದ ವಿಷಯವೆಂದರೆ ಇದನ್ನು  ಯಾರಿಗೂ ಕಾಣದಂತೆ ಮಾಡಬೇಕು ಹಾಗೆ ಯಾರಿಗೂ ಸಹ ಹೇಳಬಾರದು ಕೂಡ.

2.ಸಾಸಿವೆ ಎಣ್ಣೆಯ ದೀಪವನ್ನು ಹಚ್ಚುವುದು.

 

 

ಏಕಾದಶಿಯು ಶನಿವಾರದ ದಿನ ಬಂದಿರುವುದರಿಂದ  ಶನೈಶ್ಚರ ದೇವನಿಗೆ ಪ್ರತ್ಯೇಕವಾಗಿ  ವಿಶೇಷ ಪೂಜೆ ಸಲ್ಲಿಸಿದರೆ ಒಳ್ಳೆಯದು.ಶನಿಯು ನ್ಯಾಯದ ದೇವತೆ.ಶನಿಯು ಕಷ್ಟವನ್ನು ಕೊಡುತ್ತಾನೆ ನಂತರ ಸುಖವನ್ನು ಕೊಡುತ್ತಾನೆ ಇಂತಹ ಶನಿಯನ್ನು ಪ್ರಸನ್ನಗೊಳಿಸಲು 16 ನೇ ಸೆಪ್ಟೆಂಬರ್ ಏಕಾದಶಿಯ ದಿನ ಬೆಳಗ್ಗೆ ಮತ್ತು ಸಂಜೆ ಸಾಸಿವೆ ಎಣ್ಣೆಯ ದೀಪವನ್ನು ಶನೈಶ್ಚರ ದೇವಸ್ಥಾನದಲ್ಲಿ ಹಚ್ಚಿ ಬನ್ನಿ .ಇದರ ಜೊತೆಗೆ ದೇವಸ್ಥಾನದ ಪಕ್ಕದಲ್ಲಿ ಅರಳಿ ಮರವಿದ್ದರೆ ಅರಳಿ ಮರಕ್ಕೆ ಶುದ್ಧ ಜಲವನ್ನು ಅರ್ಪಿಸಿ 7 ಸುತ್ತು ಪ್ರದಕ್ಷಿಣೆ ಹಾಕಿ ಬನ್ನಿ.ಹೀಗೆ ಕಪ್ಪು ವಸ್ತ್ರವನ್ನು ಶನಿವಾರದ ದಿನ ಧರಿಸಿ ಮಾಡಿದರೆ ಇನ್ನೂ ಒಳ್ಳೆಯದು .ಶನಿಯು ಪ್ರಸನ್ನನಾಗುತ್ತಾನೆ.ನಂತರ ಕರಿ ಬಣ್ಣದ ಹಸುವಿಗೆ ಚಪಾತಿ ತಿನ್ನಿಸಿ.ನಿಮ್ಮ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.

3.ಒಂದು ಬಟ್ಟಲು ಉಪ್ಪು.

ಒಂದು ಬಟ್ಟಲು ಶುದ್ಧ ಅಡಿಗೆ ಮಾಡಲು ಬಳಸುವ ಉಪ್ಪನ್ನು ತೆಗೆದುಕೊಳ್ಳಬೇಕು ಏಕಾದಶಿಯ ದಿನ ರಾತ್ರಿ ಆ ಒಂದು ಬಟ್ಟಲು ಉಪ್ಪನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಅಂದರೆ ಉತ್ತರ ಪೂರ್ವ ದಿಕ್ಕಿನಲ್ಲಿ ಇಡಬೇಕು.ನೆನಪಿಡಿ ಇದನ್ನು ನೆಲದ ಮೇಲೆ ಯಾವುದೇ ಕಾರಣಕ್ಕೂ ಇಡಬಾರದು ಒಂದು ಮೇಜು ಅಥವಾ ಖುರ್ಚಿಯನ್ನು ಇಟ್ಟು ಅದರ ಮೇಲೆ ಇಡಿ. ಇಲ್ಲವಾದರೆ ಒಂದು ತಟ್ಟೆಯ ಮೇಲೆ ಅಥವಾ ಒಂದು ಬಟ್ಟೆಯನ್ನು ಹಾಸಿ ಅದರ ಮೇಲೆ ಇಡಿ.ಇನ್ನೊಂದು ಮುಖ್ಯವಾದ ವಿಷಯವೇನೆಂದರೆ ಇದನ್ನು ಯಾವುದೇ ಕಾರಣಕ್ಕೂ ಓಡಾಡುವಾಗ ಕಾಲಿನಿಂದ ಒದೆಯಬಾರದು ಅಥವಾ ಕಾಲನ್ನು ತಾಕಿಸಬಾರದು.

 

 

ಮಲಗುವುದಕ್ಕಿಂತ ಮುನ್ನ ಹೀಗೆ ಮಾಡಿ ಮಲಗಿ.ನಂತರ ಬೆಳ್ಳಗ್ಗೆ ಎದ್ದು  ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿ.ಆ ಉಪ್ಪಿನ ಬಟ್ಟಲನ್ನು ತೆಗೆದುಕೊಂಡು ನಿಮ್ಮ ಮನೆಯ ಬಳಿ ಹರಿಯುವ  ನದಿ ಇದ್ದರೆ ಅಲ್ಲಿ ಬಿಟ್ಟು ಬಿಡಿ.ನದಿ ಇಲ್ಲ ಎಂದರೆ ಶುದ್ಧ ನೀರಿನಲ್ಲಿ ಮಿಶ್ರಣ ಮಾಡಿ ಯಾವುದಾದರೂ ಒಂದು ಗಿಡಕ್ಕೆ ಹಾಕಿ.ನೆನಪಿಡಿ ಮುಳ್ಳಿರುವ ಗಿಡಕ್ಕೆ ಹಾಕಬಾರದು.ಹಾಗೆ ತುಳಸಿ ಗಿಡ,ಅರಳಿ ಮರ ಮತ್ತು ಹತ್ತಿ ಮರಕ್ಕೆ ಹಾಕಬಾರದು.ನೀರನ್ನು ಗಿಡಕ್ಕೆ ಸಮರ್ಪಿಸುವಾಗ ಚಪ್ಪಲಿಯನ್ನು ಸ್ವಲ್ಪ ದೂರದಲ್ಲೇ ಬಿಟ್ಟು ಎರಡೂ ಕೈಯಿಂದ ಭಕ್ತಿಯಿಂದ ನೀರನ್ನು ಅರ್ಪಿಸಬೇಕು.ಹೀಗೆ ಮಾಡುವುದರಿಂದ ಮನೆಯಲ್ಲಿರುವ ಸಮಸ್ಯೆಗಳು ಕಷ್ಟಗಳು  ಪರಿಹಾರವಾಗುತ್ತವೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top