ಜಾಗೃತಿ

ಕರ್ನಾಟಕದಲ್ಲಿ ಎಲೆಕ್ಷನ್ ಬಂದ್ರೆ ಗೂಬೆ, ಆಮೆ ಹಾಗೂ ಕಾಡುಪಾಪಗಳಿಗೆ ಪ್ರಾಣ ತೆಗೆಯುತ್ತಾರಂತೆ..ಇದು ಘೋರ ಸತ್ಯ..?

ಕರ್ನಾಟಕದಲ್ಲಿ ಎಲೆಕ್ಷನ್ ಬಂದ್ರೆ ಗೂಬೆ, ಆಮೆ ಹಾಗೂ ಕಾಡುಪಾಪಗಳಿಗೆ ಪ್ರಾಣ ತೆಗೆಯುತ್ತಾರಂತೆ..ಇದು ಘೋರ ಸತ್ಯ..?

 

ಎಲೆಕ್ಷನ್ ಬಂದ್ರೆ ಗೂಬೆಗಳಿಗೆ ಕಾಡುಪಾಪ-ಆಮೆಗಳ ತೆಗೆಯಲಾಗುತ್ತೆ. ಇದು ಆಶ್ಚರ್ಯಕರ ಸಂಗತಿಯಾದರೂ ಘೋರ ಸತ್ಯ. ರಾಜಕೀಯದಲ್ಲಿ ತಮ್ಮ ಬೆಲೆ ಬೇಯಿಸಿಕೊಳ್ಳಲು ರಾಜಕೀಯ ವ್ಯಕ್ತಿಗಳು ಆಮೆ, ಗೂಬೆ, ಕಾಡುಪಾಪಗಳನ್ನೂ ಬಲಿಕೊಡುತ್ತಿದ್ದಾರೆ. ಹೀಗೆ ರಾಜಕೀಯದ ಚಕ್ರವ್ಯೂಹಕ್ಕೆ ಸಿಲುಕಿ ವಿಲವಿಲನೆ ಒದ್ದಾಡಿ ಆಮೆ, ಗೂಬೆ, ಕಾಡುಪಾಪ ಪ್ರಾಣಬಿಡುತ್ತಿವೆ. ಇದು ಸ್ವತಃ ವೈಲ್ಡ್ ಲೈಫ್ ಕ್ರೈಂ ಕಂಟ್ರೋಲ್ ಬ್ಯೂರೋದವರು ನೀಡಿರುವ ಶಾಕಿಂಗ್ ಸುದ್ದಿಯಾಗಿದೆ.

 

 

ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ಬೆಂಗಳೂರಿನಲ್ಲಿ ಗೂಬೆಗಳನ್ನು ಮಾರಾಟ ಮಾಡುವ ಮಾಫಿಯಾ ಜೋರಾಗಿ ನಡೆಯುತ್ತದೆ. ಕಾಡುಪಾಪ, ಆಮೆಗಳನ್ನು ಕೂಡ ಕೂಡಿ ಹಾಕಿ ರಾಜಕೀಯ ವ್ಯಕ್ತಿಗಳ ಮನೆಗೆ ಕಳಿಸೋದಕ್ಕೆ ಈ ದಂಧೆಯ ತಂಡ ಸಿದ್ದವಾಗಿ ನಿಂತಿವೆ ಎಂಬ ಅಚ್ಚರಿಯ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ.

 

 

ಆಮೆ, ಗೂಬೆ, ಕಾಡುಪಾಪಗಳಿಗೂ ಚುನಾವಣೆಗೂ ಏನು ಸಂಬಂಧ :

ಸಾಮಾನ್ಯವಾಗಿ ಗೂಬೆ ಅಂದ್ರೆ ಅಪಶಕುನ ಎಂದು ಹಲವಾರು ಭಾವಿಸಿರುತ್ತಾರೆ ಎಲೆಕ್ಷನ್ ಟೈಮ್ ನಲ್ಲಿ ಪ್ರತಿಸ್ಪರ್ಧಿಯ ವಿಶ್ವಾಸವನ್ನು ಕುಗ್ಗಿಸಲು, ಗೂಬೆಗಳ ರೆಕ್ಕೆ ಕತ್ತರಿಸಿ ಅದನ್ನು ಪ್ರತಿಸ್ಪರ್ದಿ ರಾಜಕೀಯ ವ್ಯಕ್ತಿಗಳ ಮನೆಯ ಹತ್ತಿರವೋ ಅಥವಾ ಅವರ ಕಚೇರಿಗೋ ಬಿಟ್ಟು ಬಿಡುತ್ತಾರಂತೆ. ಹೀಗೆ ಮಾದೋದ್ದ್ರಿಂದ ಧೃತಿಗೆಟ್ಟ ರಾಜಕೀಯ ವ್ಯಕ್ತಿಗಳು ಜ್ಯೋತಿಷ್ಯ, ದೇವರ ಮೊರೆ ಹೋಗುತ್ತಾರಂತೆ. ಬೆಂಗಳೂರಿನ ಶಿವಾಜಿನಗರ ಟ್ಯಾನರಿ ರೋಡ್‍ನಲ್ಲಿ ಗೂಬೆಗಳನ್ನು ಒಟ್ಟುಹಾಕುವ ಕೆಲಸವನ್ನು ಈಗಾಗಲೇ ದಂಧೆಯವರು ಮಾಡುತ್ತಿದ್ದಾರೆ ಅನ್ನೋ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

 

 

ಗೂಬೆಗಳ ರೀತಿಯಲ್ಲಿ ಎಲೆಕ್ಷನ್ ಬಂತು ಅಂದ್ರೆ ಕಾಡುಪಾಪ, ಆಮೆಗಳಿಗೂ ಕೂಡ ಸಂಕಷ್ಟ ಎದುರಾಗುತ್ತಿದೆ. ಪ್ರತಿಸ್ಪರ್ದಿಯನ್ನು ಮಾನಸಿಕವಾಗಿ ನೋಯಿಸೋಕೆ ಆಮೆ,ಕಾಡುಪಾಪಗಳನ್ನೂ ಮಾಟ ಮಂತ್ರಕ್ಕೆ ಬಳಸುತ್ತಾರೆ. ಆಮೆ ಅಥವಾ ಕಾಡುಪಾಪದ ಕೈ, ಕಾಲುಗಳನ್ನು ಹಗ್ಗ ಅಥವಾ ವೈರ್‍ನಿಂದ ಕಟ್ಟಿಹಾಕಿ ಅವಕ್ಕೆ ಆಹಾರ ನೀರು ಕೊಡದೆ ಚಿತ್ರ ಹಿಂಸೆ ಕೊಡುತ್ತಾರೆ.. ಇಲ್ಲಿ ಕಟ್ಟಿಹಾಕಿರೋ ಆಮೆ ಅಥವಾ ಕಾಡುಪಾಪ ಹಿಂಸೆ ಅನುಭವಿಸಿದಷ್ಟು ಎದುರಾಳಿಗೆ ಹಿಂಸೆಯಾಗುತ್ತದೆ ಎಂಬ ವಿಚಿತ್ರ ನಂಬಿಕೆ ಇದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top