ವಿಶೇಷ

ಈ ಸ್ಥಳದಲ್ಲಿ ಬಿಯರ್ ಕುಡಿಯೋಕೆ ಅಂತಾನೆ ಬರೋಬ್ಬರಿ 60 ಲಕ್ಷ ಜನ ಒಟ್ಟಿಗೆ ಸೇರ್ತಾರೆ..ಎಲ್ಲಿ ಗೊತ್ತಾ?

ಈ ಸ್ಥಳದಲ್ಲಿ ಬಿಯರ್ ಕುಡಿಯೋಕೆ ಅಂತಾನೆ ಬರೋಬ್ಬರಿ 60 ಲಕ್ಷ ಜನ ಒಟ್ಟಿಗೆ ಸೇರ್ತಾರೆ..ಎಲ್ಲಿ ಗೊತ್ತಾ?

 

 

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಕುಂಭಮೇಳ, ದೇವರ ಜಾತ್ರೆ ಮುಂತಾದ ಉತ್ಸವಗಳಿಗೆ ಲಕ್ಷಗಟ್ಟಲೆ ಜನ ಸೇರ್ತಾರೆ. ಆದರೆ ಇಲ್ಲಿ ಬಿಯರ್ ಕುಡಿಯೋದಕ್ಕಂತೇಲೆ ಸುಮಾರು ಅರವತ್ತು ಲಕ್ಷಕ್ಕಿಂತ ಹೆಚ್ಚು ಜನರು ಒಂದೇ ಸ್ಥಳದಲ್ಲಿ ಸೇರುತ್ತಾರೆ. ಹೌದು ಜರ್ಮನಿಯ ಮಯೂನಿಕ್ ನಲ್ಲಿ ನಡೆಯುವ ಈ ಬಿಯರ್ ಹಬ್ಬದಲ್ಲಿ ಜಲಧಾರೆ ಎಂಬಂತೆ ಬಿಯರ್‌ ಹರಿಯುತ್ತದೆ.

 

 

ನಮ್ಮಲ್ಲಿ ಜಾತ್ರೆ ನಡೆಯುವಂತೆಯೇ ಇದು ಬಿಯರ್‌ ಜಾತ್ರೆ. ಈ ವರ್ಷ 60 ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿರುವ ಈ ಉತ್ಸವದಲ್ಲಿ ಬವೇರಿಯನ್‌ ಸಂಸ್ಕೃತಿಯ ಉಡುಗೆ ಧರಿಸುವುದು ಮಾತ್ರ ಕಡ್ಡಾಯವಾಗಿರುತ್ತದೆ. ಅ.4ಕ್ಕೆ ಮ್ಯುನಿಚ್‌ನಲ್ಲಿ ಅಕ್ಟೋಬರ್‌ ಫೆಸ್ಟ್‌ ಮುಕ್ತಾಯವಾಗಲಿದೆ. ಜರ್ಮನಿ ಊಟ, ಪಾಶ್ಚಾತ್ಯ ಸಂಗೀತ… ಗಂಟಲು ತಣಿಸಲು ಮಗ್ಗುಗಟ್ಟಲೆ, ಜಗ್ಗುಗಟ್ಟಲೆ ಹೀರಲು ಬೀರು…ಉತ್ಸವ ಎಂದ ಮಾತ್ರಕ್ಕೆ ಫ್ರೀಯಾಗಿ ಬಿಯರ್ ಹಂಚುವುದಲ್ಲ… ಅದಕ್ಕೆ ಹಣ ಪಾವತಿಸಬೇಕು. ಈ ಉತ್ಸವಕ್ಕಾಗಿ ಬೆಂಗಳೂರಿಗರೂ ಭಾಗವಹಿಸುತ್ತಾರೆ.

 

 

ಬಿಯರ್ ಉತ್ಸವಕ್ಕೆ ದೇಶ-ವಿದೇಶಗಳಿಂದ ಜನರು ಆಗಮಿಸುತ್ತಾರೆ. ಇಲ್ಲಿ ಆಗಮಿಸಿದ ಪ್ರವಾಸಿಗರಿಗೆ ವಿಶೇಷ ರಿಯಾಯಿತಿ ಕೊಡಲಾಗುತ್ತದೆ. ಈ ಬಾರಿ ಉತ್ಸವಕ್ಕೋಸ್ಕರ ಹೊಸ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದೆಯಂತೆ. ಇದರ ಸಹಾಯದಿಂದ ಹತ್ತಿರದಲ್ಲಿ ಎಲ್ಲಿ ಉತ್ಸವದ ಟೆಂಟ್ ಇದೆ ಮತ್ತು ಅಲ್ಲಿ ಎಷ್ಟು ಜನರಿಗೆ ಅವಕಾಶವಿದೆ ಎಂಬ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಅಂದಹಾಗೆ ಈ ಜಾತ್ರೆಯ ಹೆಸರು ಇದರ ಹೆಸರು “ಅಕ್ಟೋಬರ್ ಫೆಸ್ಟ್” ಎಂದಿದ್ದರೂ ಸೆಪ್ಟೆಂಬರ್​ನಲ್ಲಿಯೇ ಆರಂಭವಾಗಿ ಅಕ್ಟೋಬರ್ ಶುರುವಾಗುವ ಹೊತ್ತಿಗೆ ಕೊನೆಯಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top