ಜೀವನ ಕ್ರಮ

ಮಂಗಳ ಸೂತ್ರ ಅಥವಾ ತಾಳಿಯ ಮಹತ್ವ ಏನು ಅಂತ ತಿಳ್ಕೊಳ್ಳಿ ..

ಮಂಗಳ  ಸೂತ್ರ ಅಥವಾ ತಾಳಿಯ ಮಹತ್ವ ಏನು ಎಂಬುದನ್ನು ಇಂದು ತಿಳಿದುಕೊಳ್ಳೋಣ ?

ಮಂಗಳ ಸೂತ್ರ ಅಥವಾ ತಾಳಿ ಇದನ್ನು ವಿವಾಹಿತ ಸ್ತ್ರೀಯರು ಮಾತ್ರ ಧರಿಸಬೇಕು ಎಂದು ಹಿಂದೂ ಧರ್ಮದಲ್ಲಿ ಪಾಲಿಸಲಾಗುತ್ತದೆ.ವಿವಾಹದ ಸಮಯದಲ್ಲಿ ವರ ವಧುವಿನ  ಕುತ್ತಿಗೆಗೆ ಮೂರು ಗಂಟನ್ನು ಹಾಕಿ ಕಟ್ಟುವ ಹರಿಷಿನದ  ದಾರದಲ್ಲಿ  ತಾಳಿಯನ್ನು ಅಥವಾ ಹರಿಷಿನದ ಕೊಂಬನ್ನು ಏರಿಸಿ ಕಟ್ಟಲಾಗುತ್ತದೆ.ತಾಳಿಯನ್ನು ಕಟ್ಟಿದ ನಂತರವೇ ಮದುವೆ ಮುಗಿಯಿತು ಎಂದು ಪರಿಗಣಿಸಲಾಗುತ್ತದೆ.

 

 

ನಮ್ಮ ಹಿಂದೂ ಸಂಪ್ರದಾಯದಲ್ಲಿ  ಮಂಗಳ ಸೂತ್ರಕ್ಕೆ ಇರುವ ಸ್ಥಾನ,ಮಾನ ಮತ್ತು ವಿಶೇಷವಾದ  ಮಹತ್ವವು ಇಡೀ ವಿಶ್ವದಾದ್ಯಂತ ಅದೆಷ್ಟೋ ಜನರಿಗೆ ಅದರ್ಶವಾಗಿದೆ. ಮದುವೆಯಾದ ಸ್ತ್ರೀಯರಲ್ಲಿ ಅಂದರೆ ಸುಮಂಗಲಿಯರಲ್ಲಿ ಮಂಗಳ ಸೂತ್ರವೂ ವಿಶೇಷವಾದ ಸ್ಥಾನವನ್ನು ಪಡೆದಿದೆ.

ಮಂಗಳ ಸೂತ್ರ ಎಂದರೇನು ?

ಮಂಗಳ ಎಂದರೆ ಶುಭ ಮತ್ತು ಪವಿತ್ರವಾದದ್ದು ,ಸೂತ್ರ ಎಂದರೆ ಪವಿತ್ರವಾದ  ದಾರ ಅಥವಾ ದಾರದಿಂದ ಬಂಧಿಸಲ್ಪಟ್ಟರುವ  ಗಂಟು   ಎಂದು ಅರ್ಥ.ಒಟ್ಟಾರೆ ಮಂಗಳ ಸೂತ್ರ ಎಂದರೆ ಪವಿತ್ರವಾದ ಬಂಧನ ಅಥವಾ ಸಂಬಂಧಕ್ಕೆ  ವಧು ವರರಿಬ್ಬರು ಸಹ ಒಳಗಾಗುತ್ತಾರೆ.

 

 

ಶಕ್ತಿ ಸ್ವರೂಪಿಣಿಯಾದ ಸ್ತ್ರೀಯರ ಕುತ್ತಿಗೆಯಲ್ಲಿ ಇರುವ ಮಂಗಳ ಸೂತ್ರವೂ ತಮ್ಮ ಕುತ್ತಿಗೆಯಲ್ಲಿದ್ದರೆ ದುಷ್ಟ ಶಕ್ತಿಗಳಿಂದ ತಮ್ಮ ಪತಿ ಮತ್ತು ಸಂಸಾರವನ್ನು ರಕ್ಷಿಸುತ್ತದೆ ಎಂಬ ಭಾವನೆ ಮತ್ತು ನಂಬಿಕೆ ಹಿಂದೂ ಧರ್ಮದಲ್ಲಿದೆ.

ಪತಿಯ ಆಯಸ್ಸನ್ನು ವಿಶೇಷವಾಗಿ ಹೆಚ್ಚಿಸುವ ಶಕ್ತಿ ಈ ಮಂಗಳ ಸೂತ್ರದಲ್ಲಿದೆ ಎಂದು ಭಾವಿಸಲಾಗಿದೆ.ಅಂತಹ ಪವಿತ್ರವಾದ ಮಂಗಳ ಸೂತ್ರಕ್ಕೆ  ಕೆಲವು ಮಹಿಳೆಯರು ಗೋತ್ತೋ ಗೊತ್ತಿಲ್ಲದೆಯೂ ಬಟ್ಟೆಗೆ ಹಾಕುವ ಪಿನ್ನವನ್ನು ಮಂಗಳ ಸೂತ್ರಕ್ಕೆ ಹಾಕಿಕೊಳ್ಳುತ್ತಾರೆ.ಹೀಗೆ ಕಬ್ಬಿಣದಿಂದ ಮಾಡಿದ ವಸ್ತುಗಳಿಗೆ  ಋಣಾತ್ಮಕ ಶಕ್ತಿಯನ್ನು ಸೆಳೆದುಕೊಳ್ಳುವ ಶಕ್ತಿ ಇರುತ್ತದೆ.

 

 

ಆದ್ದರಿಂದ ಮಂಗಳ ಸೂತ್ರದಲ್ಲಿರುವ ಒಳ್ಳೆಯ ಧನಾತ್ಮಕ  ಶಕ್ತಿಗಳನ್ನು ಈ ಕಬ್ಬಿಣದ ವಸ್ತುಗಳು ಸೆಳೆದುಕೊಂಡು ತಾಳಿಯನ್ನು ಬಲಹೀನವಾಗುವಂತೆ ಮಾಡುತ್ತವೆ. ಇದರಿಂದ ಪತಿಯ ಆರೋಗ್ಯದಲ್ಲಿ ಏರುಪೇರಾಗಿ ಆರೋಗ್ಯ ಹದಗೆಡುವ  ಸಂಭವವೂ ಇರುತ್ತದೆ. ಅದಲ್ಲದೇ ದಂಪತಿಗಳ ನಡುವೆ ಇರುವ ಉತ್ತಮ ಬಾಂಧವ್ಯವೂ ಸಹ ಹಾಳಾಗುತ್ತದೆ.

 

ಒಂದು ವೇಳೆ ಮಂಗಳ ಸೂತ್ರವನ್ನು ಬದಲಾಯಿಸಬೇಕೆಂದರೆ ಮೊದಲಿಗೆ ಅರಿಶಿನದ ದಾರದ ಜೊತೆ ತಾಳಿಯನ್ನು   ಏರಿಸಿ  ಕುತ್ತಿಗೆಗೆ ಹಾಕಿಕೊಂಡು   ನಂತರವೇ  ಬದಲಾಯಿಸಬೇಕು.

 

 

ಮಂಗಳವಾರ,ಶುಕ್ರವಾರದ ದಿನಗಳಲ್ಲಿ ತಾಳಿಯನ್ನು ಯಾವುದೇ ಕಾರಣಕ್ಕೂ  ಬದಲಾಯಿಸಬಾರದು.ಬುಧುವಾರ ಮತ್ತು ಗುರುವಾರದ ದಿನ ಮಾತ್ರವೇ  ಬದಲಾಯಿಸಬೇಕು.

ಹಾಗೆಯೇ ಸಂಜೆಯ ಸಮಯದಲ್ಲಿಯೂ ಸಹ ಮಂಗಳ ಸೂತ್ರವನ್ನು ಬದಲಾಯಿಸಬಾರದು.ಒಳ್ಳೆಯ ದಿನ ಮತ್ತು ಸಮಯ ನೋಡಿಕೊಂಡು ಬದಲಾಯಿಸಿ ಅಥವಾ ಕಟ್ಟಿಕೊಂಡರೆ ಒಳ್ಳೆಯದು.

 

 

ಮಂಗಳ ಸೂತ್ರವೂ ರಾತ್ರಿಯ ಸಮಯದಲ್ಲಿ  ಹಾಕಿಕೊಂಡೇ ಮಲಗಿದ್ದರೆ  ತೊಂದರೆಯಾಗುವುದು ಎಂದು ಕೆಲವು ಮಹಿಳೆಯರು ತಾಳಿಯನ್ನು ತೆಗೆದಿಟ್ಟು ಮಲಗುತ್ತಾರೆ.ಆದರೆ  ಹೀಗೆ ಮಾಡಬಾರದು. ಎಂತದ್ದೇ ಪರಿಸ್ಥಿತಿಯಲ್ಲಿಯೂ ಸಹ  ಹೀಗೆ ಮಾಡಬಾರದು.ಇದು ಘೋರ ಅಪಚಾರ ತಾಳಿಗೆ ಅವಮಾನ ಮಾಡಿದಂತಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top