ಮಾಹಿತಿ

ಚಾಣಕ್ಯನ ಪ್ರಕಾರ ನಿಮ್ ಜೀವನದ ಈ 5 ವಿಷಯವನ್ನು ಯಾರಿಗೂ ಹೇಳಲೇಬಾರದು..!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಚಾಣಕ್ಯನ ಪ್ರಕಾರ ನಿಮ್ ಜೇವನದ ಈ 5 ವಿಷಯವನ್ನು ಯಾರಿಗೂ ಹೇಳಲೇಬಾರದು..!

 

 

ಚಾಣಕ್ಯನ ಪ್ರಕಾರ ಈ ಐದು ವಿಷಯಗಳನ್ನು ಜೀವನದಲ್ಲಿ ಯಾರ ಜೊತೆಗೂ ಹಂಚಿಕೊಳ್ಳಬಾರದು.ಒಂದು ವೇಳೆ ನೀವು ಹಂಚಿಕೊಂಡರೆ ಯಶಸ್ಸು ಗಳಿಸುವುದು ತುಂಬಾ ಕಷ್ಟ.
ಅನ್ಯರ ಜೊತೆಗೆ ಕೆಲವು ವಿಷಯಗಳನ್ನು ಹಂಚಿಕೊಳ್ಳುವುದು ಅಥವಾ ಹೇಳಿಕೊಳ್ಳುವುದು ಸೂಕ್ತವಲ್ಲ.ಅಂತಹ ವಿಷಯಗಳು ಎಲ್ಲರಿಗೂ ತಿಳಿದರೆ ನಿಮ್ಮ ಯಶಸ್ಸಿಗೆ ತೊಂದರೆಯನ್ನುಂಟು ಮಾಡುತ್ತವೆ.ಕೆಲವು ವಿಷಯಗಳನ್ನು ಎಂದಿಗೂ ಹೊರಗಿನವರ ಜೊತೆ ಹೇಳಿಕೊಳ್ಳಬಾರದು.ಇವುಗಳಲ್ಲಿ ಕೆಲವನ್ನು ನಾವು ಆಗಾಗ್ಗೆ ಇತರರ ಜೊತೆ ಪ್ರಸ್ಥಾಪಿಸಿದರೆ ,ಏನು ಆಗುವುದಿಲ್ಲ ಎಂದು ಕೊಳ್ಳುತ್ತೇವೆ ? ಆದರೆ ಅದು ತಪ್ಪು ಭಾವನೆ.

 

 

ಇಂತಹ ವಿಷಯಗಳನ್ನು ಹೊರಗಿನವರ ಜೊತೆಗೆ ಚರ್ಚಿಸುವುದರಿಂದ ಸಮಾಜದಲ್ಲಿರುವ ನಮ್ಮ ಪ್ರತಿಷ್ಠೆಗೆ ಧಕ್ಕೆಯುಂಟಾಗುತ್ತದೆ. ಆಗ ಅವರು ನಮ್ಮ ಬಗ್ಗೆ ತಾತ್ಸಾರದಿಂದ ನೋಡುತ್ತಾರೆ. ಅಂತಹ ಯಾವ ವಿಷಯಗಳನ್ನು ಬಹಿರಂಗ ಪಡಿಸಬಾರದೆಂಬುದನ್ನು ಇಂದು ನಾವು ನೀವೆಲ್ಲರೂ ತಿಳಿದುಕೊಳ್ಳೋಣ.

1.ನಿಮ್ಮ ಆಸ್ತಿ ಅಂತಸ್ತಿನ ಬಗ್ಗೆ ಗರ್ವದಿಂದ ಬೇರೆಯವರ ಜೊತೆ ಬಡಾಯಿ ಕೊಚ್ಚಿ ಕೊಳ್ಳಬೇಡಿ.

 

 

ಆರ್ಥಿಕ ವಿಷಯಗಳನ್ನು ಅವಶ್ಯಕತೆ ಇಲ್ಲದಿದ್ದರೂ ಸಹ ಖಂಡಿತ ಯಾರ ಜೊತೆಗೂ ಚರ್ಚಿಸಬೇಡಿ.ಅದು ನಿಮ್ಮ ಮತ್ತು ಇತರರ ನಡುವೆ ಅಂತರವನ್ನು ಉಂಟು ಮಾಡಿ ಅವರು ನಿಮ್ಮ ಅಪಜಯ ಮತ್ತು ಅಪಕೀರ್ತಿಯನ್ನು ಬಯಸುವಂತೆ ಮಾಡುತ್ತದೆ.

2.ಕುಟುಂಬದ ಜಗಳ ಎಲ್ಲರಿಗೂ ತಿಳಿಯುವಂತೆ ಮಾಡಬೇಡಿ.


ಕುಟುಂಬ ಅಂದ ಮೇಲೆ ,ಭಿನ್ನಾಭಿಪ್ರಾಯಗಳು ಸಾಮಾನ್ಯ,ಒಬ್ಬರ ಅಭಿಪ್ರಾಯ ಇನ್ನೊಬ್ಬರಿಗೆ ಇಷ್ಟವಾಗುವುದಿಲ್ಲ.ಅಷ್ಟೇ ಮಾತ್ರಕ್ಕೆ ಈ ವಿಷಯಗಳನ್ನು ಬೇರೆಯವರ ಜೊತೆಗೆ ಚರ್ಚಿಸಿದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಂಭವ ಹೆಚ್ಚುವುದೇ ಹೊರತು ಬೇರೇನೂ ಆಗುವುದಿಲ್ಲ. ಆದ್ದರಿಂದ ನೀವು ಒಂದು ವೇಳೆ ಹೇಳಿಕೊಂಡರೆ ಇತರರು ನಿಮ್ಮನ್ನು ಕೀಳಾಗಿ ಕಾಣುವಂತೆ ನೀವೇ ಅವಕಾಶ ಮಾಡಿಕೊಟ್ಟಂತೆ ಆಗುವುದು.

3.ದಾನ ಧರ್ಮದ ಬಗ್ಗೆ ಹೇಳಿಕೊಳ್ಳಬೇಡಿ.

 


ನೀವು ಮಾಡುವ ಹಣ ಅಥವಾ ಇತರೆ ಸಹಾಯಗಳ ಬಗ್ಗೆ ಎಂದಿಗೂ ಹೊರಗೆ ಯಾರಿಗೇ ಆಗಲಿ ಹೇಳಿಕೊಳ್ಳಬೇಡಿ.ಬುದ್ಧಿವಂತರು ಎಂದಿಗೂ ಈ ವಿಷಯವನ್ನು ಹೊರಗೆ ಪ್ರಸ್ಥಾಪಿಸುವುದಿಲ್ಲ. ನಿಮ್ಮ ದಾನ ಧರ್ಮದ ಬಗ್ಗೆ ನೀವೇ ಹೇಳಿಕೊಂಡರೆ ಅದನ್ನು ಜನಗಳು ಬೇರೆ ರೀತಿಯಲ್ಲಿಯೇ ಅರ್ಥ ಮಾಡಿಕೊಳ್ಳುತ್ತಾರೆ.

4 ನಿಮ್ಮ ವಯಸ್ಸಿನ ಬಗ್ಗೆ ಹೇಳಿಕೊಳ್ಳಬೇಡಿ.

 


ಇಷ್ಟಕ್ಕೂ ವಯಸ್ಸು ಮತ್ತು ಯಶಸ್ಸಿಗೂ ಸಂಬಂಧವೇನು ? ಎಂದು ನೀವು ಅಂದುಕೊಳ್ಳಬಹುದು.ನಿಮ್ಮ ವಯಸ್ಸಿಗೆ ಸಾಮರ್ಥ್ಯಕ್ಕೆ ಸಂಬಂಧ ಇಲ್ಲದಿರಬಹುದು. ಆದರೆ ಚಿಕ್ಕ ವಯಸ್ಸಿನಲ್ಲಿರುವವರು ಹೆಚ್ಚು ಸಾಧಿಸಬಲ್ಲರು ಎಂಬ ಭಾವನೆ ನಮ್ಮಲ್ಲಿ ಕಡಿಮೆಯಾಗುವುದರಿಂದ ಧನಾತ್ಮಕವಾಗಿ ಯೋಚಿಸಲು ಆಗುವುದಿಲ್ಲ.

5.ನಿಮ್ಮ ವೈಯಕ್ತಿಕ ಮತ್ತು ಲೈಂಗಿಕ ವಿಷಯಗಳು ರಹಸ್ಯವಾಗಿರಲಿ.


ವೈಯಕ್ತಿಕ ಮತ್ತು ಲೈಂಗಿಕ ವಿಷಯಗಳನ್ನು ಹಂಚಿಕೊಳ್ಳುವವರ ಬಗ್ಗೆ ಇತರರಲ್ಲಿ ಉತ್ತಮ ಅಭಿಪ್ರಾಯ ಇರುವುದಿಲ್ಲ. ಇದು ಯಶಸ್ಸಿಗೆ ಅಡ್ಡಿಯನ್ನು ಉಂಟುಮಾಡಬಹುದು.ಆದ್ದರಿಂದ ಈ ಮೇಲೆ ಹೇಳಿರುವ ಈ ಐದು ವಿಷಯಗಳ ಬಗ್ಗೆ ಯಾರಿಗೂ ಹೇಳಿಕೊಳ್ಳಬೇಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top