fbpx
ವಿಶೇಷ

ಅಗೋರಿಗಳ್ ಬಗ್ಗೆ ಈ ಭಯಾನಕ ಸತ್ಯಗಳು ತಿಳ್ಕೊಂಡ್ರೆ ಆಶ್ಚರ್ಯ ಆಗ್ದೇ ಇರಲ್ಲ..

ಅಗೋರಿಗಳ ಬಗ್ಗೆ ನಿಮ್ಗೆ ಎಷ್ಟು ಗೊತ್ತು, ಅವರುಗಳ ಬಗ್ಗೆ ನಾವ್ ನಿಮ್ಗ್ ಪರಿಚಯ ಮಾಡಿಸ್ತೀರಿ ಬನ್ನಿ:

 

 

ಅಘೋರಿ ಎಂಬ ಪದ ಹೆಂಗ್ ಬಂತು ಅಂತ ನಿಮ್ಗ್ ಗೊತ್ತಾ?

ಅಘೋರಾ (ಅಘೋರಿ) ಅಂದ್ರೆ ಸಂಸ್ಕೃತ ಪದ. ಅದ್ರ ಅರ್ಥ ಗೊತ್ತಾ? ಎರಡು ಪದ ಸೇರಿಕೊಂಡಾಗಿರೋದೇ ಅಘೋರಿ, “ಅ” ಅಂದ್ರೆ ನಿರಾಕರಣೆ, ‘ಘೋರಾ’ ಅಂದ್ರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಇರೋನು ಅಂತ ಅಘೋರಾ ಎಂದರೆ ಜ್ಞಾನ ಮತ್ತು ಅರಿವು ಅಂತ..

ಬನ್ನಿ ಅವ್ರ್ ಬಗ್ಗೆ ನಿಮ್ಗ್ ಇನ್ನು ಹೇಳ್ತಿನಿ:

ಅಘೋರಿ ಒಂದು ಸಂಪ್ರದಾಯ ಅಘೋರಿಗಳು ನೇರ. ಸರಳ ಮತ್ತು ದಿಟ್ಟ ಮನಸ್ಸಿನವ್ರು ದೆವ್ರ್ನಾ ಅವ್ರ್ ಇಷ್ಟ ಬಂದಾಗೇ ಪೂಜೆ ಮಾಡ್ತಾರೆ.

 

 

ಅಘೋರಿ ಸಾಧುಗಳು ಶಿವನಪೂಜೆ ಮಾಡ್ತಾರೆ.ಅವ್ರು ಸತ್ಯದ ಹುಡುಕಾಟದಲ್ಲಿ ತೀವ್ರ ಹಾದಿಯನ್ನು ಅನುಸರಿಸುತ್ತಾರಂತೆ ,ಸಂಸಾರದ ಚಕ್ರದಿಂದ (ಪುನರ್ಜನ್ಮ) ಮೋಕ್ಷವನ್ನು ಪಡೆದುಕೊಳ್ಳುತ್ತಾರಂತೆ.ಅವ್ರ್ನಶಿವನ ಪ್ರತಿರೂಪ ಅಂತ ಕೂಡ ಕರೀತಾರೆ.

1.ಅಘೋರಿ ಒಬ್ಬ ೧೫೦ ವರ್ಷ ಬದುಕಿದ್ನಂತೆ ಅವ್ನ್ ಬಗ್ಗೆ ನಿಮಗ್ಗೊತ್ತಾ?

 

 

ಕಿನಾ ರಾಮ್ ಅಂತ ಒಬ್ಬ ಅಘೋರಿ 150 ವರ್ಷ ಬದುಕಿದ್ನಂತೆ 18 ನೇ ಶತಮಾನದ ಮಧ್ಯದಲ್ಲಿ ನಿಧನ ಅದ್ನಂತೆ .

 

2. ಅಘೋರಿಗಳು ಅವ್ರ್ ಕೂದಲನ್ನು ಕಟ್ ಮಾಡಲ್ವಂತೆ:

 

 

ಅಘೋರಿಗಳು ಅವ್ರ್ ಕೂದಲನ್ನು ಒಂದ್ಸಲ್ಲನು ಕಟ್ ಮಾಡಲ್ವಂತೆ ,ಉದ್ದ ಕೂದಲನ್ನು ಬೆಳೆಸಲು ಇಷ್ಟಪಡ್ತಾರಂತೆ.

3. ಇವ್ರು ಶಿವನ ತುಂಬಾ ನಂಬುತ್ತಾರೆ ಮತ್ತು ಹುಚ್ಚರ ತರ ಪ್ರೀತಿಸ್ತಾರಂತೆ

 

 

ಶಿವ ಸಂಪೂರ್ಣ, ಸರ್ವಶಕ್ತ, ಸರ್ವವ್ಯಾಪಿತ್ವ ಮತ್ತು ಸರ್ವಜ್ಞ ಅಂತ ಅಘೋರಿಗಳು ನಂಬುತ್ತಾರೆ. ಅವರ ಪ್ರಕಾರ, ಈ ವಿಶ್ವದಲ್ಲಿ ಎಲ್ಲ ಶಿವನ ಕಾರಣದಿಂದಾಗಿ ಆಗುತ್ತೆ ಅಂತ , ಸ್ತ್ರೀ ದೇವತೆಗಳ ಪೈಕಿ ಕಾಳಿ ಅವರಿಗೆ ಅತ್ಯಂತ ಪವಿತ್ರ ದೇವತೆ.

4. ತೈಲಂಗ ಸ್ವಾಮಿ ಅಂತ ಒಬ್ಬ ವ್ಯಕ್ತಿ ಶಾಪ ಕೊಟ್ತ್ರoತೆ:

 

 

ತೈಲಂಗ ಸ್ವಾಮಿ ಅಂತ ಒಬ್ಬ ಅಘೋರಿ ಅವನದ್ದೇ ಮಲದಲ್ಲಿ ಪೂಜೆ ಮಾಡಿದ್ನಂತೆ ಅವ್ನು ಪೂಜೆ ಮಾಡ್ತಿದ್ದ ರೀತಿ ನೋಡಿ ಕಾಶಿ ವಿಶ್ವನಾಥ ದೇವಸ್ಥಾನ ಪೂಜಾರಿ ಅವನ ಕಪಾಲಕೆ ಹೊಡೆದು ಹೊರಗಡೆ ತಳ್ಳಿದರಂತೆ. ನಗರ ದಂತಕಥೆಯ ಪ್ರಕಾರ, ಬನಾರಸ್ನ ಸ್ಥಳೀಯ ರಾಜನ ಕನಸಿನಲ್ಲಿ ದೇವಸ್ಥಾನದಲ್ಲಿ ಅವಮಾನವಾದ ಅಘೋರಿ ಕಾಣಿಸಿಕೊಂಡನಂತೆ ಅವನು ಶಿವನ ಅವತಾರನೇ ಆಗಿದ್ನಂತೆ ಆಮೇಲೆ ಒಂದು ದಿನ ಆ ಪೂಜಾರಿ ಹೇಗೆ ಸತ್ತ ಅಂತ ಯಾರಿಗೂ ಗೊತ್ತಾಗ್ದಿರೋ ರೀತಿ ಸತ್ತೋದನ್ನತೆ

5. ಅಘೋರಿಗಳು ಎಲ್ಲ ಕಾಯಿಲೆಗಳಿಗೂ ಮದ್ದು ಕೊಡತ್ತಾರಂತೆ:

 

 

ಅಘೋರಿಗಳು ಎಲ್ಲ ಮಾರಣಾಂತಿಕ ಏಡ್ಸ್ ಮತ್ತು ಕ್ಯಾನ್ಸರ್ ರೋಗಗಳಿಗೂ ಔಷಧ ಕೊಡ್ತ್ಹಾರಂತೆ. ಈ ಔಷಧಿಗಳನ್ನು ಸತ್ತೋಗಿರೋ ದೇಹ ಸುಟ್ಟು ಅದ್ರರಿಂದ ಮಾಡಿದ ಎಣ್ಣೆಯಿಂದ ಮಾಡಿದ್ದಂತೆ . ಅದ್ನ ‘ಮಾನವ ತೈಲಗಳು’ ಅಂತ ಕರಿತಾರೆ. ವೈಜ್ಞಾನಿಕವಾಗಿ ಪರೀಕ್ಷಿಸಲಾಗಿಲ್ಲವಾದರೂ, ಅಘೊರಿಗಳ ಪ್ರಕಾರ,ಈ ಔಷಧ ಪರಿಣಾಮಕಾರಿ.

6. ಅವ್ರು ಯಾವುದೇ ಕಾಲ,ಜಾಗ ಆದ್ರೂ ಭಯ ಪಡಲ್ವಂತೆ

 

 

ಹಿಮಾಪರ್ವತ, ಬಿಸಿ ಮರುಭೂಮಿ, ಕಾಡುಗಳ್ ಆದರೂ, ಅಘೋರಿಗಳು ತಲೆ ಕೆಡಿಸಿಕೊಳ್ಳದೆ ಇರ್ತಾರೆ

7. ಅಘೋರಿಗಳು ಸ್ಮಶಾನದಲ್ಲಿ ಶವಗಳ ಹತ್ರ ಕೂತ್ಕೊಂಡ್ ಧ್ಯಾನ ಮಾಡ್ತಾರಂತೆ:

 

 

ಅಘೋರಿಗಳು ಸ್ಮಶಾನದಲ್ಲಿ ಶವಗಳ ಹತ್ರ ಕೂತ್ಕೊಂಡ್ ಧ್ಯಾನ ಮಾಡುವಷ್ಟು ಧೈರ್ಯಶಾಲಿಗಳಂತೆ.

8.ಎಲ್ಲ ಮನುಷ್ಯರು ಅಗೋರಿಗಳ್ ಅಂತ ಅವ್ರ ನಂಬಿಕೆ ಅಂತೆ:

 

 

ಎಲ್ಲ ಮನುಷ್ಯರು ಅಗೋರಿ ಅಂತ ಅವ್ರ ನಂಬಿಕೆ. ಅವ್ರ ಪ್ರಕಾರ ಚಿಕ್ಕ ಮಗು ಅವನ ಮಣ್ಣು, ಕೊಳಕು ಮತ್ತು ಆಟಿಕೆಗಳು ಮತ್ತು ನಾಟಕಗಳ ನಡುವೆ ಬೆಳೀತಿದ್ದಂತೆ ಅವನ ಮನೆ ಸುತ್ತಾ ಮುತ್ತ ಜನ ಕಲಿಸೋತರ ಬೆಳ್ಕೋಡು ಹೋಗ್ತಾನಂತೆ.

9.ಅವ್ರು ಬೆತ್ತಲಾಗಿರೋಕೆ ಇಷ್ಟ ಪಡ್ತಾರಂತೆ:

 

 

ಅಘೋರಿಗಳಿಗೆ ನಗ್ನವಾಗುವುದರಲ್ಲಿ ಯಾವುದೇ ಹಿಂಜರಿಕೆ ಇಲ್ವಂತೆ. ಹೆಣನ ಸುಟ್ಟು ಅದ್ರಿಂದ ಬರೋ ಬೂದಿನ
ಮೈಗೇ ಹಚ್ಕೊಳ್ತಾರಂತೆ.

10.ಅವ್ರು ಯಾರ್ಮೇಲೂ ಶತ್ರುತ್ವ ಮಾಡಲ್ವಂತೆ:

 

 

ಅವರ್ಗಳ ಪ್ರಕಾರ ಶತ್ರುತ್ವ ಬೆಳಸ್ಕೊಂಡ್ರೆ ಮೋಕ್ಷ ಸಿಗಲ್ಲ ಅಂತ ಅವ್ರ ನಂಬಿಕೆ, ಅದಕ್ಕೆ ಅವ್ರು ಜಾತಿ,ಧರ್ಮ,ಭಾಷೆ ,ವರ್ಣಗಳ ಮಧ್ಯ ಭೇದ ಮಾಡಲ್ವಂತೆ,

11.ಅವ್ರು ಹೆಣಗಳ್ನ ತಿಂತ್ತಾರಂತೆ:

 

 

ಈ ಅಘೋರಿಗಳು ಸತ್ತ ಹೆಣವನ್ನು ತಿನ್ನುತ್ತಾರಂತೆ

12.ಈ ಅಘೋರಿಗಳು ಹೆಣಗಳ ಮೂಳೆಗಳನ್ನ ವಡವೆಗಳ ತರ ಹಾಕೋತ್ತಾರಂತೆ:

 

 

ಅಘೋರಿಗಳು ಹೆಣಗಳ ಮೂಳೆಗಳನ್ನ ಆಭರಣಗಳ ತರ ಹಾಕೋತಾರಂತೆ ಜೊತೆಗೆ ಕೈಯಲ್ಲಿ ಒಂದು ತಲೆ ಬುರುಡೆ ಹಿಡ್ಕೊತಾರಂತೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top