fbpx
ದೇವರು

ಆಮೆ ವಿಗ್ರಹ ಮನೆಯಲ್ಲಿ ಇಟ್ಟು ಪೂಜೆ ಮಾಡಿದ್ರೆ ಧನಲಾಭ ಸಿಗುತ್ತೆ ಅಂತಾ ಶಾಸ್ತ್ರ ಹೇಳುತ್ತೆ.

ಯಾವ ರೀತಿಯ ಆಮೆಯನ್ನು ಮನೆಯಲ್ಲಿ ಯಾವ ಸ್ಥಳದಲ್ಲಿ  ಇಟ್ಟು ಪೂಜಿಸಿದರೆ ಒಳ್ಳೆಯದು.

 

 

ನಮ್ಮ ಮನೆಯಲ್ಲಿ ಯಾವ ರೀತಿಯ ಆಮೆಯ ಪ್ರತಿಮೆಯನ್ನು ಇಟ್ಟುಕೊಂಡರೆ ನಮಗೆ ಧನಪ್ರಾಪ್ತಿ, ಅದೃಷ್ಟ ಪ್ರಾಪ್ತಿಯಾಗುತ್ತದೆ ಎಂದು ಈಗ ನಾವು ತಿಳಿಯೋಣ.ವಾಸ್ತು ಶಾಸ್ತ್ರದ ಪ್ರಕಾರ ಆಮೆಯನ್ನು ಅದೃಷ್ಟದ ಸಂಕೇತವಾಗಿ ಪರಿಗಣಿಸಲಾಗುತ್ತದೆ ಆದ್ದರಿಂದಲೇ ದೇವಸ್ಥಾನದಲ್ಲಿಯೂ ಸಹ ಆಮೆಯ ಪ್ರತಿಮೆಯನ್ನು ಹೆಚ್ಚಾಗಿ ನೋಡಬಹುದು.

ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ,ಸಕಾರಾತ್ಮಕ ಶಕ್ತಿಯನ್ನು ಆಕರ್ಷಣೆ ಮಾಡುವ ಅದ್ಬುತ ಶಕ್ತಿ ಆಮೆಯ ಪ್ರತಿಮೆಗೆ ಇದೆ.ಆಮೆಯ ಪ್ರತಿಮೆಯನ್ನು ಉತ್ತರ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು.ಅಷ್ಟೇ ಅಲ್ಲದೆ ಉತ್ತರ ಮತ್ತು ಪೂರ್ವ ದಿಕ್ಕು ಬೇರೆ ಯಾವ ಮೂಲೆಯ ಸ್ಥಳದಲ್ಲಿ ಆಮೆಯ ಪ್ರತಿಮೆಯನ್ನು ಇಟ್ಟರೆ ಲಕ್ಷ್ಮೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದು.

 

 

ಸಂತಾನ ಭಾಗ್ಯ ಬೇಕು ಎನ್ನುವವರು ಆಮೆಯ ಬೆನ್ನಿನ ಮೇಲೆ ತನ್ನ ಮಕ್ಕಳನ್ನು ಹೊತ್ತುಕೊಂಡಿರುವ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಂಡರೆ ಅವರ ಜಾತಕದಲ್ಲಿನ ದೋಷಗಳು ಏನಾದರೂ ಇದ್ದರೆ ಅದು ದೂರವಾಗಿ ಸಂತಾನ ಪ್ರಾಪ್ತಿ ವೇಗವಾಗಿ ಸಿಗುತ್ತದೆ.

ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸುತ್ತಾ ಇರುವವರು,ಆದಾಯ ಸರಿಯಾಗಿ ಇಲ್ಲದವರು, ಆರ್ಥಿಕವಾಗಿ ವೃದ್ಧಿ ಲಭಿಸಬೇಕು ಎನ್ನುವವರು.ಸ್ಪಟಿಕ ಆಮೆಯ ಪ್ರತಿಮೆಯನ್ನು ವ್ಯಾಪಾರ ಸ್ಥಳದಲ್ಲಿ ನಗದು ಇಡುವ ಜಾಗದಲ್ಲಿ ಇದನ್ನು ಇಟ್ಟುಕೊಂಡರೆ ಉತ್ತಮ .

 

 

ಯಾವಾಗಲೂ ಧನನಷ್ಟವನ್ನು ನೋಡುತ್ತಿರುವವರು,ಮನೆಯಲ್ಲಿ ಅಶಾಂತತೆಯಿಂದ ಬಳಲುತ್ತಿರುವವರು,ಲೋಹದ ಆಮೆಯ ಪ್ರತಿಮೆಯನ್ನು ಮನೆಯಲ್ಲಿ ಅಥವಾ ವ್ಯಾಪಾರದಲ್ಲಿ ಇದನ್ನು ಇಟ್ಟುಕೊಂಡರೆ ಉತ್ತಮ.ಇದನ್ನು ಮಲಗುವ ಕೋಣೆಯಲ್ಲಿಯೂ ಸಹ ಇಟ್ಟುಕೊಳ್ಳಬಹುದು.

ಮತ್ತೆ ಮತ್ತೆ ಅನಾರೋಗ್ಯ ಸಮಸ್ಯೆ ಬರುತ್ತಿದ್ದರೆ ಮಣ್ಣಿನಿಂದ ಮಾಡಿದ ಆಮೆಯ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು.ಹೀಗೆ ಇಟ್ಟುಕೊಳ್ಳುವುದರಿಂದ ಆರೋಗ್ಯ ಚೇತರಿಸಿಕೊಳ್ಳುತ್ತದೆ.

ದಂಪತಿಗಳು ಮದ್ಯೆ ವೈಮನಸ್ಯ ಮೂಡದಂತೆ ಇರಬೇಕು ಅಂದರೆ  ಅವರ ಜೊತೆಗೆ ಆಮೆಯ ಪ್ರತಿಮೆಯನ್ನು ಇಟ್ಟುಕೊಂಡರೆ ಉತ್ತಮ.

 

 

ಹೊಸದಾಗಿ ಕೆಲಸವನ್ನು ಪ್ರಾರಂಭ ಮಾಡುವವರು ಬೆಳ್ಳಿಯಿಂದ ಮಾಡಿದ  ಆಮೆಯ ಪ್ರತಿಮೆಯನ್ನು ವ್ಯಾಪಾರ ಮಾಡುವ ಸ್ಥಳದಲ್ಲಿ ಇಟ್ಟುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿಯನ್ನು ಆಕರ್ಷಣೆ  ಆಗಿ ಧನಪ್ರಾಪ್ತಿಯೂ ಸಹ ಸಿಗುತ್ತದೆ.

ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಾಗಬೇಕು ಅಂದರೆ ,ಓದುವ ಜಾಗದಲ್ಲಿ ಅಥವಾ ನೀವಿರುವ ಕೋಣೆಯಲ್ಲಿ ಹಿತ್ತಾಳೆಯಿಂದ ಮಾಡಿದ ಆಮೆಯ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಂಡರೆ ಮಕ್ಕಳು ಬುದ್ಧಿವಂತರು ಆಗುತ್ತಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top