fbpx
ಆರೋಗ್ಯ

ದಪ್ಪ ಆಗ್ಬೇಕು ಅನ್ನೋರು ಹೀಗೆ ಮಾಡಿ

ದಪ್ಪ ಆಗ್ಬೇಕು ಅನ್ನೋರು ಹೀಗೆ ಮಾಡಿ

ಮೊಟ್ಟೆ :

ಮೊಟ್ಟೆಯಲ್ಲಿ ಹೆಚ್ಚಿನ ಕ್ಯಾಲೊರಿ ,ಪ್ರೋಟೀನ್ , ಕೊಬ್ಬ್ಬಿನ ಅಂಶವಿದ್ದು ದೇಹದ ತೂಕ ಹೆಚ್ಚು ಮಾಡಿಕೊಳ್ಳಲು ಬಯಸುವವರು ತಿನ್ನಬಹುದು ,ಮೊಟ್ಟೆಯ ಬಿಳಿ ಭಾಗವನ್ನು ತಿನ್ನಬಹುದು ,ದಿನಕ್ಕೆ ನಾಲ್ಕು ಮೊಟ್ಟೆ ತಿನ್ನಿ ನಿಮ್ಮ ತೂಕದಲ್ಲಿ ಹೆಚ್ಚಳ ಕಂಡುಬರುತ್ತದೆ.

ಹಾಲು ಮತ್ತು ಬಾಳೆ ಹಣ್ಣು :

ಬಾಳೆ ಹಣ್ಣಿನಲ್ಲಿ ಕ್ಯಾಲೊರಿ ಹೆಚ್ಚಿನ ಪ್ರಮಾಣದಲ್ಲಿದೆ ಹಾಗು ಕಾರ್ಬೋ ಹೈಡ್ರೆಟ್ಸ್ , ಪೊಟ್ಯಾಸಿಯಂ ಸಹ ಇದೆ ಇದು ದೇಹಕ್ಕೆ ಹೆಚ್ಚಿನ ಶಕ್ತಿ ನೀಡಲು ಸಹಾಯಕ ,
ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ದಿನ ಬೆಳಗ್ಗೆ ಒಂದು ಲೋಟ ಹಾಲು ಮತ್ತು ಒಂದು ಬಾಳೆ ಹಣ್ಣು ತಿನ್ನಿ .

ಮಾವಿನ ಹಣ್ಣು :

ದಿನಕ್ಕೆ ಒಂದು ಮಾವಿನ ಹಣ್ಣನ್ನು ಮೂರು ಹೊತ್ತು ತಿನ್ನಿ ಹೀಗೆ ಮಾಡಿದ ಕೂಡಲೇ ಒಂದು ಲೋಟ ಹಾಲು ಕುಡಿಯುವುದನ್ನು ಮರೆಯಬೇಡಿ

ಆಲೂ ಗಡ್ಡೆ :

ಆಲೂ ಗಡ್ಡೆ ಯಲ್ಲಿ ಕಾರ್ಬೋ ಹೈಡ್ರೆಟ್ಸ್ ಹೆಚ್ಚಾಗಿದ್ದು ದೇಹದ ತೂಕವನ್ನು ಹೆಚ್ಚುಮಾಡುತ್ತದೆ , ಬೇಕಾದರೆ ಸ್ವಲ್ಪ ಬೆಣ್ಣೆಯನ್ನು ಸೇರಿಸಿ ತಿನ್ನಬಹುದು ,
ಆದರೆ ವಾರಕ್ಕೆ ಎರಡು ದಿನ ತಿಂದರೆ ಉತ್ತಮ

ಅಂಜೂರ ಮತ್ತು ಒಣ ದ್ರಾಕ್ಷಿ :

5 -6 ಅಂಜೂರ ಮತ್ತು 5 -6 ಒಣ ದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಹಾಗು ರಾತ್ರಿ ಮಲಗುವ ಮುನ್ನ ತಿನ್ನಬೇಕು .

ಬೆಣ್ಣೆ

ಒಂದು ಚಮಚ ಬೆಣ್ಣೆಯನ್ನು ಒಂದು ಚಮಚ ಸಕ್ಕರೆಯ ಜೊತೆ ಮಿಶ್ರಣ ಮಾಡಿ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುಂಚೆ ತಿಂದರೆ ಒಳ್ಳೆಯದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

super tipsy thank u sir

To Top