fbpx
ಆರೋಗ್ಯ

ಕ್ರಿಮಿ – ಕೀಟಗಳು ಕಿವಿಯೊಳಗೆ ಹೋದ್ರೆ ಹೇಗೆ ತೆಗೆಯೋದು?

ಕ್ರಿಮಿ – ಕೀಟಗಳು ಕಿವಿಯೊಳಗೆ ಹೋದ್ರೆ ಹೇಗೆ ತೆಗೆಯೋದು

ಕಿವಿಯ ಒಳಗೆ ಪತಂಗಗಳು, ಜಿರಳೆ , ಜೀರುಂಡೆ ಮುಂತಾದವು ನೀವು ನಿದ್ದೆ ಮಾಡುವಾಗ ಅಥವಾ ಹೊರಾಂಗಣ ಚಟುವಟಿಕೆಗಳಲ್ಲಿ ಇರುವಾಗ ಮೆಲ್ಲನೆ ಕಿವಿಯೊಳಗೆ ಸೇರಿಕೊಳ್ಳುತ್ತದೆ  ಇದು ಮುಂದೆ ದೊಡ್ಡದಾಗಿ ಕಿವುಡುತನ, ಕಿವಿ ಹಾನಿ, ಮತ್ತು ಸೋಂಕನ್ನು ಉಂಟು ಮಾಡುತ್ತದೆ.

ನಿಮ್ಮ ಕಿವಿಯಲ್ಲಿ ಹುಳು ಇದ್ದರೆ ನೋವು, ಊತ, ರಕ್ತ ಸೋರುವುದು , ಕೆರೆತ , ಕಚ್ಚುವಿಕೆ ಅಥವಾ ಕುಟುಕುವ ಅನುಭವವನ್ನು ಹೊಂದಬಹುದು ಇದು ಮುಂದೆ ಹೆಚ್ಚಾಗಿ ಕಿವುಡುತನ ಅಥವಾ ಶಾಶ್ವತ ಅಂಗ ಕಳೆದುಕೊಳ್ಳುವಿಕೆಗೂ ಕಾರಣವಾಗುತ್ತದೆ.

ಹುಳು ಒಳಗೆ ಹೊಕ್ಕಿದಾಗ ಶಾಂತವಾಗಿರಿ ಭಯದಲ್ಲಿ ಕಿರುಚಾಡಿದರೆ ಹುಳು ಒಳಗೆ ಹೋಗಿ ನಿಮ್ಮ ಕಿವಿಯನ್ನು ಸಂಪೂರ್ಣ ಹಾನಿ ಮಾಡಬಹುದು .

ಹತ್ತಿ ಇಡುವುದು, ಪಿನ್ ನಿಂದ ಚುಚ್ಚುವುದು ಮಾಡಬೇಡಿ, ಕಾಟನ್ ಬಡ್ ಗಳನ್ನು ಉಪಯೋಗಿಸಬೇಡಿ ಇದು ಹುಳುವನ್ನು ಮತ್ತಷ್ಟು ಒಳಗೆ ತಳ್ಳಿ, ಕಿವಿಯ ನರಗಳಿಗೆ ಹಾನಿಯುಂಟುಮಾಡುತ್ತದೆ.


ಟಾರ್ಚ್ ಸಹಾಯದಿಂದ ಹುಳುವನ್ನು ಎಲ್ಲಿದೆ ಹಾಗು ಯಾವ ರೀತಿಯದ್ದು ಎಂದು ಕಂಡುಹಿಡಿಯಲು ಪ್ರಯತ್ನ ಮಾಡಿ , ಹುಳುವು ಕಾಣಿಸಲೇ ಇಲ್ಲ ಎಂದರೆ ನಿಮ್ಮ ಡಾಕ್ಟರ್ ಬಳಿ ಹೋಗಿ ತೆಗೆಸಿಕೊಳ್ಳಿ.

ಇಲ್ಲವಾದರೆ ಕಿವಿಯನ್ನು ಕೆಳಗೆ ಬಗ್ಗಿಸಿ ಕಿವಿಯ ಕೆಳ ತುದಿಯನ್ನು ನಿಧಾನವಾಗಿ ಅಲುಗಾಡಿಸಿ ಹೀಗೆ ಮಾಡಿದರೆ ಹುಳು ಕೆಳಗೆ ಬೀಳುತ್ತದೆ .

ಹುಳು ಕೆಳಗೆ ಬಿದ್ದಿಲ್ಲ ವಾದರೆ ಸ್ವಲ್ಪ ಬಿಸಿ ನೀರನ್ನು ಬಲ್ಬ್ ಸಿರಿಂಜಿ ನಲ್ಲಿ ತುಂಬಿಕೊಂಡು ಕಿಯಿಯೊಳಗೆ ಬಿಟ್ಟುಕೊಳ್ಳಿ , ನೀರು ಒಳಗೆ ಹೋದ ಮೇಲೆ ಮತ್ತೆ ಕಿವಿಯನ್ನು ನೀರು ಹೊರಗೆ ಬರಲು ಬಗ್ಗಿಸಿ  ಹುಳು ನೀರಿನಲ್ಲಿ ಬಂದು ಕೆಳಗೆ ಬೀಳಬಹುದು.

ಒಂದೆರಡು ಹನಿ ,ಮಿನರಲ್ ಎಣ್ಣೆ ,ಆಲಿವ್ ಎಣ್ಣೆ ಅಥವಾ ಬೇಬಿ ಆಯಿಲ್ ಕಿವಿಗೆ ಬಿಟ್ಟುಕೊಳ್ಳಿ ಇದು ನಿಮ್ಮ ಕಿವಿಯನ್ನು ಕೀಟಗಳ ಕಚ್ಚುವಿಕೆಯಿಂದ ರಕ್ಷಣೆ ಮಾಡುತ್ತದೆ .

ಕಿವಿಯೊಳಗೆ ಹುಳುವಿನ ಇನ್ನಾವುದಾದರೂ ಭಾಗ ಉಳಿದಿದೆಯಾ ಎಂದು ಪರೀಕ್ಷೆ ಮಾಡಿಸಿಕೊಳ್ಳಿ ,ಇದ್ದರೆ ಅದನ್ನು ತೆಗೆದು ಹಾಕಿ.

ಇಷ್ಟಾದರೂ ಹುಳು ಹೊರಗೆ ಬಂದಿಲ್ಲ ಎಂದಾದ್ರೆ ಡಾಕ್ಟರ್ ರ ಬಳಿ ಸಕ್ಷನ್ ಮಾಡಿಸಿಕೊಂಡು ಹುಳು ತೆಗೆದು ಹಾಕಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top